ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ಧರ್ಮಪ್ರಚಾರಕ ಜಾಕೀರ್ ನಾಯ್ಕ್ ಗೆ ಸೇರಿದ ಆಸ್ತಿ ಮತ್ತೊಮ್ಮೆ ವಶ

|
Google Oneindia Kannada News

ಮುಂಬೈ, ಜನವರಿ 20: ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್ ನಾಯ್ಕ್ ಗೆ ಸೇರಿದ ಆಸ್ತಿಯನ್ನು ಮತ್ತೊಮ್ಮೆ ವಶಪಡಿಸಿಕೊಳ್ಳಲಾಗಿದೆ.

ಜಾಕೀರ್ ನಾಯ್ಕ್ ಗೆ ಸೇರಿದ 16.40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಜಪ್ತಿ ಮಾಡಿದೆ. ಇದಕ್ಕೂ ಮೊದಲು ಎರಡು ಬಾರಿ ದಾಳಿ ನಡೆಸಿದ್ದ ಇಡಿ, ಒಟ್ಟಾರೆ 34.09 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಂಡಿದೆ.

ಹಿಂದು, ಕ್ರೈಸ್ತ ಇನ್ನಿತರ ಧರ್ಮಗಳನ್ನು ಅವಹೇಳನ ಮಾಡಿ, ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿದ ಪ್ರಕರಣ ಸಂಬಂಧ 2017ರ ಅಕ್ಟೋಬರ್ 26ರಂದು ರಾಷ್ಟ್ರೀಯ ತನಿಖಾ ದಳವು ಜಾಕಿರ್ ನಾಯ್ಕ್ ವಿರುದ್ಧ ವಿಶೇಷ ಕೋರ್ಟ್​ಗೆ ಆರೋಪಪಟ್ಟಿ ಸಲ್ಲಿಸಿತ್ತು.

Zakir Naik case: ED attaches assets worth Rs 16.40 cr under PMLA

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಜಾಕೀರ್ ನಾಯ್ಕ್ ಅವರ ಪೀಸ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಮತ್ತು ಅನಾಮಧೇಯ ಮೂಲಗಳಿಂದ ದೇಣಿಗೆ ಸಂಗ್ರಹಿಸಿರುವ ಬಗ್ಗೆ ಕೂಡಾ ತನಿಖೆ ನಡೆಸಲಾಗಿದೆ.

ಜಾಕೀರ್ ನಾಯಕ್ ಎನ್ ಜಿಒ 5 ವರ್ಷಗಳ ಕಾಲ ನಿಷೇಧಜಾಕೀರ್ ನಾಯಕ್ ಎನ್ ಜಿಒ 5 ವರ್ಷಗಳ ಕಾಲ ನಿಷೇಧ

ಈಗಾಗಲೇ ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಾಕೀರ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ಎನ್​ಜಿಒ 5 ವರ್ಷಗಳ ಕಾಲಕ್ಕೆ ನಿಷೇಧಿಸಿ 2016ರಲ್ಲಿ ಆದೇಶ ಹೊರಡಿಸಲಾಗಿದೆ.

ಸರ್ಕಾರೇತರ ಸಂಸ್ಥೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ನಿಂದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) 2010ರ ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘನೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು, ಮುಂತಾದ ಆರೋಪಗಳಿವೆ. ಆರ್ಥಿಕ ಅವ್ಯವಹಾರಗಳ ಆರೋಪ ಹೊತ್ತಿರುವ ಇಸ್ಲಾಂ ಧರ್ಮ ಬೋಧಕ ಜಾಕಿರ್ ನಾಯಕ್ ಅವರ ವಿರುದ್ಧ ಮುಂಬೈನ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿದೆ.

English summary
Enforcement Directorate (ED) has attached properties worth Rs. 16.40 Crores in Mumbai and Pune, under the Prevention of Money Laundering Act (PMLA) in the case of Zakir Naik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X