ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದ ಕಳ್ಳ ಮಾಡಿದ್ದೇನು?: ತಮಾಷೆಯ ವಿಡಿಯೋ

ಮುಂಬೈ, ಸೆಪ್ಟೆಂಬರ್ 9: ದಾರಿಯಲ್ಲಿ ಕೆಟ್ಟುನಿಂತಿದ್ದ ವಾಹನವನ್ನು ಸರಿಪಡಿಸುತ್ತಿದ್ದ ವ್ಯಕ್ತಿಯ ಪ್ಯಾಂಟ್ ಜೇಬಿನಿಂದ ಪರ್ಸ್ ಎಗರಿಸಿದ ವ್ಯಕ್ತಿ, ತಾನು ಸಿಸಿಟಿಟಿ ಕ್ಯಾಮೆರಾದಲ್ಲಿ ಸೆರೆಯಾದದ್ದನ್ನು ನೋಡಿ ಪರ್ಸನ್ನು ಅದರ ಮಾಲೀಕನಿಗೆ ಮರಳಿಸಿದ ವಿಡಿಯೋವೊಂದನ್ನು ವಾಟ್ಸಾಪ್‌ನಲ್ಲಿ ನೀವು ನೋಡಿರಬಹುದು.

ಸಿಸಿಟಿವಿ ಕ್ಯಾಮೆರಾ ಅನೇಕ ಕಳ್ಳರನ್ನು ಪ್ರಮಾಣಿಕರನ್ನಾಗಿಸುತ್ತದೆ ಎಂಬ ಮಾತು ಈ ವಿಡಿಯೋದೊಟ್ಟಿಗೆ ಹರಿದಾಡುತ್ತಿತ್ತು. ಇಂಥಹದ್ದೇ ಮತ್ತೊಂದು ವಿಡಿಯೋ ಮುಂಬೈನಲ್ಲಿ ಲಭ್ಯವಾಗಿದೆ.

ಸಾಮಾನ್ಯವಾಗಿ ಜೇಬುಗಳ್ಳರು ಸೂಪರ್ ಮಾರ್ಕೆಟ್‌ಗಳು ಮತ್ತು ಸಾರ್ವಜನಿಕ ಸಾರಿಗೆಗಳನ್ನು ತಮ್ಮ ಚಟುವಟಿಕೆಗಳನ್ನು ನಡೆಸಲು ಆಯ್ದುಕೊಳ್ಳುತ್ತಾರೆ. ಈ ಕಾರಣದಿಂದಲೇ ನಾವು ನಮ್ಮ ಬಳಿ ಇರುವ ಹಣ, ಒಡವೆ ಮತ್ತಿತರ ಅಮೂಲ್ಯ ವಸ್ತುಗಖ ಕುರಿತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಎಚ್ಚರಿಕೆಯಿಮದ ಇರಬೇಕು.

Thief caught in cctv camera footage while stealing wallet in mumbai

ಆದರೆ, ಜೇಬಿಗೆ ಕತ್ತರಿ ಹಾಕುವ, ನಿಮ್ಮ ಗಮನ ಬೇರೆಲ್ಲೋ ಇದ್ದಾಗ ನಿಮಗೆ ಗೊತ್ತಾಗದಂತೆಯೇ ಪರ್ಸ್ ಎಗರಿಸುವ ಕಳ್ಳರ ಮನಸ್ಸಿನಲ್ಲಿ ಏನಿರಬಹುದು? ಹಗಲು ರಾತ್ರಿ ಕಳ್ಳತನ ನಡೆಸಿ ಅದರಿಂದಲೇ ಬದುಕುವವರಿಗೆ ಪೊಲೀಸರು ಅಥವಾ ಇನ್ಯಾರ ಬಗ್ಗೆಯೂ ಭಯ ಇರುತ್ತದೆಯೋ ಇಲ್ಲವೋ.. ಆದರೆ ಸಿಸಿಟಿವಿ ಕ್ಯಾಮೆರಾಗಳು ಮಾತ್ರ ಈ ಕಳ್ಳರಲ್ಲಿ ಭಯ ಬಿತ್ತಬಲ್ಲವು.

ಮುಂಬೈನ ಸೂಪರ್ ಮಾರ್ಕೆಟ್ ಒಂದರಲ್ಲಿ ಗ್ರಾಹಕನ ಸೋಗಿನಲ್ಲಿ ಬಂದು ಪರ್ಸ್ ಕದಿಯುತ್ತಿದ್ದ ಯುವಕನೊಬ್ಬ, ತನ್ನ ಮುಂದೆ ನಿಂತಿದ್ದ ವ್ಯಕ್ತಿ ಪ್ಯಾಂಟ್‌ ಜೇಬಿನಿಂದ ಪರ್ಸ್ ಕದ್ದಿದ್ದಾನೆ. ಆದರೆ, ಮುಖ ತಿರುಗಿಸಿ ನೋಡಿದಾಗ ಆತನಿಗೆ ಸಿಸಿಟಿವಿ ಕ್ಯಾಮೆರಾ ಕಂಡಿದೆ.

ತನ್ನ ಸಾಧನೆ ಅದರಲ್ಲಿ ಸೆರೆಯಾಗಿರುವುದು ಕಂಡು ಪೆಚ್ಚಾದ ಆತ ಪರ್ಸ್ ಬಿದ್ದಿತ್ತೋ ಎಂದೋ ಏನೋ ಕಥೆ ಹೇಳಿ ಆ ವ್ಯಕ್ತಿಗೆ ಪರ್ಸ್ ಮರಳಿಸಿದ್ದಾನೆ. ತನ್ನನ್ನೇನೂ ಮಾಡಬೇಡ ಎಂದು ಕ್ಯಾಮೆರಾದೆಡೆಗೆ ಕೈಮುಗಿಯುತ್ತಾ ಹಲ್ಲು ಕಿಸಿದಿದ್ದಾನೆ.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಮುಂಬೈ ಪೊಲೀಸರು ಹಂಚಿಕೊಂಡಿದ್ದಾರೆ. ಇದು ತಮಾಷೆಯಾಗಿ ಕಾಣಿಸುತ್ತದೆ. ಆದರೆ, ವಾಸ್ತವದಲ್ಲಿ ಅದರ ಪರಿಣಾಮಗಳು ಮಾತ್ರ ಬಲು ಗಂಭೀರವಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+