ರಾಷ್ಟ್ರಪತಿ ಭವನ, ಮಹಾರಾಷ್ಟ್ರದ ರಾಜಭವನ ನಡುವೆ ನಡೆದಿದ್ದೇನು?
ಮುಂಬೈ, ನವೆಂಬರ್ 23: ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತೆ ದೇವೇಂದ್ರ ಫಡ್ನವಿಸ್ , ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Recommended Video
ಹಾಗಾದರೆ ಈ ಏಕಾಏಕಿ ಬೆಳವಣಿಗೆ ಆಗಿದ್ದು ಹೇಗೆ ಎನ್‌ಸಿಪಿ, ಶಿವಸೇನಾ, ಕಾಂಗ್ರೆಸ್ ಸೇರಿ ಮಹಾರಾಷ್ಟ್ರ ಸರ್ಕಾರ ರಚನೆ ಮಾಡಲು ಸೋನಿಯಾ ಗಾಂಧಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಏಕಾಏಕಿ ಮತ್ತೆ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಹೇಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿದರು ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಬೆಳಗಿನ ಜಾವ ಸರ್ಕಾರ ರಚನೆಗೆ ಫಡ್ನವಿಸ್ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ರಾಷ್ಟ್ರಪತಿ ಆಡಳಿತ ತೆಗೆದು ಹಾಕಲು ರಾಜ್ಯಪಾಲರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಶಿಫಾರಸು ಮಾಡಿದ್ದರು.
ಬೆಳಗಿನ ಜಾವ 5.47ಕ್ಕೆ ರಾಷ್ಟ್ರಪತಿ ಆಡಳಿತ ಹಿಂಪಡೆಯಲಾಗಿದ್ದು, ತಕ್ಷಣವೇ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಅಂತಿಮ ಹೆಜ್ಜೆ ಇಟ್ಟಿದ್ದವು
ಶುಕ್ರವಾರ ಶಿವಸೇನೆ, ಎನ್‌ಸಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಗೆ ಅಂತಿಮ ಹೆಜ್ಜೆ ಇಟ್ಟಿದ್ದವು. ಆದರೆ ಶನಿವಾರ ಬೆಳ್ಳಂಬೆಳಗ್ಗೆ ದಿಢೀರ್ ಬೆಳವಣಿಗೆ ಎಂಬಂತೆ ಬಿಜೆಪಿ-ಎನ್‌ಸಿಪಿ ಮೈತ್ರಿ ಸರಕಾರದ ಅಧಿಕಾರಕ್ಕೆ ಏರಿದೆ. ರಾಜ್ಯದ ಜನತೆ ನಮಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ಆದರೆ ಶಿವಸೇನೆ ಇತರ ಪಕ್ಷಗಳ ಜತೆ ಸೇರಿ ಸರಕಾರ ರಚನೆಗೆ ಯತ್ನಿಸಿತು. ಇದರ ಪರಿಣಾಮ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂತು. ಮಹಾರಾಷ್ಟ್ರಕ್ಕೆ ಸ್ಥಿರ ಸರಕಾರ ಬೇಕಿದೆ. ಕಿಚಡಿ ಸರಕಾರ ಬೇಕಾಗಿಲ್ಲ ಎಂದು ಮಹಾರಾಷ್ಟ್ರ ಸಿಎಂ ಆಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಹೇಳಿದರು.

ಸರ್ಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ
ಫಲಿತಾಂಶದ ದಿನದಿಂದ ಇಂದಿನ ವರೆಗೆ ಯಾವುದೇ ಪಕ್ಷಕ್ಕೆ ಸರಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ರೈತರ ಸಮಸ್ಯೆ. ಅಂತಿಮವಾಗಿ ಸ್ಥಿರ ಸರಕಾರ ರಚನೆಯ ನಿರ್ಧಾರವನ್ನು ಕೈಗೊಂಡೆವು ಎಂದು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅಜಿತ್ ಪವಾರ್ ಹೇಳಿದರು.

ಶುಭಾಶಯ ಕೋರಿದ ಮೋದಿ
ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಇಬ್ಬರು ಮಹಾರಾಷ್ಟ್ರದ ಉತ್ತಮ ಭವಿಷ್ಯ ರೂಪಿಸಲು ಜತೆಯಾಗಿ ಕೆಲಸ ಮಾಡುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.

ಶನಿವಾರ ಬೆಳಗ್ಗೆ ನಡೆದಿದ್ದೇನು?
ಅಚ್ಚರಿಯ ಸಂಗತಿ ಎಂದರೆ ಶನಿವಾರ ಬೆಳಗ್ಗೆ 5.47 ನಿಮಿಷಕ್ಕೆ ಮಹಾರಾಷ್ಟ್ರದ ರಾಜಭವನದಿಂದ ರಾಜ್ಯಪಾಲರ ಆಳ್ವಿಕೆ ಹಿಂತೆದುಕೊಳ್ಳುವ ಕುರಿತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಾಯಿತು. ಅಲ್ಲಿಂದ ರಾಷ್ಟ್ರಪತಿ ಭವನಕ್ಕೆ ತಲುಪಿದ ವರದಿಗೆ ಅಂಕಿತವೂ ಸಿಕ್ಕಿ ಹೋಯಿತು.
ಇದೇ ವೇಳೆಗೆ ಫಡ್ನವೀಸ್ ಅಧಿಕಾರ ಸ್ವೀಕಾರಕ್ಕೆ ಸರಳ ಸಮಾರಂಭವೂ ಆಯೋಜನೆಗೊಂಡಿತ್ತು. ಹೀಗೆ, ಮಹಾರಾಷ್ಟ್ರ ಹಾಗೂ ದೇಶದ ಜನ ನಿದ್ದೆಯಿಂದ ಏಳುವ ಹೊತ್ತಿಗೆ ಅಕ್ಟೋಬರ್ 24ರಿಂದ ಅನಿಶ್ಚಿತತೆಯಲ್ಲಿದ್ದ ಮಹಾರಾಷ್ಟ್ರ ರಾಜಕೀಯ ಹೊಸ ಆಯಾಮವನ್ನು ಪಡೆದುಕೊಂಡಿತ್ತು.












Click it and Unblock the Notifications