ಯೋಗ ಜನಾಂದೋಲನವಾಗಲಿ: ವೆಂಕಯ್ಯ ನಾಯ್ಡು
ಮುಂಬೈ, ಜೂನ್ 21: 'ಯೋಗ ಜನಾಂದೋಲನವಾಗಬೇಕಿದೆ' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ವಿಶ್ವ ಯೋಗದಿನದ ನಿಮಿತ್ತ ಮುಂಬೈಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜೊತೆ ವೇದಿಕೆ ಹಂಚಿಕೊಂಡು, ಯೋಗಾಸನವನ್ನೂ ಮಾಡಿದ್ದು ವಿಶೇಷವಾಗಿತ್ತು.
"ಇದು ನಿಜಕ್ಕೂ ಅತ್ಯುತ್ತಮ ಆರಂಭ. ನಾಲ್ಕು ವರ್ಷದ ಹಿಂದೆ ನಮ್ಮ ಪ್ರಧಾನಿ ಈ ದಿನಕ್ಕೆ ನಾಂದಿ ಹಾಡಿದರು. ಯೋಗ ಜನಾಂದೋಲನವಾಗಬೇಕು ಎಂದು ನಾನು ಬಯಸುತ್ತೇನೆ. ಏಕೆಂದರೆ ಇದು ರಾಜಕೀಯ ಅಥವಾ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಇದು ನಮ್ಮೆಲ್ಲ ಜೀವನೋದ್ಧಾರಕ್ಕೆ ಅಗತ್ಯವಾದುದು. ಯೋಗ ಕೇವಲ ಒಂದು ದಿನಕ್ಕೆ ಮಾತ್ರವಲ್ಲ. ಅದು ನಮ್ಮೆಲ್ಲ ಪ್ರತಿದಿನದ ಬದುಕಾಗಬೇಕು" ಎಂದು ವೆಂಕಯ್ಯ ನಾಯ್ಡು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ಅಂತಾರಾಷ್ಟ್ರೀಯ ಯೋಗ ದಿನವನ್ನು ಭಾರತೀಯರು ಆರಂಭಿಸಿದೆವು ಮತ್ತು ಅದನ್ನು ಇಡೀ ಜಗತ್ತೂ ಆಚರಿಸುತ್ತಿದೆ ಎಂದರೆ ಹೆಮ್ಮೆಯಾಗುತ್ತದೆ. ಅದರ ಎಲ್ಲಾ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ" ಎಂದರು.












Click it and Unblock the Notifications