ನಟಿ ಜಿಯಾ ಖಾನ್ ಸಾವಿನ ತನಿಖೆ ಬಗ್ಗೆ ಸ್ವಾಮಿ ಟ್ವೀಟ್

ಮುಂಬೈ, ಆ. 23: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವು ಆತ್ಮಹತ್ಯೆಯಿಂದ ಸಂಭವಿಸಿದ್ದು, ಕೊಲೆಯಾಗಿಲ್ಲ ಎಂದು ಸಿಬಿಐ ಕೇಸ್ ಮುಕ್ತಾಯಗೊಳಿಸಿದ್ದು ನೆನಪಿರಬಹುದು. ಈಗ ಎಲ್ಲೆಡೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸಿನದ್ದೇ ಸುದ್ದಿ. ಸುಶಾಂತ್ ಪ್ರಕರಣದ ಪರ ಬಹಿರಂಗವಾಗಿ ವಕಾಲತ್ತು ವಹಿಸಿದ್ದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಈಗ ಜಿಯಾ ಖಾನ್ ಪ್ರಕರಣದ ಪರ ಟ್ವೀಟ್ ಮಾಡಿದ್ದಾರೆ.

ಜಿಯಾ ಖಾನ್ ತಾಯಿ ರಬಿಯಾ ಆವರು ತಮ್ಮ ಮಗಳ ಸಾವಿನ ಬಗ್ಗೆ ಬ್ರಿಟಿಷ್ ವಿಧಿ ವಿಜ್ಞಾನ ಇಲಾಖೆ ತಜ್ಞರೊಬ್ಬರ ಅಭಿಪ್ರಾಯ ಕೇಳಿ, ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ವರದಿ ಪಡೆದುಕೊಂಡಿದ್ದರು. ಆದರೆ ನಂತರ ಯಾವುದೇ ಬೆಳವಣಿಗೆಯಾಗಿರಲಿಲ್ಲ.

ಈಗ ಸುಶಾಂತ್ ಸಿಂಗ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಕಾಣಿಸುತ್ತಿದ್ದು, ಸಿಬಿಐ ಮೂಲಕ ಪ್ರಕರಣಕ್ಕೆ ಸರಿಯಾದ ಅಂತ್ಯ ಸಿಗಲಿದೆ ಎಂದು ಸ್ವಾಮಿ ಕೂಡಾ ಪ್ರತಿಪಾದಿಸಿದ್ದರು. ಈಗ 2013ರ ಜಿಯಾಖಾನ್ ನಿಗೂಢ ಆತ್ಮಹತ್ಯೆ ಪ್ರಕರಣದ ಬಗ್ಗೆ ಸ್ವಾಮಿ ಟ್ವೀಟ್ ಮಾಡಿದ್ದು, ಜಿಯಾಖಾನ್ ಕೇವಲ ಆತ್ಮಹತ್ಯೆಯಿಂದ ಸತ್ತದ್ದು ಎಂದರೆ ಅದು ಬೋಗಸ್ ಎಂದಿದ್ದಾರೆ.

Subramanian Swamy Tweets on Jiah Khans death

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವರದಿ, 2018ರಲ್ಲಿ ಕೋರ್ಟ್ ಆದೇಶ ನೋಡಿದ್ದೇನೆ. ಆ ಕುಟುಂಬದ ಪರ ಯಾರು ವಾದಿಸಿದ್ದು? ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.

ಜಿಯಾಖಾನ್ ತಾಯಿ ರಬಿಯಾ ಕೂಡಾ ಸುಶಾಂತ್ ಹಾಗೂ ಜಿಯಾ ಇಬ್ಬರಿಗೂ ಇಂಡಸ್ಟ್ರಿಯಲ್ಲಿ ಸುಳ್ಳು ಪ್ರೇಮ, ಪ್ರೀತಿಯ ಜಾಲದಲ್ಲಿ ಸಿಲುಕಿಸಲಾಗಿತ್ತು. ಇಬ್ಬರನ್ನು ತಮ್ಮ ಕುಟುಂಬದಿಂದ ದೂರ ಇಡಲಾಗಿತ್ತು.ದೈಹಿಕ, ಮಾನಸಿಕ ಹಿಂಸೆ ನೀಡಿ ಅವರ ಜೀವನವನ್ನು ಅಂತ್ಯಗೊಳಿಸಲಾಯಿತು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+