ಪವಾಡ : ರೈಲಿಗೆ ಡಿಕ್ಕಿ ಹೊಡೆದ್ರು ಸಾವು ಗೆದ್ದ ಯುವತಿ

ಪವಾಡ ಸದೃಶ್ಯ ಘಟನೆಯೊಂದು ಮುಂಬೈ ರೈಲ್ವೆ ನಿಲ್ದಾಣ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ರೈಲಿಗೆ ಯುವತಿಯೊಬ್ಬಳು ಡಿಕ್ಕಿ ಹೊಡೆದಿದ್ದಾಳೆ. ಆದರೆ, ಸಾವು ದೂರವೇ ಉಳಿದಿದೆ.

ಮುಂಬೈ, ಜೂನ್ 07: ಮುಂಬೈ ರೈಲ್ವೆ ನಿಲ್ದಾಣವೊಂದರಲ್ಲಿ ಪವಾಡ ಸದೃಶ್ಯ ಘಟನೆಯೊಂದು ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ರೈಲಿಗೆ ಯುವತಿಯೊಬ್ಬಳು ಡಿಕ್ಕಿ ಹೊಡೆದಿದ್ದಾಳೆ. ಆದರೆ, ಬದುಕುಳಿದಿದ್ದಾಳೆ. ಅರೇ! ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸುವವರು ವಿಡಿಯೋ ನೋಡಬಹುದು.

ಪವಾಡ ರೀತಿಯಲ್ಲಿ ಬದುಕುಳಿದ ಯುವತಿಯ ಹೆಸರು ಪ್ರತೀಕ್ಷಾ ನಟೇಕರ್. ಎದುರಿಗೆ ರೈಲು ಬರುವುದನ್ನು ಗಮನಿಸದೇ(ನಿಮ್ಮ ಊಹೆ ಸರಿ, ಇಯರ್ ಫೋನ್ ಹಾಕಿಕೊಂಡಿದ್ದಳು) ರೈಲು ಹಳಿ ದಾಟುತ್ತಿದ್ದಳು. ನಿಲ್ದಾಣದಲ್ಲಿ ರೈಲು ಹಳಿ ದಾಟಲು ಸೂಕ್ತ ವ್ಯವಸ್ಥೆ ಇದ್ದರೂ ಆಕೆ ಹಳಿಗಳ ಮೇಲೆ ಇಳಿದಿದ್ದು ಏಕೆ? ಆಕೆಯೇ ಉತ್ತರಿಸಬೇಕು.

Unbelievable! Girl survives after being run over by train in Mumbai

ಹಳಿಗಳ ಮೇಲಿದ್ದ ಪ್ರತೀಕ್ಷಾಗೆ ತಕ್ಷಣಕ್ಕೆ ಏನು ಮಾಡುವುದೆಂದು ತೋಚದೆ, ಇಂಜಿನ್ ಗೆ ಹೋಗಿ ಬಡಿದಿದ್ದಾಳೆ. ಹಳಿಗಳ ಮೇಲೆ ಉದ್ದುದ್ದಾವಾಗಿ ಬಿದ್ದ ಪ್ರತೀಕ್ಷಾ ನಂತರ ಬದುಕಿದ್ದಾಳೆ. ಹಳಿ ಮೇಲೆ ಬಿದ್ದಿದ್ದ ಆಕೆಯನ್ನು ರೈಲ್ವೆ ಪೊಲೀಸರು ರಾಜವಾಡಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಪ್ರತೀಕ್ಷಾಳಿಗೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿರಲಿಲ್ಲ. ಎಡಗಣ್ಣಿನ ಹತ್ತಿರ ಸಣ್ಣ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೇ 13ರಂದು ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಈಗ ಲಭ್ಯವಾಗಿ ವೈರಲ್ ಆಗುತ್ತಿದೆ. ಅಂದು ಪ್ರತೀಕ್ಷಾ ತನ್ನ ಸ್ನೇಹಿತರೊಬ್ಬರನ್ನು ಭೇಟಿಯಾಗಲು ಕುರ್ಲಾಗೆ ತೆರಳಿದ್ದರು. ಸುಮಾರು 11 ಗಂಟೆಗೆ ಹಿಂದಿರುಗಿ ಬರುವಾಗ ಕುರ್ಲಾ ರೈಲ್ವೆ ನಿಲ್ದಾಣದ 7ನೇ ಪ್ಲಾಟ್‍ಫಾರ್ಮ್‍ಗೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದಳು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+