ಕಾರು ಚಾಲಕನಿಂದ ಬಾಲಕಿಯರ ಮೇಲೆ 6 ತಿಂಗಳು ಅತ್ಯಾಚಾರ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಥಾಣೆ, ಡಿಸೆಂಬರ್ 25: 35 ವರ್ಷದ ಕಾರು ಚಾಲಕನೊಬ್ಬ ಮಾಡಿದ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಆತನ ಕಾರಿನಲ್ಲಿ ಇಬ್ಬರು ಶಾಲಾ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಅಂಶ ಗೊತ್ತಾಗಿದೆ. ಇಬ್ಬರು ಬಾಲಕಿಯರ ಮೇಲೆ ಕಳೆದ ಆರು ತಿಂಗಳಿಂದ ಅತ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.

ಆತನ ಹೆಸರು ತುಳಸಿರಾಮ್ ಮನೇರೆ. ಥಾಣೆಯ ಭಿವಂಡಿಯವನು. ಶನಿವಾರ ರಾತ್ರಿ ಬಂಧಿಸಲಾಗಿದೆ. ಆರೋಪಿಯು ಎಂಟು-ಒಂಬತ್ತು ವರ್ಷದ ಬಾಲಕಿಯರ ಮೇಲೆ ತನ್ನ ಕಾರಿನಲ್ಲಿ, ವಿವಿಧ ಸ್ಥಳಗಳಲ್ಲಿ ಕಳೆದ ಅರು ತಿಂಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಸದ್ಯಕ್ಕೆ ಇಬ್ಬರ ಮೇಲಿನ ಕೃತ್ಯ ಬೆಳಕಿಗೆ ಬಂದಿದೆ. ತನ್ನ ಕಾರಿನಲ್ಲಿ ಪ್ರಯಾಣಿಸಿದ ಹಲವು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.[ಗೂಳೂರಿನ ತೋಪಿನಲ್ಲಿ ವಿಧವೆ ಮೇಲೆ ಗ್ಯಾಂಗ್ ರೇಪ್]

Thane Van Driver Who Raped 2 School Girls For 6 Months Arrested

'ತಮ್ಮ ಮೇಲಿನ ಲೈಂಗಿಕ ದೌರ್ಜನ್ಯವನ್ನು ಬಾಲಕಿಯರು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಆ ನಂತರ ಪೋಷಕರು ಶಾಲೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶಾಲೆಯ ಶಿಕ್ಷಕರು ದೂರು ದಾಖಲಿಸಿದ್ದಾರೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376, 323, 506ರ ಅಡಿ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 35-year-old man from Bhiwandi in Thane, who used his four-wheeler to ferry school children, was arrested for allegedly raping two minor girls for the last six months.
Please Wait while comments are loading...