ಕೊಳೆತ ಸ್ಥಿತಿಯಲ್ಲಿ ಶವ, ಮುಂಬೈನಲ್ಲೊಂದು ಮನ ಕರಗುವ ಘಟನೆ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 7: ಇದು ಹೃದಯ ಕಲಕುವ ಘಟನೆ. ನಡೆದಿರುವುದು ಮಹಾರಾಷ್ಟ್ರದ ಮುಂಬೈನಲ್ಲಿ. ಅಂಧೇರಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಒಂಟಿ ಮಹಿಳೆಯನ್ನು ನೋಡುವ ಸಲುವಾಗಿ ಅವರ ಒಬ್ಬನೇ ಮಗ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತೆ?

ಮುಂಬೈ ಮಹಾನಗರ ಸಾರಿಗೆ ನೌಕರರ ಮುಷ್ಕರ; ಜನಜೀವನ ಅಸ್ತವ್ಯಸ್ತ

ಇಲ್ಲಿನ ಅಂಧೇರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಅರವತ್ಮೂರು ವರ್ಷದ ಆಶಾ ಸಹಾನಿ ಮೃತರು.

Techie finds mother's decomposed body In Mumbai home

"ಪತಿಯ ಮರಣಾ ನಂತರ ಅಂಧೇರಿಯ ಲೋಖಂಡ್ ವಾಲಾ ಸಮುಚ್ಚಯದಲ್ಲಿ ಆಶಾ ಒಂಟಿಯಾಗಿ ವಾಸವಿದ್ದರು. ಆಕೆಯ ಒಬ್ಬನೇ ಮಗ, ರಿತುರಾಜ್, ಸಾಫ್ಟ್ ವೇರ್ ಎಂಜಿನಿಯರ್ ಅಮೆರಿಕದಲ್ಲಿ ವಾಸವಿದ್ದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಬಂಧನ

ರಿತುರಾಜ್ ಭಾನುವಾರ ಮುಂಬೈಗೆ ಬಂದಿದ್ದಾರೆ. ಲೋಖಂಡ್ ವಾಲಾದ ಮನೆ ತಲುಪಿ, ಕಾಲಿಂಗ್ ಬೆಲ್ ಮಾಡಿದ್ದಾರೆ. ಎಷ್ಟು ಸಮಯಕ್ಕೂ ಬಾಗಿಲು ತೆಗೆಯದಿದ್ದಾಗ ನಕಲಿ ಕೀಲಿ ಕೈ ಮಾಡುವವರನ್ನು ಕರೆಸಿ, ಅವರ ಮೂಲಕ ಬಾಗಿಲು ತೆರೆಯಲಾಗಿದೆ.

Mumbai : A Media Company Introduced “First Day of Period” Leave Policy For Women Employees

ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದ ದೇಹವು ಪತ್ತೆಯಾಗಿದೆ. ಆಶಾ ಯಾವಾಗ ತೀರಿಕೊಂಡಿದ್ದಾರೆ ಹಾಗೂ ಸಾವಿಗೆ ಕಾರಣ ಏನು ಎಂಬುದು ಪರೀಕ್ಷೆಗಳ ಮೂಲಕ ನಿರ್ಧಾರ ಮಾಡಬೇಕಿದೆ. ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಒಶಿವಾರ ಪೊಲೀಸರು ದೂರು ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The decomposed body of a 63-year-old woman was found at her residence in Mumbai's suburban Andheri.
Please Wait while comments are loading...