ಆಸ್ಪತ್ರೆಗೆ ದಾಖಲಾದ ಸಂಜಯ್ ದತ್, ಕೊವಿಡ್ 19 ನೆಗಟಿವ್

ಮುಂಬೈ, ಆ.9: ಜನಪ್ರಿಯ ನಟ ಸಂಜಯ್ ದತ್ ಅವರನ್ನು ಶನಿವಾರ ರಾತ್ರಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದೆ. ಉಸಿರಾಟದ ತೊಂದರೆ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಂಜಯ ದತ್ ಅವರಿಗೆ ಕೊರೊನಾವೈರಸ್ ಸೋಂಕು ಇರುವ ಬಗ್ಗೆ ಪರೀಕ್ಷೆ ನಡೆಸಲಾಗಿದ್ದು, ನೆಗಟಿವ್ ಎಂದು ವರದಿ ಬಂದಿದೆ.

"ನಾನು ಹುಷಾರಾಗಿದ್ದೇನೆ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ನನ್ನ ಕೊವಿಡ್ 19 ಪರೀಕ್ಷೆ ವರದಿ ನೆಗಟಿವ್ ಎಂದುಬಂದಿದೆ. ವೈದ್ಯರು ಹಾಗೂ ಸಿಬ್ಬಂದಿ ನೆರವಿನಿಂದ ನನ್ನ ಆರೈಕೆ ಚೆನ್ನಾಗಿ ನಡೆದಿದೆ. ಲೀಲಾವತಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ, ಇನ್ನೆರಡು ದಿನಗಳಲ್ಲಿ ನಾನು ಡಿಸ್ಚಾರ್ಜ್ ಆಗುತ್ತೇನೆ'' ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.

Sanjay Dutt hospitalised after complaining of breathlessness; tests negative for COVID-19

ಶನಿವಾರ ಸಂಜೆ ಎಂದಿನ ಚೆಕ್ ಅಪ್ ಆಗಿ ಲೀಲಾವತಿ ಆಸ್ಪತ್ರೆಗೆ ದಾಖಲಾದ ಸಂಜಯ್ ದತ್ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಈಗ ಆರಾಮವಾಗಿದ್ದಾರೆ ಎಂದು ಸೋದರಿ ಪ್ರಿಯಾ ದತ್ ತಿಳಿಸಿದ್ದಾರೆ.

ಸಂಜಯ್ ದತ್ ಅವರಿಗೆ ಆಂಟಿಜಿನ್ ಟೆಸ್ಟ್ ಮಾಡಿಸಲಾಗಿದ್ದು ನೆಗಟಿವ್ ಬಂದಿದೆ. ಅಗತ್ಯ ಬಿದ್ದಾಗ ಮತ್ತೊಮ್ಮೆ ಪರೀಕ್ಷಿಸಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+