• search
 • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಲಸೆ ಕಾರ್ಮಿಕರ ಮೇಲಿರುವ ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇನೆ: ಸೋನು ಸೂದ್

|

ಮುಂಬೈ, ಆಗಸ್ಟ್ 11: ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ವಿವಿಧೆಡೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಲು ನೆರವಾದ ನಟ ಸೋನು ಸೂದ್ ಅವರು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ್ದಾರೆ.

   ಬೆಂಗಳೂರಿನಲ್ಲಿ 50 ಸಾವಿರ ಅಂಗಡಿಗಳು ಬಂದ್ | Oneindia Kannada

   ನಾನು ವಲಸೆ ಕಾರ್ಮಿಕರ ಮೇಲಿರುವ ಪ್ರೀತಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಎಲ್ಲಾ ಸಂಶಯಗಳಿಗೂ ತೆರೆ ಎಳೆದಿದ್ದಾರೆ.ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲಾರದೆ ಹತಾಶರಾಗಿದ್ದರು, ಹಾಗಾಗಿ ಅವರಿಗೆ ನನ್ನ ಕೈಲಾದ ಸಹಾಯವನ್ನು ನಾನು ಮಾಡಿದ್ದೇನೆ.

   ಶಿವಸೇನೆ ವ್ಯಂಗ್ಯದ ಬಳಿಕ ಉದ್ಧವ್ ಠಾಕ್ರೆ ಭೇಟಿಯಾದ ಸೋನು ಸೂದ್

   ಇದಕ್ಕೆ ದಯವಿಟ್ಟು ರಾಜಕೀಯ ಬಣ್ಣ ಬಳಿಯಬೇಡಿ. ನಾನು ರಾಜಕೀಯಕ್ಕೆ ಬಂದು ಮಾಡುವುದೇನೂ ಇಲ್ಲ. ನಾನು ಅವರನ್ನು ಅವರ ಕುಟುಂಬದ ಜೊತೆ ಸೇರಿಸುವುದಷ್ಟೇ ಗುರಿಯಾಗಿತ್ತು. ಸುಮಾರು 18 ರಿಂದ 20 ಸಾವಿರ ವಲಸೆ ಕಾರ್ಮಿಕರು ಒಡಿಶಾ, ಬಿಹಾರ, ಉತ್ತರಪ್ರದೇಶ, ಜಾರ್ಖಂಡ್‌ಗೆ ತೆರಳಲು ಸಹಾಯ ಮಾಡಿದ್ದಾರೆ.

   ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ತೆರಳಿದಾಗ ಪೊಲೀಸರು ಅವರನ್ನು ತಡೆದಿದ್ದರು. ಹಾಗೆಯೇ ಮಹಾರಾಷ್ಟ್ರ ರಾಜ್ಯಪಾಲರನ್ನು ಕೂಡ ಭೇಟಿಯಾಗಿದ್ದರು.

   ನಾನು ಕೂಡ ಮುಂಬೈಗೆ ವಲಸಿಗನಾಗಿಯೇ ಬಂದಿದ್ದೆ, ನಾನು ರೈಲಿನಲ್ಲಿ ಬಂದು ಇಲ್ಲಿ ಇಳಿದಿದ್ದೆ, ಎಲ್ಲರೂ ನಗರಕ್ಕೆ ಉತ್ತಮ ಜೀವನವನ್ನು ಹೊಂದಬೇಕು ಎಂದೇ ಬಂದಿರುತ್ತಾರೆ.

   ನಗರದಲ್ಲಿರುವ ವಲಸೆ ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ, ಸಿಕ್ಕ ಸಿಕ್ಕ ವಾಹನಗಳಲ್ಲಿ ತೆರಳಿದ್ದರು.ಇತ್ತೀಚೆಗೆ ನೇಗಿಲು ಹಿಡಿದು ಉಳುಮೆ ಮಾಡುತ್ತಿದ್ದ ಯುವತಿಯರಿಬ್ಬರ ವಿಡಿಯೋ ಭಾರೀ ವೈರಲ್ ಆಗಿತ್ತು. ಇದನ್ನು ಗಮನಿಸಿದ ಬಾಲಿವುಡ್ ನಟ ಸೋನು ಸೂದ್ ಆ ಕುಟುಂಬಕ್ಕೆ ಟ್ರ್ಯಾಕ್ಟರ್ ಉಡುಗೊರೆಯಾಗಿ ನೀಡಿದ್ದರು.

   ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮಹರಾಜುಪಲ್ಲಿ ಗ್ರಾಮದ ರೈತ ನಾಗೇಶ್ವರ್ ರಾವ್ ಅವರ ಇಬ್ಬರು ಪುತ್ರಿಯರು ತಂದೆಗೆ ಕೃಷಿಯಲ್ಲಿ ಸಹಾಯ ಮಾಡಲು ಮುಂದಾಗಿದ್ದರು.

   ಎತ್ತುಗಳಿಲ್ಲದ ಕಾರಣ ಇಬ್ಬರು ಹೆಣ್ಣು ಮಕ್ಕಳೇ ನೇಗಿಲು ಹಿಡಿದು, ಉಳುಮೆ ಮಾಡುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

   English summary
   Catapulted to the national spotlight for his work in helping migrants reach their homes, actor Sonu Sood brushes off allegations that he is interested in politics and says he is doing what he is “purely out of love”.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X