ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಲ್ಲೂ ಸಾರ್ಥಕತೆ; ನಾಲ್ವರ ಜೀವಕ್ಕೆ ಬೆಳಕಾದ ಇಂಜಿನಿಯರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 11; ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರ್‌ ಸಾವಿನಲ್ಲೂ ಸಾರ್ಥಕರೆ ಮೆರೆದಿದ್ದಾರೆ. ಅಂಗಾಂಗ ದಾನದ ಮೂಲಕ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ.

28 ವರ್ಷದ ಚಂದನ್ ಮಲ್ಲಪ್ಪ ಅಪಘಾತದಲ್ಲಿ ಗಾಯಗೊಂಡು ತಲೆಗೆ ತೀವ್ರವಾದ ಪೆಟ್ಟಾಗಿತ್ತು. ಚಿಕಿತ್ಸೆ ಬಳಿಕವೂ ಅವರು ಚೇತರಿಸಿಕೊಳ್ಳಲಿಲ್ಲ. ವೈದ್ಯರು ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು.

 ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬ

ಚಂದನ್ ಮಲ್ಲಪ್ಪ ಅವರ ಹೃದಯದ ಕೊಳವೆ, ಎರಡು ಕಿಡ್ನಿ ಸೇರಿದಂತೆ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡಲಾಗಿದೆ. ಚಂದನ್ ಅವರ ಅಂಗಾಂಗವನ್ನು ನಾಲ್ವರಿಗೆ ಕಸಿ ಮಾಡಲಾಗುತ್ತದೆ. ಇದರಿಂದಾಗಿ ನಾಲ್ವರಿಗೆ ಹೊಸ ಜೀವನ ಸಿಗಲಿದೆ.

 ನೋವಿನ ನಡುವೆಯೂ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು ನೋವಿನ ನಡುವೆಯೂ ಯುವಕನ ಅಂಗಾಂಗ ದಾನ ಮಾಡಿದ ಕುಟುಂಬಸ್ಥರು

 28 Year Engineer Donated Organs After Brain Dead

ಗಾಯಗೊಂಡಿದ್ದ ಚಂದನ್ ಮಲ್ಲಪ್ಪರನ್ನು ಅಪೋಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಕೃತಕ ಉಸಿರಾಟದ ಬೆಂಬಲದೊಂದಿಗೆ ಇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಚಂದನ್ ಮೃತಪಟ್ಟರು.

ಅಪಘಾತದಲ್ಲಿ ಸಾವಿಗೀಡಾದ ಯುವಕನ ಅಂಗಾಂಗ ರವಾನೆಅಪಘಾತದಲ್ಲಿ ಸಾವಿಗೀಡಾದ ಯುವಕನ ಅಂಗಾಂಗ ರವಾನೆ

ವೈದ್ಯರು ಅಂಗಾಂಗ ದಾನ ಹಾಗೂ ದಾನದ ಮಹತ್ವವನ್ನು ಕುಟುಂಬಸ್ಥರಿಗೆ ವಿವರಿಸಿದರು. ಕುಟುಂಬದವರ ಒಪ್ಪಿಗೆ ಬಳಿಕ ಅಂಗಾಂಗಳನ್ನು ದಾನ ಮಾಡಲಾಗಿದೆ.

ಅಂಗಾಂಗ ದಾನ; ಚಂದನ್ ಮಲ್ಲಪ್ಪ ಅವರ ಒಂದು ಕಿಡ್ನಿ, ಮೇದೋಜೀರಕ ಗ್ರಂಥಿ ಮತ್ತು ಯಕೃತ್ ಅಪೋಲೊ ಬಿಜಿಎಸ್ ಆಸ್ಪತ್ರೆ ಮೈಸೂರಿಗೆ ದಾನ ಮಾಡಲಾಗಿದೆ.

ಒಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಹಾರ್ಟ್‌ ವಾಲ್ಟ್ಸ್‌ಗಳನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾನ ಮಾಡಲಾಗಿದೆ.

English summary
Engineer Chandan Mallppa (28) who injured in road accident dies in Mysuru city private hospital announced brain-dead. Family members donated organs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X