ತೆರೆಯ ಮೇಲೆ ಬರಲಿದೆ ಉರಿ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್!
Recommended Video

ಮುಂಬೈ, ಡಿಸೆಂಬರ್ 05: 2016 ರ ಸೆಪ್ಟೆಂಬರ್ ನಲ್ಲಿ ಪಾಕ್ ಭಯೋತ್ಪಾದಕರು ನಡೆಸಿದ ರಣಹೇಡಿ 'ಉರಿ ದಾಳಿ' ಮತ್ತು ನಂತರ ಭಾರತೀಯ ಸೇನೆಯ ವೀರೋಚಿತ ಸರ್ಜಿಕಲ್ ಸ್ಟ್ರೈಕ್ ಗಳು ತೆರೆಯ ಮೇಲೆ ಬರಲಿವೆ!
ನಿರ್ದೇಶದ ಆದಿತ್ಯ ಧಾರ್ ಅವರ 'ಉರಿ- ದಿ ಸರ್ಜಿಕಲ್ ಅಟ್ಯಾಕ್' ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದು ನಿಜ ಜೀವನದ ಘಟನೆಗಳನ್ನೇ ಆಧರಿಸಿ ತೆಗೆದ ಚಿತ್ರವಾಗಿದೆ.
18 ಸೆಪ್ಟೆಂಬರ್ 2016 ಸೇನಾಶಿಬಿರವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಭಾರತೀಯ ಸೇನೆಯ 19 ಯೋಧರನ್ನು ಪಾಕ್ ಉಗ್ರರು ಕೊಂದಿದ್ದರು. ಭಾರತೀಯ ಸೈನಿಕರು ಆ ಸಂದರ್ಭದಲ್ಲಿ ನಿದ್ದೆ ಹೋಗಿದ್ದರಿಂದ ಅವರ ಕೈಯಲ್ಲಿ ಶಸ್ತ್ರಾಸ್ತ್ರಗಳು ಇರಲಿಲ್ಲ. ಪ್ರತಿದಾಳಿ ನಡೆಸುವುದಕ್ಕೆ ಸಾಧ್ಯವಾಗದ 19 ಸೈನಿಕರು ಹುತಾತ್ಮರಾಗಿದ್ದರು.

ಎರಡು ದಶಕಗಳಲ್ಲಿ ನಡೆದ ಅತ್ಯಂತ ಹೀನಾಯ ಕೃತ್ಯ ಎಂಬ ಕುಖ್ಯಾತಿಯನ್ನು ಇದು ಪಡೆಯಿತು. ರಕ್ಷಣೆ ನೀಡುವ ಸೈನಿಕರಿಗೇ ರಕ್ಷಣೆ ಇಲ್ಲವೇ ಎಂಬ ಆಕ್ರೋಶ ಕೇಳಿಬಂತು. ಆದರೆ ಕೆಲವೇ ದಿನಗಳಲ್ಲಿ ಅಂದರೆ, ಅದೇ ಸೆಪ್ಟೆಂಬರ್ 29, 2016 ರಂದು ಭಾರತೀಯ ಸೇನೆಯೇ ಪಾಕ್ ಗಡಿಯೊಳಗೆ ನುಸುಳಿ ಪಾಕಿಸ್ತಾನದ ಉಗ್ರ ನೆಲೆಯನ್ನು ಧ್ವಂಸ ಮಾಡಿತ್ತು. ಉರಿ ದಾಳಿಗೆ ಈ ರೀತಿಯಾಗಿ ಭಾರತ ಸೇಡು ತೀರಿಸಿಕೊಂಡಿತ್ತು.
Wonderful trailor #UriSurgicalStrike . I am sure this is going to give Burnol moments to Congress & Kejriwal 😛 pic.twitter.com/0niQBu48HJ
— Tajinder Pal Singh Bagga (@TajinderBagga) December 5, 2018
ಇದೇ ಎರಡು ಪ್ರಮುಖ ಘಟನೆಗಳನ್ನು ಆಧಾರವಾಗಿಟ್ತುಕೊಂಡು, ನಿರ್ದೇಶಕರ ಸೃಜನಶೀಲತೆಯನ್ನು ಬಳಸಿ ಈ ಚಿತ್ರ ನಿರ್ಮಾಣವಾಗಿದೆ.
'ರಾಜಿ' ಖ್ಯಾತಿಯ ವಿಕಿ ಕೌಶಾಲ್ ಈ ಚಿತ್ರದ ನಾಯಕರಾಗಿದ್ದರೆ, ತನಿಖಾಧಿಕಾರಿಯ ಪಾತ್ರ ನಿರ್ವಹಿಸಿರುವ ಯಾಮಿ ಗೌತಮ್ ನಾಯಕಿಯಾಗಿದ್ದಾರೆ. ಜೊತೆಗೆ ನಟರಾದ ಪರೇಶ್ ರಾವಲ್, ಕೃತಿ ಕುಲ್ಹಾರಿ ಮುಂತಾದವರು ಚಿತ್ರದಲ್ಲಿದ್ದಾರೆ.
ಅಂದಹಾಗೆ ಈ ಚಿತ್ರ 2019 ರ ಜನವರಿ 11 ರಂದು ಚಿಡುಗಡೆಯಾಗಲಿದೆ.












Click it and Unblock the Notifications