• search
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀನಾ ಬೋರಾ ಡಿಎನ್ಎ ಪರೀಕ್ಷೆ ವರದಿ ಬಹಿರಂಗ

By Mahesh
|

ಮುಂಬೈ, ಸೆ. 07: ಶೀನಾ ಬೋರಾ ಡಿಎನ್ಎ ಪರೀಕ್ಷೆ ವರದಿ ಸೋಮವಾರ ಬಹಿರಂಗಗೊಂಡಿದೆ. ತಲೆ ಬುರುಡೆ, ಮೂಳೆಗಳ ಪರೀಕ್ಷೆಯ ನಂತರ ರಾಯಗಢದಲ್ಲಿ ಸಿಕ್ಕ ಶವ ಶೀನಾ ಅವರದ್ದೇ ಎಂದು ಮುಂಬೈ ಪೊಲೀಸರು ಘೋಷಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಇಂದ್ರಾಣಿ ವಿರುದ್ಧ ಪೊಲೀಸರಿಗೆ ಬಲವಾದ ಸಾಕ್ಷಿ ದೊರಕಿದ್ದಂತಾಗಿದೆ.

ಈ ನಡುವೆ ಮಿಖಾಯಿಲ್ ಬೋರಾ ಹಾಗೂ ಇಂದ್ರಾಣಿ ಅವರ ಡಿಎನ್‌ಎ ವರದಿಯನ್ನು ಕೂಡಾ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದರು. ಇದರ ವರದಿಯೂ ಪ್ರಕಟವಾಗಿದ್ದು, ಮಿಖಾಯಿಲ್ ಬೋರಾ ಡಿಎನ್‌ಎ ಮಾದರಿ ಹಾಗೂ ಇಂದ್ರಾಣಿ ಮುಖರ್ಜಿ ಡಿಎನ್‌ಎ ಮಾದರಿ ಮ್ಯಾಚ್ ಆಗುತ್ತಿದೆ. [ಶೀನಾ ಬೋರಾ ಹತ್ಯೆ :ಇಲ್ಲಿ ತನಕದ ಪ್ರಮುಖ ಬೆಳವಣಿಗೆಗಳು]

ಬಂಧನ ವಿಸ್ತರಣೆ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ 9ಎಕ್ಸ್ ಮಾಧ್ಯಮ ಸಮೂಹದ ಸಹ ಸಂಸ್ಥಾಪಕ ಇಂದ್ರಾಣಿ ಮುಖರ್ಜಿ ಹಾಗೂ ಸಂಜೀವ್ ಖನ್ನಾ ಹಾಗೂ ಕಾರು ಚಾಲಕ ಶ್ಯಾಮ್ ರಾಯ್ ಅವರ ನ್ಯಾಯಾಂಗ ಬಂಧನದ ಅವಧಿ ಸೋಮವಾರಕ್ಕೆ ಮುಕ್ತಾಯಗೊಂಡಿತ್ತು. ಇಂದು ಎಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮುಂಬೈಯ ವೊರ್ಲಿಯಲ್ಲಿನ ಇಂದ್ರಾಣಿ ನಿವಾಸಕ್ಕೆ ತೆರಳಿ ಮುಂಬೈ ಪೊಲೀಸರು ಭಾನುವಾರ ತೀವ್ರ ತಪಾಸಣೆ ನಡೆಸಿದ್ದರು. ಘಟನೆ ನಡೆದ ದಿನದ ಪ್ರಾತ್ಯಕ್ಷಿಕೆಯನ್ನು ನೀಡುವಂತೆ ಇಂದ್ರಾಣಿಯನ್ನು ಕೇಳಿಕೊಂಡಿದ್ದರು. ಶೀನಾಳನ್ನು ಹತ್ಯೆ ಮಾಡಿದ ದಿನ ನಂತರ ಗ್ಯಾರೇಜಿನಲ್ಲಿ ಕಾರಿನಲ್ಲಿ ಶವವನ್ನು ಮಲಗಿಸಿ ಅದನ್ನು ಅಲಂಕಾರ ಮಾಡಿದ ರೀತಿ, ಮಹಾರಾಷ್ಟ್ರದ ರಾಯಗಡಕ್ಕೆ ತೆಗೆದುಕೊಂಡು ಹೋಗಿ ದಹನ ಮಾಡಿದ್ದೆಲ್ಲವನ್ನು ಇಂದ್ರಾಣಿ ವಿವರಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಮುಂಬೈ ಸುದ್ದಿಗಳುView All

English summary
In a major success to the Mumbai Police, in connection with Sheena Bora murder case, DNA test of the skull and bones, discovered days ago in the forests of Raigad, have confirmed it was her, claims Mumbai Police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more