ಶೀನಾ ಬೋರಾ ಹತ್ಯೆ : ಈ ದಿನದ ಪ್ರಮುಖ ಬೆಳವಣಿಗೆಗಳು
ಮುಂಬೈ, ಸೆ. 03: ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಂದ್ರಾಣಿ ಮುಖರ್ಜಿ ಅವರ ಸದ್ಯದ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ. ಪೀಟರ್ ಅವರ ಲ್ಯಾಪ್ ಟಾಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಕೊಲೆಯ ಉದ್ದೇಶ ಪತ್ತೆಯಲ್ಲಿ ತೊಡಗಿದ್ದಾರೆ. ಈ ದಿನದ ಪ್ರಮುಖ ಬೆಳವಣಿಗೆಗಳು ಇಲ್ಲಿವೆ:
ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ಪೊಲೀಸ್ ಕಸ್ಟಡಿಯನ್ನು ಸೆಪ್ಟಂಬರ್ ಐದರ ತನಕ ವಿಸ್ತರಣೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. [150 ಕೋಟಿ ರು ಗಾಗಿ ಶೀನಾ ಬೋರಾ ಹತ್ಯೆ ನಡೆಯಿತೆ?]
ಶೀನಾ ಹತ್ಯೆ ಮಾಡಿದ್ದು ನಾನೇ ಎಂದು ಇಂದ್ರಾಣಿ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಮಾಹಿತಿ ಹೊರಬಂದ ಮೇಲೆ ಈಗ ಕೊಲೆ ಉದ್ದೇಶದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಶೀನಾ ಬಳಿ ಇದ್ದ 150 ಕೋಟಿ ರು 'ಸೇಫ್ ಮೊತ್ತ' ವೇ ಕೊಲೆಗೆ ಕಾರಣ ಎಂಬ ಅನುಮಾನ ಬಂದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಪೀಟರ್ ಮುಖರ್ಜಿ ವಿಚಾರಣೆ ನಡೆಸಲಾಗಿದೆ. ಈ ನಡುವೆ ಶೀನಾ ತಂದೆ ಎನ್ನಲಾದ ಸಿದ್ದಾರ್ಥ್ ಅವರ ಉಲ್ಟಾ ಹೇಳಿಕೆಗಳು ಪೊಲೀಸರ ನಿದ್ದೆಗೆಡಿಸಿವೆ

ಆರ್ಥಿಕ ಅವ್ಯವಹಾರ, ಆಸ್ತಿ ಕಬಳಿಕೆ ಕಾರಣವೇ?
ಆರ್ಥಿಕ ಅವ್ಯವಹಾರ, ಆಸ್ತಿ ಕಬಳಿಕೆ ಕಾರಣವೇ ಎಂದು ಪ್ರಶ್ನಿಸಿ ಸುಮಾರು 9 ಗಂಟೆಗಳ ಕಾಲ ಸ್ಟಾರ್ ಇಂಡಿಯಾ ಸಿಇಒ ಪೀಟರ್ ಮುಖರ್ಜಿ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದರು. ಶೀನಾ ಬೋರಾ ಹತ್ಯೆಯಾದ ದಿನ(ಏ. 24, 2012) ನಾನು ರೋಮ್ ನಲ್ಲಿದ್ದೆ ಎಂದು ಪೀಟರ್ ಹೇಳಿಕೆ ನೀಡಿದ್ದು, ಇಂದ್ರಾಣಿಗೆ ಕಾನೂನಾತ್ಮಕವಾಗಿ ನೆರವು ನೀಡುವ ಬಗ್ಗೆ ಯಾವುದೇ ಪ್ರಶ್ನೆಗೆ ಉತ್ತರಿಸಿಲ್ಲ.

ಶೀನಾ ಬೋರಾ ತಂದೆ ವಿಚಾರಣೆ
ಶೀನಾ ಬೋರಾ ಅವರ ತಂದೆ ಸಿದ್ದಾರ್ಥ್ ದಾಸ್ ಅವರ ವಿಚಾರಣೆ ನಡೆಸಿದ ಪೊಲೀಸರು ಕೇಳಿದ ಪ್ರಶ್ನೆಗೆ ಸಿದ್ದಾರ್ಥ್ ಉತ್ತರಿಸಿಲ್ಲ. ಶೀನಾ ಜೈವಿಕ ತಂದೆ ನಾನೇ ಎಂದು ಒಪ್ಪಿಕೊಂಡಿಲ್ಲ. ಸಿದ್ದಾರ್ಥ್ ಹಾಗೂ ಇಂದ್ರಾಣಿ ಇಬ್ಬರು ಕೋಲ್ಕತ್ತಾದ ಡಮ್ ಡಮ್ ನಲ್ಲಿ ಲ್ಲಿ ಲಿವ್ ಇನ್ ಸಂಬಂಧದಲ್ಲಿದ್ದರು.

ಸಿದ್ದಾರ್ಥ್ ಉಲ್ಟಾ ಹೇಳಿಕೆ
ಕೆಲ ದಿನಗಳ ಹಿಂದೆ ವಿಚಾರಣೆ ವೇಳೆ ಸಿದ್ದಾರ್ಥ್ ಪೊಲೀಸರ ಮುಂದೆ ನಾನೇ ಶೀನಾ ಹಾಗೂ ಮೈಖಲ್ ಬೋರಾ ಅವರ ತಂದೆ ಬೇಕಾದರೆ ಡಿಎನ್ ಎ ಪರೀಕ್ಷೆಗೂ ಸಿದ್ಧ ಎಂದಿದ್ದರು. ಇಂದ್ರಾಣಿ ಜೊತೆ ಮದುವೆಯಾಗಿಲ್ಲ, ಲಿವ್ ಇನ್ ಸಂಬಂಧದಲ್ಲಿದ್ದೆ. 1980ರಲ್ಲಿ ಒಟ್ಟಿಗೆ ಇದ್ದೆವು. ಮಗಳನ್ನು ಕೊಂದಿದ್ದರೆ ಇಂದ್ರಾಣಿಯನ್ನು ನೇಣಿಗೆ ಹಾಕಿ ಎಂದು ಹೇಳಿಕೆ ನೀಡಿದ್ದ ಸಿದ್ದಾರ್ಥ್ ಇಂದು ಶೀನಾ ನನ್ನ ಮಗಳು ಎಂದು ಹೇಳಲು ಹಿಂದೇಟು ಹಾಕುತ್ತಿದ್ದಾರೆ.

ಸಂಜೀವ್ ಖನ್ನಾ ಪಾತ್ರದ ಬಗ್ಗೆ
ಸಂಜೀವ್ ಖನ್ನಾ ಪಾತ್ರದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇಂದ್ರಾಣಿಗೆ ಕೊಲೆ ಮಾಡಲು ನೆರವಾಗಿದ್ದು ಮಾತ್ರವೇ? ಶ್ಯಾಮ್ ರಾಯ್ ಹಾಗೂ ಸಂಜೀವ್ ಖನ್ನಾ ಅವರು ಕೊಲೆಯನ್ನು ಮುಚ್ಚಿ ಹಾಕಲು ಮಾತ್ರ ಯತ್ನಿಸಿದರೆ?
ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications