ಜಾಕಿರ್ ನಾಯಕ್ ಎನ್​ಜಿಒ ನಿಷೇಧಕ್ಕೆ ಮುಂದಾದ ಗೃಹ ಸಚಿವಾಲಯ

Posted By:
Subscribe to Oneindia Kannada

ಮುಂಬೈ, ಅಕ್ಟೋಬರ್ 28: ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕಿರ್ ನಾಯಕ್ ಅವರ ಎನ್​ಜಿಒ ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಭಯೋತ್ಪಾದನಾ ವಿರೋಧಿ ಕಾನೂನಿನಡಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಎನ್​ಜಿಒ ನಿಷೇಧಿಸಲು ಸರ್ಕಾರ ಮುಂದಾಗಿದೆ.

ಜಾಕಿರ್ ನಾಯಕ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥೆಯನ್ನು ಕಾನೂನುಬಾಹಿರ ಸಂಸ್ಥೆ ಎಂದು ಘ್ಘೋಷಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸಂಬಂಧ ಮಹಾರಾಷ್ಟ್ರ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯ ಇಷ್ಟರಲ್ಲೆ ಸೂಚನೆ ನೀಡಲಿದೆ ಎಂಬ ಮಾಹಿತಿ ಬಂದಿದೆ. ಎನ್ ಜಿಒ ನಿಷೇಧದ ಬಗ್ಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗುತ್ತದೆ.

Zakir Naik foundation to be banned soon by Home Ministry

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಜಾಕೀರ್ ನಾಯ್ಕ್ ಅವರ ಪೀಸ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕ್ರಮ ಜರುಗಿಸಲು ಗೃಹ ಸಚಿವಾಲಯ ಮುಂದಾಗಿದೆ.

ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದಾರೆ. ಜಾಕಿರ್ ನಾಯಕ್ ಅವರ ಎರಡು ವಿದ್ಯಾ ಸಂಸ್ಥೆ, ಎನ್ಜಿಒ, ಟಿವಿ ವಾಹಿನಿ ವಿರುದ್ಧವೂ ಪ್ರಕರಣಗಳಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An NGO promoted by controversial Islamic preacher Zakir Naik will soon be banned under the anti-terror law, with the Home Ministry preparing a draft cabinet note for it.
Please Wait while comments are loading...