ಟ್ರೋಲಿಗೆ ಕಡಿವಾಣ ಹಾಕಿ: ಅತ್ಯಾಚಾರದ ಬೆದರಿಕೆಗೆ ಟ್ವಿಟ್ಟಿಗರ ಆಕ್ರೋಶ

ಮುಂಬೈ, ಜುಲೈ 03: ಇದು ಟ್ರೋಲ್ ಕಾಲ. ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡ ರಾಜಕಾರಣಿಗಳಂತೂ ಟ್ರೋಲ್ ಭಯಕ್ಕಾದರೂ ಮೈ ಎಲ್ಲಾ ಕಣ್ಣಾಗಿಸಿಕೊಂಡಿರಬೇಕಾದ ಪರಿಸ್ಥಿತಿ ಇಂದಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರ 10 ವರ್ಷದ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ @GirishK1605 ಎಂಬ ಟ್ರೋಲಿಗ ಟ್ವೀಟ್ ಮಾಡಿದ್ದ. ಈ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರಿಗೆ ದೂರು ನೀಡಿದ ಅವರ ನಿರ್ಧಾರವನ್ನು ಪಕ್ಷಭೇದ ಮರೆತು ಎಲ್ಲರೂ ಬೆಂಬಲಿಸಿದ್ದಾರೆ.

ಸಭ್ಯತೆಯ ಗೆರೆ ದಾಟದ, ವಿಮರ್ಶಾತ್ಮಕ, ವಿವೇಚನಾತ್ಮಕ, ವಿಡಂಬನಾತ್ಮಕ, ಹಾಸ್ಯಾತ್ಮಕ ಟ್ರೋಲ್ ಗಳನ್ನು ಪ್ರತಿಯೊಬ್ಬರೂ ಬೆಂಬಲಿಸುತ್ತಾರೆ. ಆದರೆ ಸಭ್ಯತೆಯ ಗೆರೆ ದಾಟಿ, ವೈಯಕ್ತಿಕ ತೇಜೋವಧೆಗೆ ಗುರಿ ಮಾಡುವ ಟ್ರೋಲ್ ಗಳು ಇಂದು ಹೆಚ್ಚಾಗಿವೆ. ಅದೇ ಕಾರಣಕ್ಕೇ ಇತ್ತೀಚೆಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ತಾಳ್ಮೆಯ ಕಟ್ಟೆಯೊಡೆದು, ಬೇಸರದ ಹೇಳಿಕೆ ನೀಡಬೇಕಾಯ್ತು!

'ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ಎಂದಿಗೂ ಸ್ವಾಗತ. ಆದರೆ ಆ ಟೀಕೆಗಳು ಅಸಭ್ಯವಾಗದಿರಲಿ. ಸಭ್ಯ ಭಾಷೆಯ ವಿಮರ್ಶೆ ಎಂದಿಗೂ ಪರಿಣಾಮಕಾರಿ' ಎಂದು ಟ್ವೀಟ್ ಮಾಡಿದ್ದರು.

ಕಾನೂನು ಪ್ರಕಾರ ಶಿಕ್ಷಿಸಿ

ಪ್ರಿಯಾಂಕಾ ಚತುರ್ವೇದಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದನ್ನು ನಾನು ಖಂಡಿಸುತ್ತೇನೆ. ಇಂಥ ಟ್ರೋಲಿಗರನ್ನ ಮತ್ತು ಈ ರೀತಿ ಫೇಕ್ ಖಾತೆಗಳನ್ನು ಹೊಂದಿರುವವರನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕು. ಈ ವಿಷಯದಲ್ಲಿ ಸರಿಯಾದ ಕ್ರಮ ಕೈಗೊಳ್ಳುವಂತೆ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸುಪ್ರಿಯಾ ಸುಲೆ ಟ್ವೀಟ್ ಮಾಡಿದ್ದಾರೆ.

ಇಂಥವನ್ನು ನಿರ್ಲಕ್ಷ್ಯಿಸಬೇಡಿ

ಇಬ್ಬರು ಹೆಣ್ಣು ಮುಕ್ಕಳ ತಂದೆಯಾಗಿ ನನಗೆ ಪ್ರಿಯಾಂಕಾ ಚತುರ್ವೇದಿ ಅವರ ನೀವು ಅರ್ಥವಾಗುತ್ತದೆ. ಇಂಥ ಬೆದರಿಕೆಗಳನ್ನು ನಿರ್ಲಕ್ಷ್ಯಿಸಿದರೆ ಟ್ರೋಲಿಗರಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಧು ಗೌಡ ಯಕ್ಷಿ ಟ್ವೀಟ್ ಮಾಡಿದ್ದಾರೆ.

ಸಂಸ್ಕೃತಿಗೆ ಮಾಡಿದ ಅವಮಾನ

ನಮ್ಮ ದೇಶದ ವಿದೇಶಾಂಗ ಸಚಿವೆಯನ್ನು ಟ್ರೋಲ್ ಮಾಡಿದ್ದು, ಇದೀಗ ಕಾಂಗ್ರೆಸ್ ನಾಯಕಿಯನ್ನು ಟ್ರೋಲ್ ಮಾಡುತ್ತಿರುವುದು ಒಪ್ಪುವ ವಿಷಯವಲ್ಲ. ಇವಕ್ಕೆಲ್ಲ ಕೊನೆ ಎಂದು? ಇದು ನಮ್ಮ ಸಂಸ್ಕೃತಿಗೆ ಕಪ್ಪು ಚುಕ್ಕೆ. ಪಕ್ಷ ಯಾವುದೇ ಇರಲಿ ಸ್ತ್ರೀಯರಿಗೆ ಗೌರವ ನೀಡಬೇಕು. ಇಂಥವರಿಗೆ ಕಡಿವಾಣ ಹಾಕಬೇಕು ಎಂದು ಅಭಿಜ್ಞಾನ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

ನಾವು ನಿಮ್ಮೊಂದಿಗಿದ್ದೇವೆ

ನಿಮ್ಮ ಪುತ್ರಿಕೆ ಬಂದ ಬೆದರಿಕೆಯನ್ನು ನಾವು ಕಟು ಶಬ್ದಗಳಿಂದ ಖಂಡಿಸುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂಥ ಸಮಾಜಘಾತಕ ಬೆದರಿಕೆಗಳನ್ನೊಡ್ಡುವುದು, ಅದೂ ರಾಜಾರೋಷವಾಗಿ ಎಮದರೆ ಆತಂಕದ ವಿಷಯ. ಸರ್ಕಾರ ಇಂಥವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ ಅಶೋಕ್ ಚಾವನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+