ಸುಶಾಂತ್ ಸಿಂಗ್ ಕೇಸ್: ಮೋದಿಗೆ ಮನವಿ ಮಾಡಿದ ಸಹೋದರಿ ಶ್ವೇತಾ

ಮುಂಬೈ, ಆಗಸ್ಟ್ 1: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ 'ತನ್ನ ಅಣ್ಣನ ಸಾವಿನ ಪ್ರಕರಣದ ಕುರಿತು ಒಮ್ಮೆ ಪರಿಶೀಲಿಸಿ' ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕುಟುಂಬಸ್ಥರು, ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಈ ಸಂಬಂಧ ಮುಂಬೈ ಹಾಗೂ ಬಿಹಾರದಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಸುಶಾಂತ್ ಸಾವಿಕ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಕೇಸ್ ಸಹ ದಾಖಲಿಸಿಕೊಂಡಿದೆ. ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿ ಎಂದು ಅನೇಕರು ಆಗ್ರಹಿಸುತ್ತಿದ್ದಾರೆ.

Sushant Singh’s Sister Urges PM Narendra Modi to Look Into the Case Personally

'ನಾನು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ. ಇಡೀ ಪ್ರಕರಣದ ಕುರಿತು ಒಮ್ಮೆ ಗಮನ ಹರಿಸಿ. ನಾವು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ನಂಬುತ್ತೇವೆ ಮತ್ತು ನ್ಯಾಯವನ್ನು ನಿರೀಕ್ಷಿಸುತ್ತೇವೆ. ಸತ್ಯಮೇವ ಜಯತೆ' ಎಂದು ಮೋದಿಯವರನ್ನು ಟ್ಯಾಗ್ ಮಾಡಿ ಶ್ವೇತಾ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.

'ನೀವು ಸತ್ಯಕ್ಕೆ ನಿಲ್ಲುತ್ತೀರಿ ಎಂದು ನನ್ನ ಹೃದಯ ಹೇಳುತ್ತದೆ. ನಾವು ತುಂಬಾ ಸರಳ ಕುಟುಂಬದಿಂದ ಬಂದವರು. ನನ್ನ ಸಹೋದರನಿಗೆ ಬಾಲಿವುಡ್‌ನಲ್ಲಿ ಗಾಡ್‌ ಫಾದರ್ ಇರಲಿಲ್ಲ. ನಮ್ಮಲ್ಲಿ ಯಾರೂ ಇಲ್ಲ ಇಂಡಸ್ಟ್ರಿಯಲ್ಲಿಲ್ಲ. ಈ ಪ್ರಕರಣವನ್ನು ತಕ್ಷಣವೇ ಪರಿಶೀಲಿಸಬೇಕು ಮತ್ತು ಎಲ್ಲವನ್ನೂ ಮುಕ್ತವಾಗಿ ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ನ್ಯಾಯವು ಮೇಲುಗೈ ಸಾಧಿಸುತ್ತದೆ' ಎಂದು ಮನವಿ ಮಾಡಿದ್ದಾರೆ.

Sushant Singh’s Sister Urges PM Narendra Modi to Look Into the Case Personally

ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಬಿಹಾರ ಪೊಲೀಸರು ಮುಂಬೈಗೆ ಬಂದ ವಿಚಾರಣೆ ಮಾಡುತ್ತಿದ್ದಾರೆ. ಈ ನಡುವೆ ಮುಂಬೈ ಪೊಲೀಸರು ನಮಗೆ ಸಹಕಾರ ನೀಡುತ್ತಿಲ್ಲ ಎಂದು ಬಿಹಾರ ಪೊಲೀಸರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+