Breaking; ಮುಂಬೈನಲ್ಲಿ ಕೋವಿಡ್ ಹೆಚ್ಚಳ, ಶಾರೂಖ್‌ಗೆ ಸೋಂಕು
ಮುಂಬೈ, ಜೂನ್ 05; ಮುಂಬೈ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಬಾಲಿವುಡ್ ನಟ ಶಾರೂಖ್ ಖಾನ್ ಸೇರಿದಂತೆ ಕೆಲವು ನಟ-ನಟಿಯರಿಗೆ ಸೋಂಕು ತಗುಲಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 4,880.
ಭಾನುವಾರ ಬಾಲಿವುಡ್ ನಟ ಶಾರೂಖ್ ಖಾನ್‌ಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದೆ. ಉಳಿದಂತೆ ಕತ್ರಿನಾ ಕೈಫ್ ಸೇರಿದಂತೆ ಕೆಲವು ನಟರಿಗೆ ಸಹ ಸೋಂಕು ತಗುಲಿದೆ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.
ಕತ್ರಿನಾ ಕೈಫ್‌ಗೆ ಸೋಂಕು ತಗುಲಿರುವುದರಿಂದ IIFA 2022 ಪ್ರಶಸ್ತಿ ಪ್ರಧಾನ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ಸಮಾರಂಭದಲ್ಲಿ ಕತ್ರಿನಾ ಪತಿ ನಟ ವಿಕ್ಕಿ ಕೌಶಲ್ ಉತ್ತಮ ನಟ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವಾರು ಗಣ್ಯರು ಟ್ವೀಟ್ ಮಾಡಿ ಶಾರೂಖ್ ಖಾನ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಕೆಲವು ದಿನಗಳ ಹಿಂದೆ ಅಕ್ಷಯ್ ಕುಮಾರ್‌ಗೆ ಕೋವಿಡ್ ಸೋಂಕು ತಗುಲಿತ್ತು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
Just came to know that our Brand Ambassador Shahrukh Khan has been detected covid positive. Pray fastest recovery for the superstar. Get well Shahrukh! Spring back asap!
— Mamata Banerjee (@MamataOfficial) June 5, 2022
ಭಾನುವಾರದ ವರದಿಯಂತೆ ಮುಂಬೈ ನಗರದಲ್ಲಿ 961 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 374 ಜನರು ಗುಣಮುಖಗೊಂಡಿದ್ದಾರೆ, ಒಬ್ಬರು ಮೃತಪಟ್ಟಿದ್ದಾರೆ. ನಗರದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,880.
ಮುಂಬೈ ನಗರದಲ್ಲಿ ಮಾರ್ಚ್‌ನಲ್ಲಿ ಒಟ್ಟು 1519, ಏಪ್ರಿಲ್‌ನಲ್ಲಿ 1795 ಹೊಸ ಪ್ರಕರಣ ದಾಖಲಾಗಿತ್ತು. ಈಗ ಮೇ ಮತ್ತು ಜೂನ್ ತಿಂಗಳಿನಲ್ಲಿ ಹೊಸ ಪ್ರಕರಣ ಏರಿಕೆ ಕಂಡುಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಶನಿವಾರ ನಗರದಲ್ಲಿ 889 ಹೊಸ ಪ್ರಕರಣ ದಾಖಲಾಗಿತ್ತು. ಮಹಾರಾಷ್ಟ್ರ ರಾಜ್ಯದಲ್ಲಿಯೇ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗುತ್ತಿರುವುದು ಮುಂಬೈ ನಗರದಲ್ಲಿ.












Click it and Unblock the Notifications