• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ನಡುರಸ್ತೆಯಲ್ಲೇ ಬಸ್ಕಿ ಹೊಡೆದ ನೂರಾರು ಜನರು!

|

ಪುಣೆ, ಏಪ್ರಿಲ್,21: ಕೊರೊನಾ ವೈರಸ್ ಸೋಂಕು ಸಾವಿರ ಸಾವಿರ ಜನರ ಜೀವ ಹಿಂಡುತ್ತಿದೆ. ಮಹಾರಾಷ್ಟ್ರದಲ್ಲಿ ನಿತ್ಯವೂ ನೂರಾರು ಜನರಲ್ಲಿ ಮಾರಕ ಸೋಂಕು ಅಂಟಿಕೊಳ್ಳುತ್ತಿದೆ. ಸಾವಿನ ಭೀತಿಯಲ್ಲೇ ಜನರು ಬದುಕುವಂತಾ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರವು ಭಾರತ ಲಾಕ್ ಡೌನ್ ಘೋಷಿಸಿದರೆ ಪುಣೆಯಲ್ಲಿ ಜನರಿಗೆ ಅದ್ಯಾವುದರ ಪ್ರಜ್ಞೆಯೇ ಇಲ್ಲ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನೇ ಗಾಳಿಗೆ ತೂರಿ ಅಲೆದಾಡುತ್ತಿದ್ದಾರೆ.

ಪುಣೆಯಲ್ಲಿ ಅಗತ್ಯ ಕೆಲಸ ಕಾರ್ಯಗಳಿಲ್ಲದೇ ಸುಖಾಸುಮ್ಮನೆ ರಸ್ತೆಗಳಲ್ಲಿ ರೌಂಡ್ಸ್ ಹೊಡೆಯುತ್ತಿದ್ದ ಜನರನ್ನು ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಬಸ್ಕಿ ಹೊಡೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಹಾರಾಷ್ಟ್ರದಲ್ಲಿ ಕೊರೊನಾದಿಂದ ಪ್ರಾಣ ಬಿಟ್ಟೋರೆಷ್ಟು?:

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 466 ಮಂದಿಗೆ ಸೋಂಕು ತಗಲಿದ್ದು 9 ಮಂದಿ ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೂ 232 ಮಂದಿ ಕೊರೊನಾಗೆ ಬಲಿಯಾಗಿದ್ದರೆ 4,669 ಮಂದಿಗೆ ಸೋಂಕು ತಗಲಿರುವು ಪತ್ತೆಯಾಗಿದೆ. ಒಂದೇ ದಿನ 65 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಇದುವರೆಗೂ 572 ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

English summary
Video: Violators Of Coronavirus Lockdown Were Made To Do Sit Ups By Pune Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X