ಸಿಎಂ, ಯತೀಂದ್ರ ಸೇರಿ ಮೈಸೂರು ಜಿಲ್ಲೆಯಲ್ಲಿ 21 ನಾಮಪತ್ರ ಸಲ್ಲಿಕೆ

ಮೈಸೂರು, ಏಪ್ರಿಲ್ 20: ಮೈಸೂರಿನಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದ್ದು, ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಹನ್ನೊಂದು ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪುತ್ರ ಡಾ.ಯತೀಂದ್ರ ಸೇರಿದಂತೆ ಇಪ್ಪತ್ತೊಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್‍ನ ಕೆ. ವೆಂಕಟೇಶ್, ಕೃಷ್ಣರಾಜನಗರದಿಂದ ಕಾಂಗ್ರೆಸ್‍ನ ರವಿಶಂಕರ್ ಡಿ, ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಡಿ.ಮರೀಸ್ವಾಮಿ ನಾಯಕ, ಡೆಮೋಕ್ರೆಟಿಕ್ ಪ್ರಜಾ ಕ್ರಾಂತಿ ಪಾರ್ಟಿ ಸೆಕ್ಯಲರಿಸ್ಟ್ ನಿಂದ ಕೆ.ಚಂದ್ರಶೇಖರ್, ಕಾಂಗ್ರೆಸ್‍ನಿಂದ ಹೆಚ್.ಪಿ. ಮಂಜುನಾಥ್, ಹೆಚ್.ಡಿ. ಕೋಟೆಯಲ್ಲಿ ಬಿಜೆಪಿಯಿಂದ ಸಿದ್ದರಾಜು, ಕಾಂಗ್ರೆಸ್‍ನಿಂದ ಅನಿಲ್‍ ಕುಮಾರ್, ಜೆಡಿಎಸ್‍ನಿಂದ ಚಿಕ್ಕಣ್ಣ ನಾಮಪತ್ರ ಸಲ್ಲಿಸಿದ್ದಾರೆ.

21 nomination files in Mysore district, including CM and Yatindra

ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ದಯಾನಂದ ಮೂರ್ತಿ, ಕಾಂಗ್ರೆಸ್‍ನಿಂದ ಕಳಲೆ ಕೇಶವಮೂರ್ತಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸಿದ್ದರಾಮಯ್ಯ, ಜೆಡಿಎಸ್‍ನಿಂದ ಜಿ.ಟಿ.ದೇವೇಗೌಡ, ಪಕ್ಷೇತರರಾಗಿ ಪಿ.ಸುರೇಶ್‍ ನಾಯಕ್, ಕೆ.ಸಿ.ನಂದೀಶ್ ನಾಮಪತ್ರವನ್ನು ಸಲ್ಲಿಸಿದ್ದಾರೆ.

21 nomination files in Mysore district, including CM and Yatindra

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ರವಿ ಎನ್, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ರಿಪಬ್ಲಿಕನ್ ಸೇನಾ ಪಾರ್ಟಿಯಿಂದ ಯೋಗೇಂದ್ರ ಪಿ.ಬಿ, ಕಾಂಗ್ರೆಸ್‍ನಿಂದ ಡಾ.ಯತೀಂದ್ರ ಸಿದ್ದರಾಮಯ್ಯ, ಪಕ್ಷೇತರರಾಗಿ ಕೆ.ಎಸ್. ಶಿವಕುಮಾರ, ಟಿ.ನರಸಿಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಬಿ.ಸಿ. ಶಾಂತರಾಜು, ಜೆಡಿಎಸ್‍ನಿಂದ ಅಶ್ವಿನ್ ಕುಮಾರ್ ಎಂ. ಅವರು ನಾಮಪತ್ರ ಸಲ್ಲಿಸಿದ್ದಾರೆ.

21 nomination files in Mysore district, including CM and Yatindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+