ಅಡ್ಡಾದಿಡ್ಡಿ ಬೈಕ್ ಚಾಲನೆ:ಬಿಬಿಎಂ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮೈಸೂರು, ಫೆಬ್ರವರಿ 11:ವಿದ್ಯಾರ್ಥಿಯೊಬ್ಬ ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡಿಕೊಂಡು ಬರುವ ವೇಳೆ ನಿಯಂತ್ರಣ ಕಳೆದುಕೊಂಡು ಬೈಕಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಹುಣಸೂರು ರಸ್ತೆಯ ಕಲಾಮಂದಿರ ಅಪಾರ್ಟ್ ಮೆಂಟ್ ಎದುರಿನ ತಿರುವಿನಲ್ಲಿ ನಡೆದಿದೆ.

ಮೃತನನ್ನು ಕೇರಳ ಮೂಲದ ಜೋಷಿ ಎಂಬುವವರ ಪುತ್ರ ಆನಂದ್(21) ಎಂದು ಗುರುತಿಸಲಾಗಿದೆ. ಆನಂದ್ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದರು.

20-year-old boy dead in road accident at Mysuru

ಶನಿವಾರ ರಾತ್ರಿ ಕಲಾಮಂದಿರದ ಕಡೆಯಿಂದ ಪಡುವಾರಹಳ್ಳಿ ಕಡೆಗೆ ತೆರಳುವಾಗ ಘಟನೆ ನಡೆದಿದೆ. ವಿವಿಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ :ವ್ಯಕ್ತಿ ಸಾವು
ಮತ್ತೊಂದು ಪ್ರಕರಣದಲ್ಲಿ ವಾಟರ್ ಟ್ಯಾಂಕ್ ಮಗುಚಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದ ಬಳಿ ನಡೆದಿದೆ.

20-year-old boy dead in road accident at Mysuru

ಮೃತನನ್ನು ಮೂಲತಃ ಮಂಡ್ಯ ಜಿಲ್ಲೆ ಮತ್ತಹಳ್ಳಿ ಗ್ರಾಮದ ನಿವಾಸಿ ಅಭಿಷೇಕ್ (22) ಎಂದು ಗುರುತಿಸಲಾಗಿದೆ. ಅಭಿಷೇಕ್ ವಾಟರ್ ಟ್ಯಾಂಕರ್ ನ ಕ್ಲೀನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ರಸ್ತೆ ಕಾಮಗಾರಿಗೆ ನೀರು ಸರಬರಾಜು ಮಾಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ತಡರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+