• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?

|

"ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ 6 ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ, ಸ್ನೇಹಿತರು ಸದಾಕಾಲ ಜೊತೆಯಲ್ಲಿರುತ್ತಿದ್ದರು. ಮಾಧ್ಯಮಗಳಿಂದ ದೂರ ಉಳಿದಿದ್ದರು...." ಸುಶಾಂತ್ ಸಾವಿನ ಕಾರಣ ಹುಡುಕುತ್ತಾ ಹೊರಟ ಕೆಲವರು, ಮಾನಸಿಕ ಖಿನ್ನತೆ ಜೊತೆಗೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರು ಎಂದು ವರದಿ ಮಾಡಿದ್ದಾರೆ.

ಚಂದ್ರನ ಮೇಲೆ ಒಂದು ಫ್ಲಾಟ್ ಖರೀದಿಸಿದ್ದ ಏಕೈಕ ಭಾರತೀಯ ಸುಶಾಂತ್ ಅವರಿಗೆ ನಿಜಕ್ಕೂ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತಾ? ಕೊಡುಗೈ ದಾನಿಯಾಗಿದ್ದ ಸುಶಾಂತ್ ಲೆಕ್ಕವಿಲ್ಲದ್ದಷ್ಟು ಖರ್ಚು ಮಾಡಿ ಬರಿಗೈ ಮಾಡಿಕೊಂಡಿದ್ದರಾ? ಎಂಬೆಲ್ಲ ಪ್ರಶ್ನೆಗಳು ಎದ್ದಿವೆ.

ನಟ ಸುಶಾಂತ್ ಸಿಂಗ್ ಆತ್ಮಹತ್ಯೆ, ಸಿಬಿಐ ತನಿಖೆಗೆ ಆಗ್ರಹ

ಈ ನಡುವೆ 34 ವರ್ಷ ವಯಸ್ಸಿನ ಸುಶಾಂತ್ ಆತ್ಮಹತ್ಯೆ ಹಿಂದೆ ಯಾವುದೇ ಷಡ್ಯಂತ್ರ, ಬೇರೆಯವರ ಕೈವಾಡ ಸದ್ಯಕ್ಕೆ ಕಂಡು ಬಂದಿಲ್ಲ. ನೇಣು ಬಿಗಿದುಕೊಂಡು, ಉಸಿರುಗಟ್ಟಿ ಮೃತಪಟ್ಟಿದ್ದಾರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಮೊಬೈಲ್ ಫೋನ್ ಸಂದೇಶಗಳನ್ನು ಸೈಬರ್ ಸೆಲ್ ನವರು ಪರಿಶೀಲಿಸುತ್ತಿದ್ದಾರೆ. ಮಾನಸಿಕ ಖಿನ್ನತೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಮುಂಬೈ ಎಸಿಪಿ ಡಾ. ಮನೋಜ್ ಶರ್ಮ ಪ್ರತಿಕ್ರಿಯಿಸಿದ್ದಾರೆ.

ಸುಶಾಂತ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ

ಸುಶಾಂತ್ ಸಿಂಗ್ ರಜಪೂತ್ ಅವರ ಬಾವ ಒ.ಪಿ ಸಿಂಗ್, ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್ ಅವರು ಯಾರದ್ದೋ ಪಿತೂರಿ ಇರುವ ಶಂಕೆ ವ್ಯಕ್ತವಾಗಿದೆ, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವನಾಗಿರಲಿಲ್ಲ ಎಂದಿದ್ದಾರೆ.

ಸುಶಾಂತ್ ಗೆ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತಾ ಎಂಬ ಪ್ರಶ್ನೆಗೆ ಕುಟುಂಬದವರು ಸಾಧ್ಯವೇ ಇಲ್ಲ ಎಂದಿದ್ದಾರೆ. ಸುಶಾಂತ್ ಗಳಿಸಿದ ಆಸ್ತಿ ವಿವರ, ದಾನ ಧರ್ಮ, ಕನಸುಗಳತ್ತ ಗೆಳೆಯರು ಹಂಚಿಕೊಂಡಿದ್ದು, ಸುಶಾಂತ್ ಗೆ ಆರ್ಥಿಕ ಸಮಸ್ಯೆ ಎದುರಾಗಿರಲಿಲ್ಲ ಎಂದು ಸ್ಪಷ್ಟವಾಗುತ್ತದೆ.

ಸಿನಿಮಾದಲ್ಲಿ ಸುಶಾಂತ್ ದುಡಿಮೆ ಹೇಗಿತ್ತು?

ಸಿನಿಮಾದಲ್ಲಿ ಸುಶಾಂತ್ ದುಡಿಮೆ ಹೇಗಿತ್ತು?

ಸುಶಾಂತ್ ತಮ್ಮ ವೃತ್ತಿ ಬದುಕಿನಲ್ಲಿ ನಾಲ್ಕೈದು ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಚಿತ್ರವೊಂದಕ್ಕೆ ಸರಿ ಸುಮಾರು 6 ರಿಂದ 7 ಕೋಟಿ ರು ಸಂಭಾವನೆ ಗಳಿಸುತ್ತಿದ್ದರು. ಇದಲ್ಲದೆ, ಬ್ರ್ಯಾಂಡ್ ಮೌಲ್ಯ ಹೆಚ್ಚಿದ್ದಂತೆಲ್ಲ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಒಂದು ಜಾಹೀರಾತಿಗೆ ಕನಿಷ್ಠ 1 ಕೋಟಿ ರು ಗಳಿಸುತ್ತಿದ್ದರು. ಹೀಗಾಗಿ, ಸಿನಿಮಾದಿಂದ ಗಳಿಕೆ ಎಂದಿಗೂ ಕಡಿಮೆಯಾಗಿರಲಿಲ್ಲ. ಕೊವಿಡ್ 19 ಲಾಕ್ಡೌನ್ ನಿಂದ ಎಲ್ಲರಂತೆ ಸುಶಾಂತ್ ಕೂಡಾ ಸಿನಿಮಾ ಇಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿತ್ತು.

ಬಣ್ಣದ ಲೋಕಕ್ಕೆ ಹೊಂದಿಕೊಳ್ಳುತ್ತಿದ್ದರು

ಬಣ್ಣದ ಲೋಕಕ್ಕೆ ಹೊಂದಿಕೊಳ್ಳುತ್ತಿದ್ದರು

ಮುಂಬೈನ ಬಣ್ಣದ ಲೋಕಕ್ಕೆ ಜಿಗಿದು ಯಶಸ್ಸು ಕಂಡಿದ್ದ ಸುಶಾಂತ್ ಗೆ ಥಳಕು ಬಳಕು ಜಗತ್ತಿನ ನಡೆ ನುಡಿಗಳು ನಿಧಾನವಾಗಿ ಅರ್ಥವಾಗುತ್ತಿತ್ತು. ಸಿನಿಮಾ ಕ್ಷೇತ್ರದ ಕುಬೇರರ ನಡುವೆ ಸ್ಪರ್ಧಿಸಿ ಹೆಸರು ಮಾಡಿದ್ದ ಸುಶಾಂತ್ ಸರಿ ಸುಮಾರು 60-70 ಕೋಟಿ ರು ಆಸ್ತಿ ಮಾಡಿಕೊಂಡಿದ್ದರು. ಮಾಜಿ ಮ್ಯಾನೇಜರ್ ದಿಶಾ ಸಾಲಿಯನ್ ಎಲ್ಲವನ್ನು ಸೂಕ್ತವಾಗಿ ನಿಭಾಯಿಸಿದ್ದರು. ಐಶ್ವರ್ಯಾ ರೈಗೂ ಮ್ಯಾನೇಜರ್ ಆಗಿದ್ದ ದಿಶಾ, ಈ ಬಿಹಾರಿ ಬಾಬುಗೆ ಬಿ ಟೌನ್ ವ್ಯವಹಾರ, ಗಳಿಕೆ, ಉಳಿತಾಯದ ಬಗ್ಗೆ ಹೇಳಿಕೊಟ್ಟಿದ್ದರು ಎಂದು ಆಪ್ತರು ಹೇಳಿದ್ದಾರೆ.

ದುಡಿಮೆ-ದಾನ ಧರ್ಮ ಎಲ್ಲವೂ ಸುಶಾಂತ್ ಗೆ ಸುಲಭ

ದುಡಿಮೆ-ದಾನ ಧರ್ಮ ಎಲ್ಲವೂ ಸುಶಾಂತ್ ಗೆ ಸುಲಭ

ಜೀವನಕ್ಕೆ ಅಗತ್ಯವಾದಷ್ಟು ದುಡಿಮೆ, ಅದಕ್ಕಿಂತ ಹೆಚ್ಚಿನ ದಾನ ಧರ್ಮದಲ್ಲಿ ಸುಶಾಂತ್ ತೊಡಗಿಕೊಂಡಿದ್ದರು. ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಕೇರಳ ಸಿಎಂ ಪರಿಹಾರ ನಿಧಿಗೆ 1 ಕೋಟಿ ರು ದೇಣಿಗೆ ನೀಡಿದ್ದರು. ನಾಗಾಲ್ಯಾಂಡ್ ಗೆ 1.25 ಕೋಟಿ ರು ನೀಡಿದ್ದರು. ಮಹಾರಾಷ್ಟ್ರ, ಬಿಹಾರದ ನಿರ್ಗತಿಕರಿಗೆ ಲಕ್ಷಾಂತರ ರುಪಾಯಿ ನೀಡಿ ನೆರವಾಗಿದ್ದರು. ದುಡ್ಡು ಇದ್ದರೆ ತಾನೇ ಹೀಗೆಲ್ಲ ದೇಣಿಗೆ ನೀಡಲು ಸಾಧ್ಯ, ಚಂದ್ರನ ಮೇಲೆ ನಿವೇಶನ ಖರೀದಿಸಿದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಹೊಂದಿದ್ದ ಸುಶಾಂತ್ ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸುಶಾಂತ್ ಸಿಂಗ್ 150 ಕನಸು ಕಂಗಳ ಸ್ಟಾರ್

ಸುಶಾಂತ್ ಸಿಂಗ್ 150 ಕನಸು ಕಂಗಳ ಸ್ಟಾರ್

ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ 34 ವರ್ಷ ವಯಸ್ಸಿನ ಸುಶಾಂತ್ ತನ್ನ ವೃತ್ತಿಯನ್ನು ಎಂಜಾಯ್ ಮಾಡುವ ನಟ ಪೈಕಿ ಒಬ್ಬರೆನಿಸಿದ್ದರು. ಅವರ ಇನ್ಸ್ಟಾಗ್ರಾಂ ಪೋಸ್ಟ್ ಕುತೂಹಲಕಾರಿಯಾಗಿರುತ್ತಿತ್ತು. ಶಿವನ ಭಕ್ತರಾಗಿದ್ದ ಸುಶಾಂತ್ ಚಂದ್ರನ ಮೇಲೆ ನಿವೇಶನ ಖರೀದಿಸಿದ್ದಲ್ಲದೆ ಸುಮಾರು 6 ಲಕ್ಷ ಬೆಲೆಯ ಟೆಲಿಸ್ಕೋಪ್(Meade 14″ LX600) ತರಿಸಿಕೊಂಡು ಶನಿ ಗ್ರಹದ ಉಂಗುರವನ್ನು ನೋಡುವ ತವಕದಲ್ಲಿದ್ದರು.

ಬೋಯಿಂಗ್ 737 flight stimulator ಹೊಂದಿದ್ದರು. ವಿಮಾನ ಪೈಲಟ್ ಗಳು ತರಬೇತಿ ಸಂದರ್ಭದಲ್ಲಿ ಬಳಸುವ ಸಾಧನವನ್ನು ಹೊಂದಿದ್ದ ಸುಶಾಂತ್ ಪೈಲಟ್ ಲೈಸನ್ ಗಳಿಸುವ ಕನಸಿದೆ ಎಂದಿದ್ದರು.

ಬೈಕ್, ಕಾರು ಕ್ರೇಜ್ ಸುಶಾಂತ್ ಅವರಿಗೂ ಇತ್ತು

ಬೈಕ್, ಕಾರು ಕ್ರೇಜ್ ಸುಶಾಂತ್ ಅವರಿಗೂ ಇತ್ತು

ಸುಮಾರು 25,09,000 ರು ಬೆಲೆಯ BMW K 1300 R ಬೈಕ್, ಐಷಾರಾಮಿ ಕಾರುಗಳಾದ 2 ಕೋಟಿ ರು ಬೆಲೆಯ ಮಸೆರೆಟ್ಟಿ ಕ್ವಟ್ರೊಪೊರ್ಟೆ, ಲ್ಯಾಂಡ್ ರೋವರ್, ರೇಂಜ್ ರೋವರ್ ಎಸ್ ಯುವಿ ಹೊಂದಿದ್ದರು. ತಮ್ಮ ಕನಸುಗಳ ಬಗ್ಗೆ ಹಂಚಿಕೊಳ್ಳುತ್ತಿದ್ದ ಸುಶಾಂತ್ ಅವರು ಚಂದ್ರನ ಮೇಲಿನ ನಿವೇಶನದ ಬಗ್ಗೆ ಭಾರಿ ಕುತೂಹಲ, ಗಂಭೀರ ಅಧ್ಯಯನದಲ್ಲಿ ತೊಡಗಿದ್ದರು. Mare Muscoviense ಅಥವಾ the Sea of Muscovy ಎಂದು ಕರೆಯುವ ಚಂದ್ರ ಮೇಲಿನ ಪ್ರದೇಶದಲ್ಲಿ ಸುಶಾಂತ್ ನಿವೇಶನ ಈಗಲೂ ಇದೆ. ಅಂತಾರಾಷ್ಟ್ರೀಯ ಚಂದ್ರನ ನಿವೇಶನ ನೋಂದಣಿಯಲ್ಲಿ ಹೆಸರು ದಾಖಲಿಸಿದ ಸುಶಾಂತ್ ಭೂಮಿಯಿಂದ ಈಗ ಚಂದ್ರನತ್ತ ಸಾಗಿದ್ದಂತಾಗಿದೆ.

English summary
Actor Sushant Singh's Family and close friends denied report of Financial Reasons Behind his Suicide?. Sushant didn't had financial crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X