ನಟಿ ಪ್ರತ್ಯೂಷಾ ಸಾವಿಗೂ ಮುನ್ನ ಗರ್ಭಿಣಿಯಾಗಿದ್ದಳಂತೆ!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 19: ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ. 24ವರ್ಷ ವಯಸ್ಸಿನ ನಟಿ ಪ್ರತ್ಯೂಷಾ ಅವರು ಗರ್ಭಿಣಿಯಾಗಿದ್ದರು ಎಂಬ ಅನುಮಾನ ಈಗ ನಿಜವಾಗಿದೆ.

ಆತ್ಮಹತ್ಯ್ಗೆ ಶರಣಾಗುವುದಕ್ಕೂ ಮುನ್ನ ಆಕೆ ಗರ್ಭಪಾತಕ್ಕೆ ಒಳಗಾಗಿರುವ ಸಾಧ್ಯತೆಯಿದೆ. ಆಕೆ ಗರ್ಭಿಣಿಯಾಗಿದ್ದು ನಿಜ ಎಂದು ವೈದ್ಯರು ದೃಢಪಡಿಸಿದ್ದಾರೆ.

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರಧಾರಿ ಪ್ರತ್ಯೂಷಾಮುಂಬೈನ ಕಂಡಿವಿಲಿಯ ಬಂಗೂರ್ ನಗರ್ ನ ಫ್ಲಾಟ್ ನಲ್ಲಿ ನೇಣು ಬಿಗಿದುಕೊಂಡು ಶುಕ್ರವಾರ(ಏಪ್ರಿಲ್ 01) ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೂಷಾ ಅವರ ಗೆಳೆಯ ರಾಹುಲ್ ಸಿಂಗ್ ರನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.['ಬಾಲಿಕಾ ವಧು' ಪ್ರತ್ಯೂಷಾ ಆತ್ಮಹತ್ಯೆಗೆ ಏನು ಕಾರಣ?]

ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಮನೆ ಮಾತಾಗಿದ್ದ ಪ್ರತ್ಯೂಷಾ ಅವರು ಕೆಲಕಾಲದಿಂದ ಮಾನಸಿಕ ಖಿನ್ನತ ಅನುಭವಿಸುತ್ತಿದ್ದರು. ಇದಲ್ಲದೆ ಆಕೆಯ ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಮನಸ್ತಾಪ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ವೈದ್ಯಕೀಯ ವರದಿಯ ಅನ್ವಯ ಆಕೆಯ ಗುಪ್ತಾಂಗದಲ್ಲಿ ಬಿಳಿದ್ರವ ಪತ್ತೆಯಾಗಿದ್ದು, ಆಕೆ ಸಾಯುವುದಕ್ಕೂ ಮುನ್ನ ಗರ್ಭಿಣಿಯಾಗಿದ್ದರೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ವರದಿ ವಿವರ ಮುಂದಿದೆ.... ಬಾಲಿಕಾ ವಧು ದುರಂತ ಸಾವಿನ ಬಗ್ಗೆ ಸುದ್ದಿ ವಿಡಿಯೋಗಾಗಿ ಕ್ಲಿಕ್ ಮಾಡಿ

ಸಾವು, ಆತ್ಮಹತ್ಯೆ ಕಾರಣ ಇನ್ನೂ ನಿಗೂಢ

ಸಾವು, ಆತ್ಮಹತ್ಯೆ ಕಾರಣ ಇನ್ನೂ ನಿಗೂಢ

ಪ್ರತ್ಯೂಷಾ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಪ್ರೇಮ ವೈಫಲ್ಯವೇ ಕಾರಣ ಎಂದು ತಕ್ಷಣಕ್ಕೆ ಹೇಳಲಾಗದು, ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಗುಪ್ತಾಂಗದಲ್ಲಿ ದ್ರವ ಪತ್ತೆಯಾಗಿರುವುದನ್ನು ಪೊಲೀಸ್ ಸರ್ಜನ್ ಡಾ ಎಸ್ ಎಂ ಪಾಟೀಲ್ ದೃಢಪಡಿಸಿದ್ದಾರೆ.

ಆಕೆ ಗರ್ಭಿಣಿಯಾಗಿದ್ದಳಾ?ಪ್ರಶ್ನೆಗೆ ಉತ್ತರ ಸಿಕ್ಕಿದೆ

ಆಕೆ ಗರ್ಭಿಣಿಯಾಗಿದ್ದಳಾ?ಪ್ರಶ್ನೆಗೆ ಉತ್ತರ ಸಿಕ್ಕಿದೆ

ಗರ್ಭಿಣಿಯಾಗಿದ್ದಳಾ ಎಂಬ ಪ್ರಶ್ನೆಗೆ ಮಾಹಿತಿ ಕಲೆ ಹಾಕಲು histopathology ಪರೀಕ್ಷೆಗೆ ಕಳಿಸಲಾಗಿತ್ತು. ಈ ಮೂಲಕ ಆಕೆ ಗರ್ಭಿಣಿಯಾಗಿದ್ದಳಾ? ಅಥವಾ ಗುಪ್ತಾಂಗದಲ್ಲಿ ಸೋಂಕು ತಗುಲಿ ದ್ರವ ಸೋರಿಕೆಯಾಗಿದೆಯೆ? ಎಂಬುದು ಪತ್ತೆ ಹಚ್ಚಲಾಗಿದೆ ಎಂದು ಡಾ ಎಸ್ ಎಂ ಪಾಟೀಲ್ ಹೇಳಿದ್ದಾರೆ.

ರಾಹುಲ್ ಜತೆ ಮದುವೆಯಾಗಿತ್ತೆ?

ರಾಹುಲ್ ಜತೆ ಮದುವೆಯಾಗಿತ್ತೆ?

ಮಿಡ್ ಡೇ ವರದಿಯಂತೆ ಆಕೆ ಹಣೆ ಮೇಲೆ ಸಿಂಧೂರ ತಿಲಕ ಇತ್ತು. ಕುತ್ತಿಗೆಯ ಕೆಳಭಾಗದಲ್ಲಿ ರಾಹುಲ್ ಎಂದು ಹಚ್ಚೆ ಹಾಕಿಸಿಕೊಂಡಿದ್ದರು. ಎಡಗೈ ಮಣಿಕಟ್ಟಿನ ಬಳಿ ಚೂಪಾದ ಆಯುಧದಿಂದ ಗಾಯ ಮಾಡಿಕೊಂಡ ಗುರುತು ಪತ್ತೆಯಾಗಿದೆ. ಈ ಹಿಂದೆ ಕೂಡಾ ಆಕೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎನ್ನಲಾಗಿದೆ.

ಜನಪ್ರಿಯ ನಟಿ ಪ್ರತ್ಯೂಷಾ

ಜನಪ್ರಿಯ ನಟಿ ಪ್ರತ್ಯೂಷಾ

ಜನಪ್ರಿಯ ನಟಿ ಪ್ರತ್ಯೂಷಾ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಸುರಾಲ್ ಸಿಮಾರ್ ಕಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರತ್ಯೂಷಾ ತನ್ನ ಬಾಯ್ ಫ್ರೆಂಡ್ ರಾಹುಲ್ ಜೊತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ಬಿಗ್ ಬಾಸ್ 7ರಲ್ಲೂ ಕೂಡಾ ಪ್ರತ್ಯೂಷಾ ಭಾಗಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Popular TV actress Pratyusha Banerjee, who committed suicide earlier this month was pregnant, confirmed doctors at JJ Hospital here in Mumbai
Please Wait while comments are loading...