ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?
Recommended Video

ಮುಂಬೈ, ಫೆಬ್ರವರಿ 28 : ಜನಪ್ರಿಯತೆ ಇರಲಿ ಇಲ್ಲದಿರಲಿ, ಅರ್ಹತೆ ಇರಲಿ ಇಲ್ಲದಿರಲಿ, ಯಾರು ಏನಾದರೂ ಅಂದುಕೊಳ್ಳಲಿ, ಎಷ್ಟೇ ಕಟುಟೀಕೆಗಳನ್ನು ಮಾಡಿಕೊಳ್ಳಲಿ, ಯಾರೇ ಕೂಗಾಡಲಿ, ನಾಡಿನ ದೊಡ್ಡ ವ್ಯಕ್ತಿಗೆ ಸರಕಾರಿ ಮರ್ಯಾದೆಯಿಂದ ಅಂತಿಮ ಸಂಸ್ಕಾರ ನೆರವೇರಿಸುವುದು ಫ್ಯಾಷನ್ ಆಗಿದೆ.
ಇದಕ್ಕೆ ಯಾವುದೇ ರಾಜ್ಯವಾಗಲಿ, ಯಾವುದೇ ಪಕ್ಷವಾಗಲಿ ಹೊರತಲ್ಲ. ಇತ್ತೀಚೆಗೆ ನಿಧನರಾದ ಪತ್ರಕರ್ತೆ ಗೌರಿ ಲಂಕೇಶ್, ಕನ್ನಡ ನಾಡಿನ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ, ರಾಷ್ಟ್ರಧ್ವಜವನ್ನು ಹೊದಿಸಿ, ಕುಶಾಲು ತೋಪು ಹಾರಿಸಿ ಇಹಲೋಕದಿಂದ ಬೀಳ್ಕೊಡಲಾಗಿತ್ತು.
ಇದಕ್ಕೆ ಭಾರೀ ಪ್ರತಿಕ್ರಿಯೆಗಳು, ಪ್ರತಿಭಟನೆಗಳು, ಕಟು ಟೀಕೆಗಳು ವ್ಯಕ್ತವಾಗಿದ್ದವು. ಇವರು ನಾಡಿಗೆ ಏನು ಮಾಡಿದ್ದಾರೆ? ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಕಡೆಗೆ, ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಿತು ಮತ್ತು ತನ್ನ ಹಠವನ್ನೇ ಸಾಧಿಸಿ, ಯಾವ ಟೀಕೆಗೂ ಕಿವಿಗೊಡದೆ ಸರಕಾರಿ ಗೌರವ ನೀಡಿತ್ತು.
ಅರ್ಹತೆ ಇದ್ದವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೀಡಿದರೆ ಯಾರೂ ಆಕ್ಷೇಪ ಮಾಡುವುದಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಆ ಅರ್ಹತೆ ಇತ್ತು ಕೂಡ. ಇದೇ ರೀತಿ, ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನೀಡಲಾಗುತ್ತದೆ. ಅದಕ್ಕೆ ಅವರು ನೂರಕ್ಕೆ ನೂರರಷ್ಟು ಅರ್ಹರಾಗಿರುತ್ತಾರೆ.

ಶ್ರೀದೇವಿಯವರು ಸರಕಾರಿ ಮರ್ಯಾದೆಗೆ ಅರ್ಹರೆ?
ಆದರೆ, ಸರಕಾರಿ ಗೌರವಕ್ಕೆ ಪಂಚಭೂತಗಳಲ್ಲಿ ಲೀನವಾಗುತ್ತಿರುವ ಬಾಲಿವುಡ್ ಬೆಡಗಿ, ರೂಪ್ ಕಿ ರಾಣಿ 'ಪದ್ಮಶ್ರೀ' ಶ್ರೀದೇವಿಯವರು ಅರ್ಹರಾ ಎಂಬ ಪ್ರಶ್ನೆ ಧುತ್ತನೆ ಎದುರಾಗಿದೆ. ಏಕೆಂದರೆ, ದೇವೇಂದ್ರ ಫಡ್ನವೀಸ್ ಅವರ ಸರಕಾರ ಶ್ರೀದೇವಿಯವರಿಗೆ ಸರಕಾರಿ ಮರ್ಯಾದೆಗಳೊಂದಿಗೆ ಅಂತಿಮ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದೆ.

ಶ್ರೀದೇವಿಯೆರು ಸಮಾಜಕ್ಕೆ ಏನು ಮಾಡಿದ್ದಾರೆ?
ಇದಕ್ಕೆ ಭಾರೀ ತಕರಾರು ಎದ್ದಿದೆ. ಹುಬ್ಬು ಕುಣಿಸುವ, ಸೊಂಟ ಬಳುಕಿಸುವ ಸುಂದರಿ ಎಂದೇ ಹೆಸರಾಗಿದ್ದ ಶ್ರೀದೇವಿಯವರು ಇಂಥಹ ಮರ್ಯಾದೆಗಾಗಿ ಏನು ಮಾಡಿದ್ದಾರೆ? ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಿದ್ದರಾ? 300 ಕೋಟಿ ರುಪಾಯಿ ಆಸ್ತಿಯ ಒಡತಿ ಬಡಬಗ್ಗರಿಗಾಗಿ ಏನಾದರೂ ಮಾಡಿದ್ದರಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ
ಇದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ. ಬಾಲಿವುಡ್ ತಾರೆಗಳನ್ನು ಮತ್ತು ತನ್ನ ಹೆಂಡತಿಯನ್ನು ಮೆಚ್ಚಿಸುವ ಉದ್ದೇಶದಿಂದ ದೇವೇಂದ್ರ ಫಡ್ನವೀಸ್ ಅವರು ಶ್ರೀದೇವಿಗೆ ಸರಕಾರಿ ಮರ್ಯಾದೆಯಿಂದ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದಾರೆ ಎಂಬ ಟೀಕಾಪ್ರಹಾರವನ್ನು ಟ್ವಿಟ್ಟಿಗರೊಬ್ಬರು ಮಾಡಿದ್ದಾರೆ.

ಶ್ರೀದೇವಿ ಅರ್ಹರು, ಅಭಿಮಾನಿಯ ತಿರುಗೇಟು
ಇದಕ್ಕೆ ತಿರುಗೇಟು ಮತ್ತೊಬ್ಬರು ನೀಡಿದ್ದು, ಸರಕಾರಿ ಗೌರವಕ್ಕೆ ಶ್ರೀದೇವಿ ಸಂಪೂರ್ಣ ಅರ್ಹರು. 5 ದಶಕಗಳ ಕಾಲ ಅವರು ಬಾಲಿವುಡ್ ಆಳಿದ್ದರು, ಕೋಟ್ಯಂತರ ಸಿನಿರಸಿಕರ ಹೃದಯವನ್ನು ಗೆದ್ದಿದ್ದಾರೆ. ಮಹಾರಾಷ್ಟ್ರ ಸರಕಾದ ಉತ್ತಮ ನಿರ್ಧಾರವಿದು. ಕೇಂದ್ರ ಸಚಿವರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಕ್ಕಿ ಎಂಬುವವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಪದ್ಮಶ್ರೀ ಗೌರವ ಬಂದವರಿಗೆಲ್ಲ ಇದೇ ಮರ್ಯಾದೆ ಕೊಡುತ್ತಾರೆ ಎನ್ನುವುದಾದರೆ ಯಾರದೂ ತಕರಾರು ಇರುವುದಿಲ್ಲ.

ಫಡ್ನವೀಸ್ ಗೆ ಕಪೂರ್ ಚಿತ್ರದಲ್ಲಿ ಲೀಡ್ ರೋಲ್
ನನಗನ್ನಿಸತ್ತೆ, ದೇವೇಂದ್ರ ಫಡ್ನವೀಸ್ ಅವರು ಕಪೂರ್ ಖಾಂದಾನ್ ತಯಾರಿಸುವ ಮುಂದಿನ ಚಿತ್ರದಲ್ಲಿ ಲೀಡ್ ರೋಲ್ ಗಳಿಸಲಿದ್ದಾರೆ ಎಂದು ಒಬ್ಬರು ವ್ಯಂಗ್ಯವಾಡಿದ್ದರೆ, ದೇಶಕ್ಕಾಗಿ ಗಡಿ ಕಾಯುತ್ತ, ಪ್ರಾಣ ತ್ಯಾಗ ಮಾಡುವ ಎಲ್ಲ ಯೋಧರಿಗೆ ಇಂಥ ಗೌರವ ಏಕೆ ನೀಡುವುದಿಲ್ಲ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರ ಸಿಗುವುದಿಲ್ಲ.

ಯಾಕ್ಸಾರ್ ಸುಮ್ಮನೆ ಆಬ್ಜೆಕ್ಷನ್ ಎತ್ತುತ್ತೀರಾ?
ಯಾಕ್ಸಾರ್ ಸುಮ್ಮನೆ ಆಬ್ಜೆಕ್ಷನ್ ಎತ್ತುತ್ತೀರಾ? ಶ್ರೀದೇವಿಯವರು ಪಬ್ಲಿಕ್ ಫಿಗರ್ ಆಗಿದ್ದರು. ಯಾವುದೇ ವಿವಾದದಲ್ಲಿ ಸಿಲುಕದೆ, ಕೋಟ್ಯಂತರ ಚಿತ್ರಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದರು. ಕರ್ನಾಟಕದಲ್ಲಿ ನಗರದ ನಕ್ಸಲೈಟ್ ಗೌರಿ ಲಂಕೇಶ್ ಅವರಿಗೆ ಸರಕಾರಿ ಗೌರವ ನೀಡಿದ್ದಕ್ಕಿಂತ ಇದು ಎಷ್ಟೋ ಉತ್ತಮವಾದುದು ಎಂದು ಸೋನಾಲಿ ಎಂಬುವವರು ತಿರುಗೇಟು ನೀಡಿದ್ದಾರೆ.

ಇಂಥ ಗೌರವ ನೀಡುವುದನ್ನು ನಿಲ್ಲಿಸಬೇಕು
ಶ್ರೀದೇವಿಯವರು ತಮ್ಮ ಸೌಂದರ್ಯ, ಮ್ಯಾನರಿಸಂ, ಅದ್ಭುತ ನರ್ತನ, ಮನೋಜ್ಞ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಚೋರಿ ಮಾಡಿದ್ದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಜನಪ್ರಿಯತೆಯ ಆಧಾರದ ಮೇಲೆ ಅಥವಾ ಹಠಮಾರಿ ಧೋರಣೆಯಿಂದಾಗಿ ಯಾರೇ ತೀರಿಕೊಂಡಾಗ ಸರಕಾರಿ ಗೌರವದಿಂದ ಬೀಳ್ಕೊಡುವುದನ್ನು ನಿಲ್ಲಿಸಬೇಕು.

ಒನ್ಇಂಡಿಯಾ ಅಭಿಪ್ರಾಯ
ಸರಕಾರಿ ನಿಯಮಗಳ ಪ್ರಕಾರ, ಮಾಜಿ ಪ್ರಧಾನಿ, ಹಾಲಿ ಮತ್ತು ಮಾಜಿ ಕೇಂದ್ರ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು ಮಾತ್ರ ಸರಕಾರಿ ಗೌರವಕ್ಕೆ ಅರ್ಹರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಮಾನದಂಡವೆಂಬುದೇ ಇಲ್ಲ. ಎಂಥೆಂಥ ರಾಜಕಾರಣಿಗಳಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ನೀಡಿರಬೇಕಾದರೆ, ಚಿತ್ರರಸಿಕರ ಆರಾಧ್ಯದೇವತೆಯಾಗಿದ್ದ, ಸಂಭಾವಿತ ವ್ಯಕ್ತಿಯಾಗಿದ್ದ ಶ್ರೀದೇವಿಗೆ ಇಂಥ ಗೌರವ ನೀಡಿದರೆ ತಪ್ಪೇನು?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications