ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಬ್ಲಾಸ್ಟ್‌ನಲ್ಲಿ ಹೊಸ ಉಗ್ರ ಸಂಘಟನೆಯ ಹೆಸರು

By ವಿಕಾಸ್ ನಂಜಪ್ಪ
|
Google Oneindia Kannada News

ಮೈಸೂರು, ಆಗಸ್ಟ್ 04: ಮೈಸೂರು ಕೋರ್ಟ್ ಆವರಣದ ಸಾರ್ವಜನಿಕ ಶೌಚಾಲಯದಲ್ಲಿ ಆಗಸ್ಟ್ 1 ರಂದು ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ತನಿಖೆ ತೀವ್ರಗೊಂಡಿದೆ. ಬಾಂಬ್ ಇಟ್ಟಿದ್ದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದರೂ ಬಾಂಬ್ ಇಟ್ಟವರು ಮಾತ್ರ ಇಂಥ ಕೆಲಸದಲ್ಲಿ ನಿಷ್ಣಾತರು ಎಂಬುದು ಗೊತ್ತಾಗಿದೆ.

ಆಂಧ್ರ ಪ್ರದೇಶದ ಚಿತ್ತೂರು(ಏಪ್ರಿಲ್ 7) ಮತ್ತು ಕೇರಳದ ಕೋಲಂ ( ಜೂನ್ 15) ಕೋರ್ಟ್ ನ ಹೊರ ಆವರಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಇದಕ್ಕೂ ಅನೇಕ ಹೋಲಿಕೆಗಳು ಕಂಡುಬಂದಿವೆ.[ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]

In Mysuru blast probe, new terror outfit Base Movement emerges

ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡ ಇರುವ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಅದರೊಂದಿಗೆ ಅಲ್ -ಉಮಾ ಸಂಘಟನೆಯ ಕೃತ್ಯ ಎಸಗಿರಬಹುದು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ದಿಕ್ಕು ತಪ್ಪಿಸಲು ಸಂಘಟನೆ ತನ್ನನ್ನು ತಾನು 'ಬೇಸ್ ಮೂಮೆಂಟ್' ಎಂದು ಕರೆದುಕೊಂಡಿದೆ.

ತನಿಖೆ ಯಾವ ರೀತಿ?
ಚಿತ್ತೂರಿನಲ್ಲಿ ಸ್ಫೋಟ ನಡೆದ ನಂತರ ಅಮೆರಿಕದಿಂದ ಹತನಾದ ಉಗ್ರ ಒಸಾಮಾ ಬಿನ್ ಲಾಡೆನ್ ಭಾವಚಿತ್ರ ಇರುವ ಪತ್ರವೊಂದು ರವಾನೆಯಾಗಿದ್ದು ಸುದ್ದಿಯಾಗಿತ್ತು, ಆದರೆ ಕೋಲಂ ಸ್ಫೋಟದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿರಲಿಲ್ಲ.[ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ]

ಇದೆಲ್ಲವನ್ನು ಆಧರಿಸಿಕೊಂಡಿರುವ ಕರ್ನಾಟಕ ಪೊಲೀಸರು ಆಂಧ್ರ ಮತ್ತು ಕೇರಳದಲ್ಲಿ ಪ್ರಕರಣದ ಮೂಲ ಹುಡುಕುತ್ತಿದ್ದಾರೆ. ಅಲ್-ಉಮಾ ಸಂಘಟನೆಯ ಮೂಲ ನೆಲೆಗಳನ್ನು ಹುಡುಕಾಡುತ್ತಿದ್ದಾರೆ.

ಮಲ್ಲೇಶ್ವರಂ ಬಾಂಬ್ ಸ್ಫೋಟದಲ್ಲಿಯೂ ಅಲ್-ಉಮಾ ಸಂಘಟನೆಯ ಹೆಸರು ಕೇಳಿ ಬಂದಿತ್ತು. ಆದರೆ ಅದೇ ಸಂಘಟನೆ ಇದೀಗ 'ಬೇಸ್ ಮೂಮೆಂಟ್' ಎಂಬ ಹೆಸರಿನಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂಬ ಅನುಮಾನ ದಟ್ಟವಾಗಿದೆ.

English summary
The investigations being conducted into the blast outside a Mysuru court earlier this week has not yet managed to crack the motive, but has established that the bomb was assembled by a professional. In a bid to try and establish the motive, the police are studying the similarities between the blasts that took place outside the courts at Chittoor (Andhra Pradesh) and Kollam (Kerala) on April 7 and June 15 respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X