ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಂಗ್ಯೂ ಮಹಾಮಾರಿಗೆ ಮೈಸೂರಿನಲ್ಲಿ ಮತ್ತೊಂದು ಬಲಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂ.5: ದಿನೇ ದಿನೇ ಮೈಸೂರಿನಲ್ಲಿ ಡೆಂಗ್ಯೂ ತನ್ನ ರುದ್ರ ನರ್ತನ ಶುರುವಿಟ್ಟುಕೊಂಡಿದೆ. ಮೈಸೂರಿನ ಹತ್ತನೇ ತರಗತಿ ಓದುತ್ತಿದ್ದ ಕುಸುಮಾ ಎಂಬ ವಿದ್ಯಾರ್ಥಿ, ಜೂನ್ 3 ರಂದು ಡೆಂಗ್ಯೂಗೆ ಬಲಿಯಾದ ಸುದ್ದಿ ಹಸಿಯಾಗಿರುವಾಗಲೇ, ಇಂದು (ಜೂನ್ 5)ಮತ್ತೊಬ್ಬ ವ್ಯಕ್ತಿ ಡೆಂಗ್ಯೂಗೆ ಬಲಿಯಾಗಿರುವ ಘಟನೆ ನಡೆದಿದೆ.

ಮೈಸೂರಿನ ವಿಜಯನಗರ ಎರಡನೇ ಹಂತದ ನಿವಾಸಿ ಕೆ.ಪಿ.ಶಂಕರ್ (47 ) ಮೃತ ದುರ್ದೈವಿ. ಮೈಸೂರು ಜಿಲ್ಲೆಯ ಭೋವಿ ಸಂಘದ ನಿರ್ದೇಶಕರಾಗಿರುವ ಶಂಕರ್ ಅವರು ಕಳೆದ 3 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.[ಮಾರಕ ಡೆಂಗ್ಯೂ ಮಾರಿಗೆ ಮೈಸೂರಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಸಾವು]

Abgain a dengue death in Mysuru

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 15 ದಿನದಲ್ಲೇ ಮೈಸೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ 5 ಜನರು ಬಲಿಯಾಗಿರುವುದು ವಿಪರ್ಯಾಸವೇ ಸರಿ.[ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ]

English summary
A 47 year old man dies by dengue fever in Vijayanagar, Mysuru. It is the 5th case of dengue death in the district within one month!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X