ಶಿವಸೇನೆಯನ್ನು ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿಸಿ: ಕಾಂಗ್ರೆಸ್ ಶಾಸಕ
ಮುಂಬೈ, ಜೂನ್ 16: ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೀಶ್ ರಾಣೆ ಎನ್ನುವವರು ಶಿವಸೇನೆಯನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರಂತೆ! ಇದೇನು, ವೈರಿ ಪಕ್ಷಕ್ಕೆ ಇಂಥ ಮನ್ನಣೆ ನೀಡಲು ಹೋರಟಿದ್ದಾರಲ್ಲ ಎಂದು ಯೋಚಿಸುತ್ತಿದ್ದರೆ ಮುಂದೆ ಓದಿ!

ಶಿವಸೇನೆಯನ್ನು ಅವರು ಗಿನ್ನಿಸ್ ದಾಖಲೆ ಪಟ್ಟಿಗೆ ಸೇರಿಸಲು ಕಾರಣ, ಅದು ಪದೇ ಪದೇ ಬಿಜೆಪಿಯಿಂದ ಬೆಂಬಲ ವಾಪಸ್ ಪಡೆಯುತ್ತೇನೆಂದು ಹೆದರಿಸುತ್ತಿರುವುದು! ಬೆಂಬಲ ವಾಪಸ್ ಪಡೆಯದಿದ್ದರೂ, ಸಾವಿರಾರು ಬಾರಿ ಬೆಂಬಲ ವಾಪಸ್ ಪಡೆಯುತ್ತೇನೆಂದು ಸುಮ್ಮನೆ ಉಲಿಯುವ ಶಿವಸೇನೆ ಖಂಡಿತವಾಗಿಯೂ ಗಿನ್ನಿಸ್ ದಾಖಲೆ ಪಟ್ಟಿ ಸೇರಬೇಕೆಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ಈ ಸಂಬಂಧ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಪತ್ರವನ್ನು ಸಹ ಬರೆದಿದ್ದಾರೆ! 34 ವರ್ಷದ ರಾಣೆ, ಕಾಂಗ್ರೆಸ್ ಸೇರುವ ಮೊದಲು ಶಿವಸೇನೆಯಲ್ಲಿದ್ದರು ಎಂಬುದನ್ನು ಈ ಸಮಯದಲ್ಲಿ ಸ್ಮರಿಸಬಹುದು.












Click it and Unblock the Notifications