• search
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರದ ಲಾತೂರ್ ಗೆ ಬರಲಿದೆ ಜಗತ್ತಿನ ಮೊದಲ ಆಸ್ಪತ್ರೆ- ರೈಲು

|

ಲಾತೂರ್ (ಮಹಾರಾಷ್ಟ್ರ), ಜೂನ್ 6 : ಈ ಪಟ್ಟಣದಲ್ಲಿ ಲೈಫ್ ಲೈನ್ ಎಕ್ಸ್ ಪ್ರೆಸ್ ಸಂಚಾರಕ್ಕಾಗಿ ಎದುರು ನೋಡಲಾಗುತ್ತಿದೆ. ಇದು ಜಗತ್ತಿನ ಮೊದಲ ಆಸ್ಪತ್ರೆ- ರೈಲು. ಇದು ರೋಗಿಗಳಿಗೆ ವೈದ್ಯಕೀಯ ಶುಶ್ರೂಷೆ ಹಾಗೂ ನಿವಾರಣೆಯನ್ನು ನೀಡುತ್ತದೆ. ದೂರದ ಪ್ರದೇಶದಲ್ಲಿ ವಾಸಿಸುವವರ ಅನುಕೂಲಕ್ಕಾಗಿ ಈ ರೈಲು ಸಂಚರಿಸಲಿದೆ. ಇದು ಮುಂದಿನ ವಾರ ಆಗಮಿಸಲಿದೆ.

ಜೂನ್ ಹದಿನೈದರಿಂದ ಜುಲೈ ಆರರವರೆಗೆ ಲಾತೂರ್ ನಿಲ್ದಾಣದಲ್ಲಿ ನಿಲ್ಲಲಿದೆ. ಆ ನಂತರ ಉತ್ತರಪ್ರದೇಶದ ಮಿರ್ಜಾಪುರ್ ಗೆ ತೆರಳಲಿದೆ. ಲೈಫ್ ಲೈನ್ ಎಕ್ಸ್ ಪ್ರೆಸ್ ಕಳೆದ ಮೂರು ದಶಕಗಳಿಂದ ಅಗತ್ಯ ಇರುವ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ. ಕಣ್ಣಿನ ಪೊರೆ ಸಮಸ್ಯೆಯಿಂದ ಕ್ಯಾನ್ಸರ್ ತನಕ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದೆ.

ರೈಲ್ವೆ ಬಯೋ ಟಾಯ್ಲೆಟ್ ವ್ಯವಸ್ಥೆ: ಸ್ವಚ್ಛತೆಗೆ ಟೆಂಡರ್

ಈ ರೈಲು ದೇಶದಾದ್ಯಂತ ಸಂಚರಿಸುತ್ತದೆ. ಯಾರಿಗೆ ನೂರಾರು ಮೈಲಿ ಸಂಚರಿಸಿ, ಪ್ರಮುಖ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗುತ್ತದೋ ಅಂತಹವರಿಗೆ ಚಿಕಿತ್ಸೆ ನೀಡುವುದು ಉದ್ದೇಶ. ಮುಂದಿನ ನಿಲ್ದಾಣ ತಲುಪುವ ಮುಂಚೆ ಒಂದು ಕಡೆ ಒಂದು ತಿಂಗಳವರೆಗೆ ನಿಲ್ಲುತ್ತದೆ. ಎಲ್ಲಿ ಸರಿಯಾದ ಆರೋಗ್ಯ ಸೇವೆ ಇರುವುದಿಲ್ಲವೋ ಅಂಥ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ.

Worlds first Hospital-Train to arrive in Maharashtra Latur on June 15

1991ರಲ್ಲಿ ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್ ಎಂಬ ಎನ್ ಜಿಒ ಸರಕಾರದ ಜತೆ ಸೇರಿ ಆರಂಭಿಸಿತು. ವಿಶ್ವ ಆರೋಗ್ಯ ಸಂಸ್ಥೆಯು ಇದಕ್ಕೆ ನೆರವು ನೀಡುತ್ತಿದೆ. ಜತೆಗೆ ಯುನಿಸೆಫ್ ಸಹಾಯವೂ ಇದೆ. ಭಾರತದ 191 ಸ್ಥಳಗಳಲ್ಲಿ ಈ ಲೈಫ್ ಲೈನ್ ಎಕ್ಸ್ ಪ್ರೆಸ್ ನಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮುಂಬೈ ಸುದ್ದಿಗಳುView All

English summary
Maharashtra's Latur is waiting for The Lifeline Express to roll into town. The train, touted to be the world's first hospital-train that provides medical aid and relief to patients living in far-flung and inaccessible areas, is arriving in Maharashtra next week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more