ಬೀದಿಬದಿಯ ಹೆಣ್ಣುನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನ ಬಂಧನ

ಮುಂಬೈ, ಆಗಸ್ಟ್ 23: ಪ್ರಾಣಿಯ ಮೇಲೆ ಕ್ರೌರ್ಯ ತೋರಿದ ಇಪ್ಪತ್ತೆರಡು ವರ್ಷದ ಯುವಕನನ್ನು ಖರ್ ಘರ್ ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ ಹದಿನಾಲ್ಕನೇ ತಾರೀಕು ಬೀದಿ ಬದಿಯ ಹೆಣ್ಣು ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿ ಇಪ್ಪತ್ತೆರಡು ವರ್ಷದ ಮುನ್ನಾ ಸಿಂಗ್ ಮೂಲತಃ ಬಿಹಾರದವನು. ಆತನನ್ನು ಗುರುವಾರ ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.

"ಈ ಘಟನೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ವಿಜಯ್ ರಂಗಾರೆ ಮತ್ತು 'ಪೇಟಾ'ದ ಇತರರು ಗಮನಕ್ಕೆ ತಂದರು. ಆರೋಪಿಯನ್ನು ಗುರುತಿಸಿದ ಮೇಲೆ ಬಂಧಿಸಿದ್ದೇವೆ" ಎಂದು ನವೀ ಮುಂಬೈನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

'ಪೇಟಾ' ಕಾರ್ಯಕರ್ತರಾದ ಮೀತ್ ಅಶರ್ ಮಾತನಾಡಿ, ಆರೋಪಿಯು ನಾಯಿಯ ಮೇಲೆ ಬಲಾತ್ಕಾರ ನಡೆಸುತ್ತಿರುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ.

Sexual Assault On Stray Dog; 22 Year Old Man Arrested

ವಿಡಿಯೋ ಮಾಡಿದವರು ಆಗಸ್ಟ್ ಹದಿನಾರನೇ ತಾರೀಕು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ 'ಪೇಟಾ' ಸಂಸ್ಥೆಯವರು ಮಧ್ಯಪ್ರವೇಶಿಸಿದ ನಂತರವಷ್ಟೇ ದೂರು ದಾಖಲಿಸಲಾಗಿದೆ ಎಂದು ಪೇಟಾ ಕಾರ್ಯಕರ್ತರು ಹೇಳಿದ್ದಾರೆ.

ಮುನ್ನಾ ಸಿಂಗ್ ನನ್ನು ಗುರುವಾರದಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಪೊಲೀಸ್ ವಶಕ್ಕೆ ನೀಡಲಾಗಿದೆ ಆರೋಪಿಯು ಇಂಥ ಕೃತ್ಯವನ್ನು ಈ ಹಿಂದೆ ಕೂಡ ಎಸಗಿದಂತೆ ತೋರುತ್ತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಈ ಹಿಂದೆ ಕೂಡ ಇತರ ಪ್ರಾಣಿ ಅಥವಾ ಮನುಷ್ಯರ ಮೇಲೆ ಈ ರೀತಿ ಕೃತ್ಯ ಎಸಗಿರಬಹುದು. ಆತನ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+