ಮತ್ತೆ ಲಾಕ್​ಡೌನ್​ ಮಾಡುವ ದಿನ ಸಮೀಪಿಸುತ್ತಿದೆ, ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ

ಮುಂಬೈ, ಜನವರಿ 1: ದೇಶದ ಒಂದೊಂದೇ ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಜೊತೆಗೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿಯೂ ಕಾಡುತ್ತಿದೆ.

ಸದ್ಯ ಮಹಾರಾಷ್ಟ್ರ, ಕೇರಳ ಮತ್ತು ದೆಹಲಿಗಳಲ್ಲಿ ಕೊರೊನಾ ಸೋಂಕು ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಮತ್ತೆ ಮೊದಲಿನಂತೆ ನಿರ್ಬಂಧ ವಿಧಿಸಲಾಗುತ್ತಿದೆ. ಈ ನಡುವೆ ಮಹಾರಾಷ್ಟ್ರ ಸಚಿವರೊಬ್ಬರು ಮತ್ತೊಮ್ಮೆ ಲಾಕ್​ಡೌನ್ ಮಾಡುವ ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಚಿವ ವಿಜಯ್ ವಡೆತ್ತಿವಾರ್, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಮಿತಿಮೀರುತ್ತಿದೆ. ಮತ್ತೆ ಲಾಕ್‌ಡೌನ್​ ಹೇರುವ ಕಾಲ ಸಮೀಪಿಸುತ್ತಿದೆ. ಆದರೆ ಈ ಬಗ್ಗೆ ಅಂತಿಮವಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೇ ನಿರ್ಣಯ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

The Final Decision To Lockdown Is In The Hands Of CM Says Maharashtra Minister

ಮಹಾರಾಷ್ಟ್ರದಲ್ಲಿ ಕಳೆದ 11 ದಿನಗಳಿಂದಲೂ ಕೊವಿಡ್-​ 19 ಸೋಂಕಿತರ ಸಂಖ್ಯೆ ಏರುತ್ತಿದೆ. ದಿನದಲ್ಲಿ ದಾಖಲಾಗುವ ಪ್ರಕರಣ​ಗಳು ಹೆಚ್ಚುತ್ತಿವೆ. ಕೆಲವೇ ದಿನಗಳ ಹಿಂದೆ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುಂಬೈನಲ್ಲಿ ಜನವರಿ 7ರವರೆಗೂ ಸೆಕ್ಷನ್​ 144 ಜಾರಿಯಲ್ಲಿದೆ.

ಇನ್ನು ಮಹಾರಾಷ್ಟ್ರದಾದ್ಯಂತ ಯಾವುದೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಸಮಾರಂಭ ನಡೆಸಿದರೂ 50 ಜನ ಮಾತ್ರ ಸೇರಬಹುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಜನ ಪಾಲ್ಗೊಳ್ಳಬಹುದು ಎಂದು ನಿರ್ಬಂಧ ವಿಧಿಸಲಾಗಿದೆ.

ಹೊಸವರ್ಷದ ಮುನ್ನಾದಿನವೇ ಮುಂಬೈ ಪೊಲೀಸ್ ಆಯುಕ್ತರು ಸೆಕ್ಷನ್​ 144 ಹೇರಿದ್ದಾರೆ. ಕಡಲತೀರಗಳು, ತೆರೆದ ಮೈದಾನಗಳು, ಉದ್ಯಾನಗಳು ಮತ್ತು ಅಂಥ ಯಾವುದೇ ಸಾರ್ವಜನಿಕ ಸ್ಥಳಗಳಿಗೆ ಜನರು ಮುಂಜಾನೆ 5ರಿಂದ ಸಂಜೆ 5ರವರೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿದ್ದಾರೆ. ಈ ಆದೇಶ ಜನವರಿ 15ರವರೆಗೂ ಇರಲಿದೆ.

The Final Decision To Lockdown Is In The Hands Of CM Says Maharashtra Minister

ಮಹಾರಾಷ್ಟ್ರದಲ್ಲಿ ಶುಕ್ರವಾರ ಒಂದೇ ದಿನ 8067 ಕೊರೊನಾ ಸೋಂಕು ಪ್ರರಕರಣ​ಗಳು ದಾಖಲಾಗಿವೆ. ಗುರುವಾರ 2699 ಪ್ರಕರಣಗಳು ದಾಖಲಾಗಿದ್ದವು. ಒಂದೇ ದಿನದಲ್ಲಿ 600ರಷ್ಟು ಹೆಚ್ಚಳಗೊಂಡಿದ್ದು, ಸಹಜವಾಗಿಯೇ ಆತಂಕ ಮೂಡಿಸಿದೆ.

ಶುಕ್ರವಾರದ 8067 ಕೊರೊನಾ ಪ್ರಕರಣಗಳಲ್ಲಿ ಮುಂಬೈ ನಗರ ಒಂದರಲ್ಲೇ 5428 ಪ್ರಕರಣಗಳು ದಾಖಲಾಗಿವೆ. ಹಾಗೇ, ನಿನ್ನೆ 4 ಓಮಿಕ್ರಾನ್​ ಪ್ರಕರಣಗಳೂ ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸದ್ಯ 454 ಓಮಿಕ್ರಾನ್​ ಸೋಂಕಿತರು ಇದ್ದು, 157 ಮಂದಿ ಚೇತರಿಸಿಕೊಂಡು ಬಿಡುಗಡೆ​ ಆಗಿದ್ದಾರೆ. 26 ಜನ ಹೊರ ರಾಜ್ಯದವರು ಎಂದು ಹೇಳಲಾಗಿದೆ.

Recommended Video

      ಮಾತಾ ವೈಷ್ಣೋದೇವಿ ಮಂದಿರದಲ್ಲಿ ಕಾಲ್ತುಳಿತದಿಂದ 12 ಭಕ್ತರ ಸಾವು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+