ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದರ್ಭದ ಮೊದಲ ಬ್ಲ್ಯಾಕ್‌ ಫಂಗಸ್‌ ರೋಗಿಯ ಚಿಕಿತ್ಸೆ ವೆಚ್ಚ ಎಷ್ಟು ಗೊತ್ತಾ?

|
Google Oneindia Kannada News

ನಾಗ್ಪುರ, ಜೂ.08: ಭಾರತದಲ್ಲಿ ಕೊರೊನಾ ಸೋಂಕಿನ ನಡುವೆ ಕಾಣಿಸಿಕೊಂಡ ಬ್ಲ್ಯಾಕ್‌ ಫಂಗಸ್‌ ಸೋಂಕು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ವಿದರ್ಭದ ಮೊದಲ ಬ್ಲ್ಯಾಕ್‌ ಫಂಗಸ್‌ ರೋಗಿಯು ತಾನು ಬದುಕುಳಿಯಲು ಸುಮಾರು 1.5 ಕೋಟಿ ರೂ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ರೋಗಿಗಳು ತಮ್ಮ ಕಣ್ಣು ಹಾಗೂ ಮುಖದಲ್ಲಿನ ಮೂಳೆಗಳನ್ನು ಕಳೆದುಕೊಂಡಿದ್ದಾರೆ. ಕೆಲವರು ವಿರೂಪವಾದ ತಮ್ಮ ಮುಖವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ.

ವಿದರ್ಭದ 46 ವರ್ಷದ ನವೀನ್ ಪೌಲ್ ಎಂಬವರು ಮಧ್ಯ ಭಾರತದಲ್ಲಿ ಮೊದಲ ಬ್ಲ್ಯಾಕ್‌ ಫಂಗಸ್‌ ರೋಗಿಯಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ರಾಜ್ಯ ಸರ್ಕಾರಿ ನೌಕರನಾಗಿದ್ದ ಪಾಲ್ ಸೆಪ್ಟೆಂಬರ್‌ನಲ್ಲಿ ಕೋವಿಡ್‌ಗೆ ತುತ್ತಾಗಿದ್ದು ಹಲ್ಲು ಮತ್ತು ಕಣ್ಣಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ಸಂದರ್ಭದಲ್ಲಿ ಕಪ್ಪು ಶೀಲೀಂಧ್ರವು ವೈದ್ಯ ಸಮೂದಾಯಕ್ಕೆ ಹೊಸದಾದ ಸೋಂಕಾಗಿತ್ತು. ಪೌಲ್ ಅಕ್ಟೋಬರ್‌ನಲ್ಲಿ ರೋಗಲಕ್ಷಣಗಳ ಬಗ್ಗೆ ವೈದ್ಯರಲ್ಲಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಪೌಲ್‌ಗೆ ಶಸ್ತ್ರಚಿಕಿತ್ಸೆ ಮಾಡಿ, ಕಣ್ಣನ್ನು ತೆಗೆಯಲಾಗಿದೆ. ಒಟ್ಟಾರೆಯಾಗಿ, ಪೌಲ್‌ ಆರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು ಒಟ್ಟು 1.48 ಕೋಟಿ ರೂ. ಖರ್ಚು ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ ಪಡಿಸಿದ ಸರ್ಕಾರಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ ಪಡಿಸಿದ ಸರ್ಕಾರ

ಪೌಲ್‌ನ ಪತ್ನಿ ಉದ್ಯೋಗಿಯಾಗಿರುವ ರೈಲ್ವೆಯಿಂದ 1 ಕೋಟಿ ರೂ. ಲಭಿಸಿದ್ದು ಉಳಿದ 48 ಲಕ್ಷ ರೂ. ಹಣವನ್ನು ಪಾಲ್‌ ಕುಟುಂಬ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪೌಲ್‌, ''ನಾನು ನನ್ನ ಕಣ್ಣುಗಳನ್ನು ಕಳೆದುಕೊಳ್ಳಲು ಸಿದ್ದನಾಗಿದ್ದೆ. ನನ್ನ ಜೀವವನ್ನು ಉಳಿಸಲು ಕಣ್ಣನ್ನು ತೆಗೆದುಹಾಕಬೇಕಾದರೆ, ಕಣ್ಣು ತೆಗೆದು ನನ್ನನ್ನು ಉಳಿಸಿ ಎಂದು ನಾನು ನಾನು ವೈದ್ಯರಿಗೆ ಹೇಳಿದೆ'' ಎಂದು ಹೇಳಿದ್ದಾರೆ.

Vidarbhas first black fungus patient spent Rs 1.5 crore for treatment

ಸೆಪ್ಟೆಂಬರ್‌ನಲ್ಲಿ ಪೌಲ್‌ನಲ್ಲಿ ಕೋವಿಡ್‌ ಕಾಣಿಸಿಕೊಂಡಿದ್ದು, ಆದರೆ ಕೆಲವೇ ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದರು. ಆದರೆ ಆ ಬಳಿಕ ಪೌಲ್‌ನ ಹಲ್ಲು ಮತ್ತು ಕಣ್ಣಿನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದೆ. ''ನನ್ನನ್ನು ಮೊದಲು ನಗರದ ನರವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ನನ್ನನ್ನು ಹೈದರಾಬಾದ್‌ನ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ವಲ್ಪ ಸಮಯದ ನಂತರ, ನಾನು ಮತ್ತೆ ನಾಗ್ಪುರದ ಮತ್ತೊಂದು ಆಸ್ಪತ್ರೆಗೆ ಬಂದೆ. ಅಲ್ಲಿಂದ ನನ್ನನ್ನು ಮುಂಬೈನ ಕಾರ್ಪೊರೇಟ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು'' ಎಂದು ಪೌಲ್‌ ವಿವರಿಸಿದ್ದಾರೆ.

ಮುಂಬೈ ಆಸ್ಪತ್ರೆಯಲ್ಲಿ ನನಗೆ ಹಣದ ಸಂಕಷ್ಟ ಕಾಣಿಸಿಕೊಂಡಿತು. ಅಲ್ಲಿ 19 ಲಕ್ಷ ರೂ. ಆಸ್ಪತ್ರೆ ವೆಚ್ಚ ಕಟ್ಟಿ ಡಿಸ್ಚಾರ್ಜ್ ಕೋರಿ ಮತ್ತೆ ನಾಗ್ಪುರಕ್ಕೆ ಪೌಲ್‌ ಬಂದಿದ್ದಾರೆ. ಅಂತಿಮವಾಗಿ ಅಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಪಾಲ್‌ನ ಒಂದು ಕಣ್ಣನ್ನು ತೆಗೆದುಹಾಕಲಾಗಿದೆ.

ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರದ ಯು-ಟರ್ನ್ ಹೇಗೆ ಸ್ಪಷ್ಟ ಮಾರ್ಗಸೂಚಿ ಸೃಷ್ಟಿಸಿದೆ? - ಇಲ್ಲಿದೆ ವಿವರ

ಇನ್ನು ತನ್ನ ಜೀವವನ್ನು ಉಳಿದ ಬಗ್ಗೆ ಮಾತನಾಡಿದ ಪೌಲ್‌, ''ನನಗೆ ಬದುಕುಳಿದಿದ್ದೇನೆ ಎಂಬ ಸಂತಸವಾಗಿದೆ. ಆಪರೇಷನ್ ಬಳಿಕ ಮುಖ ಹಾಗೂ ಕಣ್ಣಿನಲ್ಲಿ ರಂಧ್ರಗಳು ಇದೆ. ನಾನು ಕೆಲವೊಮ್ಮೆ ಆಹಾರ ಸೇವಿಸುವಾಗ ಆಹಾರವು ನನ್ನ ಕಣ್ಣು ಇದ್ದ ರಂಧ್ರದೊಳಗೆ ಹೋಗುತ್ತದೆ'' ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ''ಆದರೆ ಈ ಸಮಸ್ಯೆಯನ್ನು ಪರಿಹರಿಸಬಹುದು'' ಎಂದು ವೈದ್ಯರು ಹೇಳಿದ್ದಾರೆ.

Vidarbhas first black fungus patient spent Rs 1.5 crore for treatment

''ಆ ಸಂದರ್ಭದಲ್ಲಿ ಈ ಬ್ಲ್ಯಾಕ್‌ ಫಂಗಸ್‌ ಬಗ್ಗೆ ತಿಳಿದಿರಲಿಲ್ಲ. ವೈದ್ಯರಿಗೂ ಸಹ ಈ ಬಗ್ಗೆ ಹೆಚ್ಚಿನ ಅನುಭವವಿರಲಿಲ್ಲ. ಇದು ಶಿಲೀಂಧ್ರ ಎಂದು ಯಾರೂ ಭಾವಿಸಿರಲಿಲ್ಲ. ಈಗ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ'' ಎಂದು ಕಣ್ಣಿನ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಡಾ. ಆಶಿಶ್ ಕಾಂಬ್ಳೆ ಹೇಳಿದರು. ಹಾಗೆಯೇ ''ಬಹುಶಃ ಈ ಪ್ರದೇಶದ ಬ್ಲ್ಯಾಕ್‌ ಫಂಗಸ್‌ನ ಮೊದಲ ರೋಗಿಯಾಗಿದ್ದಾರೆ ಪೌಲ್‌. ನಾನು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಕೊನೆಯ ವೈದ್ಯ. ರೋಗಿಯು ಈ ಮೊದಲು ಹಲವಾರು ಚಿಕಿತ್ಸೆಗೆ ಒಳಗಾಗಿದ್ದಾರೆ'' ಎಂದು ಡಾ ವಿಪಿನ್ ಡೆಹಾನೆ ಹೇಳುತ್ತಾರೆ.

ಹಲವಾರು ಬ್ಲ್ಯಾಕ್‌ ಫಂಗಸ್‌ ಸೋಂಕಿತರು ತಮ್ಮ ಜೀವ ಉಳಿಸಲು ಕಣ್ಣು ತೆಗೆಸಿದ್ದಾರೆ. ಕುಟುಂಬಸ್ಥರೂ ಕೂಡಾ ತಮ್ಮ ಪ್ರೀತಿಪಾತ್ರರ ಜೀವ ಉಳಿಸಲು, ಅವರ ಕಣ್ಣುಗಳನ್ನು ತೆಗೆಯಲು ಅನುಮತಿ ನೀಡಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಮಹಾರಾಷ್ಟ್ರದಲ್ಲಿ ಸರ್ಕಾರವು ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಬೆಲೆ ನಿಗದಿ ಪಡಿಸಿದೆ. ರಾಜ್ಯ ಆರೋಗ್ಯ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಬಾಂಬೆ ಪಬ್ಲಿಕ್ ಟ್ರಸ್ಟ್ಸ್ ಆಕ್ಟ್, 1950 ರ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ಆಸ್ಪತ್ರೆಗಳು ಬ್ಲ್ಯಾಕ್‌ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ನಿಗದಿಪಡಿಸಿದ ಶುಲ್ಕವನ್ನು ಅನುಸರಿಸಲು ತಿಳಿಸಿದೆ. ಈ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್‌ನ ಚಿಕಿತ್ಸೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ 28 ವಿಧದ ಶಸ್ತ್ರಚಿಕಿತ್ಸೆಗಳನ್ನು ಗುರುತಿಸಿದೆ. ಈ ಶಸ್ತ್ರಚಿಕಿತ್ಸೆಗಳಿಗೆ ಕನಿಷ್ಟ 6 ಸಾವಿರದಿಂದ ಒಂದು ಲಕ್ಷದವರೆಗೆ ಬೆಲೆ ನಿಗದಿಗೊಳಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
Navin Paul, 46, first patient of mucormycosis in Vidarbha spent Rs 1.5 Crore for treatment. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X