ಶಿವಸೇನಾಕ್ಕೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಲ?
ನವದೆಹಲಿ, ಫೆಬ್ರವರಿ 06: 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಈ ಬಾರಿ ಶಿವಸೇನಾ ಪರ ತಮ್ಮ ರಣತಂತ್ರ ರೂಪಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನೂ ಬಂದಿಲ್ಲ.

ಬಿಹಾರದಲ್ಲಿ ಜೆಡಿಯು ಗೆಲುವಿಗೂ ಕಾರಣರಾಗಿದ್ದ ಪ್ರಶಾಂತ್ ಅವರಿಗೆ ಜೆಡಿಯು ಉಪಾಧ್ಯಕ್ಷ ಸ್ಥಾನವನ್ನು ನಿತೀಶ್ ಕುಮಾರ್ ಅವರು ನೀಡಿದ್ದಾರೆ. ಜೆಡಿಯು ಸದ್ಯ ಎನ್ಡಿಎ ಮೈತ್ರಿಕೂಟದಲ್ಲಿದೆ. ಬಿಜೆಪಿ ಜತೆ ಮುನಿಸಿಕೊಂಡಿರುವ ಶಿವಸೇನಾ ಈಗ ಪ್ರಶಾಂತ್ ರನ್ನು ತನ್ನತ್ತ ಸೆಳೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಭೇಟಿಯಾಗಿ ಭೋಜನಕೂಟದಲ್ಲಿ ಪ್ರಶಾಂತ್ ಭಾಗಿಯಾಗಿದ್ದರು. ನಂತರ ಚುನವಣಾ ತಂತ್ರಗಾರಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಯಿದೆ.

'ಪ್ರಶಾಂತ್ ಕಿಶೋರ್ ಅವರು, ಶಿವಸೇನೆಯ ಚುನಾವಣಾ ಪ್ರಚಾರದಲ್ಲಿ ಅವರು ಕಾರ್ಯ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ" ಎಂದು ಶಿವಸೇನಾ ಸಂಸದರೊಬ್ಬರು ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಅವರ ತಂಡ ಚುನಾವಣಾ ತಂತ್ರಗಳನ್ನು ಸಿದ್ಧಪಡಿಸಲಿದೆ ಹಾಗೂ ಈ ವಾರಾಂತ್ಯದಲ್ಲಿ ಮತ್ತೊಮ್ಮೆ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ ಎಂದಿದ್ದಾರೆ.
ಶಿವಸೇನೆಯ ಸ್ಥಾನೀಯ ಲೋಕಾಧಿಕಾರ್ ಸಮಿತಿ, ಯುವ ಸೇನಾ ಸಮಿತಿಯು ಚುನಾವಣಾ ತಂತ್ರ ರೂಪಿಸಲು ತನ್ನದೇ ಆದ ರೀತಿಯಲ್ಲಿ ಸಮೀಕ್ಷೆ ನಡೆಸುತ್ತಿದೆ. ಪ್ರಶಾಂತ್ ಹಾಗೂ ಉದ್ಧವ್ ನಡುವೆ ಚುನಾವಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆದಿಲ್ಲ, ಇದೊಂದು ಸೌಹಾರ್ದ ಭೇಟಿಯಾಗಿತ್ತು ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

Click it and Unblock the Notifications