ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀನಾ ಬೊರಾ ಕೇಸ್: ಮಗಳ ಜೊತೆ ಇಂದ್ರಾಣಿ ಇರಲು ಒಪ್ಪದ ಕೋರ್ಟ್

|
Google Oneindia Kannada News

ಮುಂಬೈ ಸೆಪ್ಟೆಂಬರ್ 08: ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವ ಇಂದ್ರಾಣಿ ಮುಖರ್ಜಿ ಅವರು ತಮ್ಮ ಇನ್ನೊಬ್ಬ ಪುತ್ರಿ ವಿಧಿಯೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯ ತಿಳಿಸಿದೆ. ವಿಧಿ ಮುಖರ್ಜಿ ಅವರು ವಿದೇಶದಲ್ಲಿ ನೆಲೆಸಿದ್ದರು. ಸೆಪ್ಟೆಂಬರ್ 10 ರಂದು ಅವರು ಮುಂಬೈಗೆ ಹಿಂದಿರುಗಿದ್ದಾರೆ. ಜೊತೆಗೆ ತನ್ನ ತಾಯಿ ಇಂದ್ರಾಣಿಯೊಂದಿಗೆ ಇರಲು ಅನುಮತಿ ನೀಡುವಂತೆ ನ್ಯಾಯಾಲಯದ ಅನುಮತಿ ಕೋರಿದ್ದರು.

ವಿಧಿ ಅವರ ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಇದನ್ನು ವಿರೋಧಿಸಿದೆ. "ವಿಧಿ ಮುಖರ್ಜಿ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ ಮತ್ತು ಅವರನ್ನು ಇಲ್ಲಿಯವರೆಗೆ ಪ್ರಾಸಿಕ್ಯೂಷನ್ ಪರಿಶೀಲಿಸಿಲ್ಲ. ಇಂದ್ರಾಣಿ ಮುಖರ್ಜಿಯವರು ತನ್ನ ಮಗಳಾದ ಶೀನಾ ಬೋರಾಳನ್ನು ಕೊಲೆ ಮಾಡುವ ಉದ್ದೇಶದಿಂದ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದರು. ಸಂಚಿನ ಉದ್ದೇಶದಿಂದ ಅವಳನ್ನು ರಾತ್ರಿ ಊಟಕ್ಕೆ ಕರೆದು ನಂತರ ಕಾರಿನಲ್ಲಿ ಕೊಲೆ ಮಾಡಿದ್ದಾರೆ. ನಂತರ ಅವಳ ಮೃತ ದೇಹವನ್ನು ವಿಲೇವಾರಿ ಮಾಡಿ ಆ ಮೂಲಕ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ'' ಹೇಳಿದೆ.

'ಸಾಕ್ಷಿ ಆರೋಪಿಯೊಂದಿಗೆ ವಾಸಿಸಲು ಅವಕಾಶವಿಲ್ಲ'

'ಸಾಕ್ಷಿ ಆರೋಪಿಯೊಂದಿಗೆ ವಾಸಿಸಲು ಅವಕಾಶವಿಲ್ಲ'

ವಿಶೇಷ ಸಿಬಿಐ ನ್ಯಾಯಾಧೀಶ ಎಸ್‌ಪಿ ನಾಯಕ್ ನಿಂಬಾಳ್ಕರ್ ಅವರು ವಿಧಿ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿಯಲ್ಲಿ, ಒಬ್ಬ ಸಾಕ್ಷಿ ಆರೋಪಿಯೊಂದಿಗೆ ವಾಸಿಸಲು ಅಂತಹ ಅರ್ಜಿಯನ್ನು ಸಲ್ಲಿಸಲು ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುವ ಸುಪ್ರೀಂ ಕೋರ್ಟ್ ಆದೇಶವು ಜಾಮೀನು ಷರತ್ತುಗಳಲ್ಲಿ ಒಂದಾಗಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದು ನಿರ್ದಿಷ್ಟಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ. ವಿಶೇಷ ಸಿಬಿಐ ನ್ಯಾಯಾಲಯದ ಆದೇಶದಿಂದ ವಿಧಿ ನೊಂದಿದ್ದರೆ, ಅವರು ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಅದು ಹೇಳಿದೆ.

ಇಂದ್ರಾಣಿ ಮುಖರ್ಜಿ ಪ್ರೀತಿಯಿಂದ ವಂಚಿತಳಾದ ವಿಧಿ

ಇಂದ್ರಾಣಿ ಮುಖರ್ಜಿ ಪ್ರೀತಿಯಿಂದ ವಂಚಿತಳಾದ ವಿಧಿ

ವಿಧಿ ಅವರ ಅರ್ಜಿಯಲ್ಲಿ ಅವರು ಹಲವಾರು ವರ್ಷಗಳಿಂದ ವಿದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು "ಅವಳ ತಾಯಿಯ ಬಂಧನದ ದಿನದಿಂದಲೂ ತಾಯಿಯ ಒಡನಾಟ, ಪ್ರೀತಿಯಿಂದ ವಂಚಿತಳಾಗಿದ್ದಾಳೆ ಮತ್ತು ಕಳೆದ ಏಳು ವರ್ಷಗಳಿಂದ ಅವಳೊಂದಿಗೆ ಇರಲಿಲ್ಲ. ಇದು ಅವಳ ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಂಭೀರವಾಗಿ ಪರಿಣಾಮ ಬೀರಿದೆ'' ಎಂದು ಉಲ್ಲೇಖಿಸಲಾಗಿದೆ. ವಿಧಿ "ಈಗ ಪ್ರತ್ಯೇಕತೆಯನ್ನು ನಿಭಾಯಿಸಲು ತುಂಬಾ ಕಷ್ಟಕರವಾಗಿದೆ ಮತ್ತು ಆದ್ದರಿಂದ ತಾನು ಬಯಸಿದಾಗ ಮತ್ತು ತನ್ನ ತಾಯಿಯೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಹಾಗೂ ಬದುಕಲು ಬಯಸುತ್ತಾಳೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸಿಬಿಐ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಮನವಿಯಲ್ಲಿ ಇಂದ್ರಾಣಿ ಅವರು "ಬದಲಾಯಿಸಲಾಗದ ಸೆರೆಬ್ರಲ್ ಇಷ್ಕೆಮಿಯಾದಿಂದ ಬಳಲುತ್ತಿದ್ದಾರೆ, ಅವರು ದುರ್ಬಲರಾಗಿದ್ದಾರೆ ಮತ್ತು ಸರಿಯಾದ ವೈಯಕ್ತಿಕ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ" ಎಂದು ವಿಧಿ ಅವರು ತಮ್ಮ ಸಾಮರ್ಥ್ಯ ಮತ್ತು ಸಮಯವನ್ನು ತಾಯಿಗೆ ನೀಡಲು ಬಯಸುತ್ತಾರೆ. ಮುಂಬೈನಲ್ಲಿ ಇಂದ್ರಾಣಿ ಅವರನ್ನು ಹೊರತುಪಡಿಸಿ ಯಾವುದೇ ಕುಟುಂಬವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇಂದ್ರಾಣಿ ಮುಖರ್ಜಿ ಯಾರು?

ಇಂದ್ರಾಣಿ ಮುಖರ್ಜಿ ಯಾರು?

2012ರ ಏ.24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಭಾರಿ ಮೊತ್ತದ ಹಣಕಾಸು ಅವ್ಯವಹಾರ ಇರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರ್ಕಾರ ವಹಿಸಿತ್ತು.


10 ವರ್ಷಗಳ ಹಿಂದೆ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಂದ್ರಾಣಿ ಮುಖರ್ಜಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ. ಶೀನಾ ವೋರಾ ಕಳೆದ 7 ವರ್ಷಗಳಿಂದ ಮುಂಬೈ ಜೈಲಿನಲ್ಲಿದ್ದರು ಎಂಬುವುದು ಉಲ್ಲೇಖನೀಯ ವಿಚಾರ. ಇಂದ್ರಾಣಿ ಮುಖರ್ಜಿ ಅವರ ಮಗಳು ಶೀನಾ ಬೋರಾ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇಂದ್ರಾಣಿ ಮುಖರ್ಜಿ ಅವರನ್ನು 2015ರಲ್ಲಿ ಪೊಲೀಸರು ಬಂಧಿಸಿದ್ದರು.


ಐಎನ್‌ಎಕ್ಸ್ ಮೀಡಿಯಾದ ಸಿಇಒ ಆಗಿದ್ದ ಇಂದ್ರಾಣಿ ಮುಖರ್ಜಿ ಉರ್ಫ್‌ ಅಕಾ ಪ್ಯಾರಿ ಬೋರಾ ಅವರು ಹಲವಾರು ಚಾನೆಲ್‌ಗಳನ್ನು ಪ್ರಾರಂಭಿಸಿದರು. ಅವರ ಪತಿ ಪೀಟರ್ ಮುಖರ್ಜಿ ಅವರು 2007 ರಲ್ಲಿ 9X ಚಾನೆಲ್ ಅನ್ನು ಪ್ರಾರಂಭಿಸಿದರು. ಈ ಕಂಪನಿಯಲ್ಲಿ ಅವರೇ ಅಧ್ಯಕ್ಷರಾಗಿ ಇಂದ್ರಾಣಿಯನ್ನು ಸಿಇಒ ಮಾಡಿದರು. ವರದಿಗಳ ಪ್ರಕಾರ, ಇಂದ್ರಾಣಿ ಮುಖರ್ಜಿ ಒಟ್ಟು 5 ಮದುವೆಯಾಗಿದ್ದಾರೆ.

ವಿಧಿ ಯಾರು?

ವಿಧಿ ಯಾರು?

ಶೀನಾ ಬೋರಾ ತಂದೆ ಪೀಟರ್ ಮುಖರ್ಜಿಯನ್ನು 2015ರಲ್ಲಿ ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಹಾಗೂ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ಜೈಲಿಗೆ ಕಳಿಸಲಾಗಿತ್ತು. ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರೇ ಖುದ್ದು ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಅವರ ವಿಚಾರಣೆ ನಡೆಸಿದ್ದರು.


ಇಂದ್ರಾಣಿಗೆ ಎರಡನೇ ಪತಿ ಸಂಜೀವ್ ಖನ್ನಾನಿಂದ ಇನ್ನೊಂದು ಪುತ್ರಿ ವಿಧಿ ಕೂಡ ಇದ್ದಾಳೆ. ಈಕೆ ಸದ್ಯ ಇಂಗ್ಲೆಂಡ್​ನಲ್ಲಿದ್ದು, ಪೀಟರ್ ಮುಖರ್ಜಿ ಈಕೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಶೀನಾಳನ್ನು ಹತ್ಯೆಗೈದರೆ ಪೀಟರ್ ಮುಖರ್ಜಿಯ ಎಲ್ಲ ಆಸ್ತಿಯೂ ವಿಧಿಗೆ ಸಲ್ಲುತ್ತದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನಬಹುದು. ಶೀನಾಳ ಜೈವಿಕ ಸೋದರ ಮಿಖೈಲ್ ಬೊರಾಗೆ ಎಲ್ಲದರ ಬಗ್ಗೆ ಅರಿವಿದೆ. ಆತನ ವಿಚಾರಣೆಯಿಂದ ಕೊಲೆಯ ಕಾರಣ ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ ಎಂದು ಪೊಲೀಸರು ವರದಿ ನೀಡಿದ್ದರು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರೆಸಿ ಪ್ರಮುಖ ಆರೋಪಿಗಳನ್ನು ಬಂಧಿಸಿತ್ತು.

English summary
Indrani Mukherjee, who is out on bail in the murder case of her daughter Sheena Bora, cannot live with her other daughter Vidhi, a special CBI court in Mumbai has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X