Get Updates
Get notified of breaking news, exclusive insights, and must-see stories!

ವಿನೋದ್ ಖನ್ನಾ ಸಾವಿಗೆ ಟ್ವಿಟ್ಟರ್ ನಲ್ಲಿ ಗಣ್ಯರ ಸಂತಾಪ

ಇಂದು ಮುಂಬೈಯಲ್ಲಿ ಇಹಲೋಕ ತ್ಯಜಿಸಿದ ಬಾಲಿವುಡ್ ನಟ ಮತ್ತು ವಿನೋದ್ ಖನ್ನಾ(70) ಅವರ ನಿಧನಕ್ಕೆ ಅನೇಕ ಗಣ್ಯರು ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮುಂಬೈ, ಏಪ್ರಿಲ್ 27: ಇಂದು ಮುಂಬೈಯಲ್ಲಿ ಇಹಲೋಕ ತ್ಯಜಿಸಿದ ಬಾಲಿವುಡ್ ನಟ ಮತ್ತು ವಿನೋದ್ ಖನ್ನಾ(70) ಅವರ ನಿಧನಕ್ಕೆ ಅನೇಕ ಗಣ್ಯರು ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟರೂ, ಬಿಜೆಪಿಯ ಸಕ್ರಿಯ ರಾಜಕಾರಣಿಯೂ ಆಗಿದ್ದ ವಿನೋದ್ ಖನ್ನಾ ಅವರು ಬ್ಲಾಡರ್ ಕ್ಲಾಸಿನೋಮಾ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು.

ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಮುಂಬೈನಲ್ಲಿರುವ ಸರ್. ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ ದಾಖಲಾಗಿದ್ದ ವಿನೋದ್ ಖನ್ನಾ ಇಂದು (ಏಪ್ರಿಲ್ 27) ಬೆಳಿಗ್ಗೆ 11:20ರ ವೇಳೆಗೆ ಕೊನೆಯುಸಿರೆಲೆದರು. ಅಮರ್, ಅಕ್ಬರ್, ಆಂಟನಿ ಚಿತ್ರದ 'ಅಮರ್' ಪಾತ್ರದಿಂದಾಗಿ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ವಿನೋದ್ ಖನ್ನಾ ಇದೀಗ ಅಮರರಾಗಿದ್ದಾರೆ ಎಂದು ಕೆಲವರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.[UPDATED: ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಇನ್ನಿಲ್ಲ]

ಮೇರೆ ಅಪ್ನೆ, ಮೇರಾ ಗಾಂವ್ ಮೇರಾ ದೇಶ್, ಗದ್ದರ್, ಜೈಲ್ ಯಾತ್ರಾ, ಇಮ್ತಿಹಾನ್, ಅಮರ್ ಅಕ್ಬರ್ ಆಂಟನಿ, ಖುರ್ಬಾನಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದ ವಿನೋದ್ ಖನ್ನಾ ಬಾಲಿವುಡ್ ಅಂಗಳದಲ್ಲಿ ಅಮರರಾಗಿದ್ದಾರೆ. ಅವರಿಗೆ ಟ್ವಿಟ್ಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿದ ಗಣ್ಯರ ನುಡಿ ಇಲ್ಲಿದೆ...

ನರೇಂದ್ರ ಮೋದಿ

ಒಬ್ಬ ನಟರಾಗಿದ್ದ, ಉತ್ತಮ ನಾಯಕರಾಗಿದ್ದ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅತ್ಯುತ್ತಮ ಮನುಷ್ಯರಾಗಿದ್ದ ವಿನೋದ್ ಖನ್ನಾ ಅವರನ್ನು ನಾನೆಂದಿಗೂ ನೆನಪಿಸಿಕೊಳ್ಳುತ್ತೇನೆ. ಅವರ ಸಾವಿನಿಂದ ಅತೀವ ದುಃಖವಾಗಿದೆ, ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಅರುಣ್ ಜೇಟ್ಲಿ

ಅತ್ಯುತ್ತಮ ನಟ ಮತ್ತು ಬಿಜೆಪಿ ಸಂಸದರಾಗಿದ್ದ ವಿನೋದ್ ಖನ್ನಾ ಅವರ ನಿಧನಕ್ಕೆ ತೀವ್ರ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ದಯಪಾಲಿಸಲಿ, ಅವರ ಕುಟುಂಬಕ್ಕೂ ಈ ನೋವನ್ನು ಶಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.

ಕರಣ್ ಜೋಹರ್

ವಿನೋದ್ ಖನ್ನಾ ಅವರ ಅಭಿನಯಕ್ಕೆ ಸಮನಾಗಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ. ಅವರು ತೋರಿಸಿಕೊಟ್ಟ ಹಾದಿಯಲ್ಲೇ ನಾವಿಂದು ನಡೆಯುತ್ತಿದ್ದೇವೆ. ಅವರಿಗಾಗಿ ನಮ್ಮ ಪ್ರಾರ್ಥನೆ ಮತ್ತು ಸಂತಾಪ ಎಂದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಟ್ವೀಟ್ ಮಾಡಿದ್ದಾರೆ.

ಅನುಪಮ್ ಖೇರ್

ವಿನೋದ್ ಖನ್ನಾ ಅವರ ವ್ಯಕ್ತಿತ್ವವೆಂದರೆ ಅದಕ್ಕೆ ಆಯಸ್ಕಾಂತದ ಸೆಳೆತವಿತ್ತು. ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಅವರಿಗಿದ್ದಿದ್ದು ಒಂದು ಚಾರ್ಮಿಂಗ್ ವ್ಯಕ್ತಿತ್ವ. ಅವರು ನಿಜಕ್ಕೂ ದಯಾಮಯಿ, ಎಲ್ಲರನ್ನೂ ಪ್ರೀತಿಸುತ್ತಿದ್ದವರು. ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ಎಂದು ನಟ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.

ವೆಂಕಯ್ಯ ನಾಯ್ಡು

ವೆಂಕಯ್ಯ ನಾಯ್ಡು

ಎನ್ ಡಿ ಎ- 1 ಸರ್ಕಾರದಲ್ಲಿ ನನ್ನ ಶೋದ್ಯೋಗಿಯಾಗಿದ್ದ ವಿನೋದ್ ಖನ್ನಾ ಅವರ ನಿಧನ ಅತೀವ ನೋವು ತಂದಿದೆ. ಅವರು ನಿಜಕ್ಕೂ ಒಬ್ಬ ದಂತಕತೆಯಾಗಿದ್ದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕೇಂದ್ರ ನಗರಾಬಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+