ಸಿಬಿಐಗೆ ಸುಶಾಂತ್ ಕೇಸ್‌: ಅಮಿತ್ ಶಾಗೆ ಮನವಿ ಮಾಡಿದ ಗೆಳತಿ ರಿಯಾ

ಮುಂಬೈ, ಜುಲೈ 16: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಳತಿ ರಿಯಾ ಚಕ್ರವರ್ತಿ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

Recommended Video

      Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

      'ನಾನು ಸಿಂಗ್ ರಜಪೂತರ ಗೆಳತಿ ರಿಯಾ ಚಕ್ರವರ್ತಿ..., ಸುಶಾಂತ್ ಅವರ ಹಠಾತ್ ನಿಧನವಾಗಿ ಒಂದು ತಿಂಗಳು ಮೀರಿದೆ. ನನಗೆ ಸರ್ಕಾರದ ಬಗ್ಗೆ ಸಂಪೂರ್ಣ ನಂಬಿಕೆ ಇದೆ, ಆದರೆ ನ್ಯಾಯದ ಹಿತದೃಷ್ಟಿಯಿಂದ, ಈ ಸಿಬಿಐ ವಿಚಾರಣೆಯನ್ನು ಪ್ರಾರಂಭಿಸಲು ವಿನಂತಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

      ''ಯಾವ ರೀತಿ ಒತ್ತಡಗಳಿವೆ ಎಂದು ಅರ್ಥವಾಗುತ್ತದೆ. ದಯವಿಟ್ಟು ಸಿಬಿಐ ವಿಚಾರಣೆ ಆರಂಭಿಸಿ, ಈ ಹಜ್ಜೆ ಇಡಲು ಸುಶಾಂತ್ ಪ್ರೇರೇಪಿಸಿದ'' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ....

      ರಿಯಾಗೆ ಅತ್ಯಾಚಾರದ ಬೆದರಿಕೆ

      ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ದಿನದಿಂದ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ರಿಯಾ ಕಾರಣ ಎಂದು ಟೀಕಿಸುತ್ತಿದ್ದಾರೆ. ಇಷ್ಟು ದಿನ ಯಾವುದೇ ಪ್ರತಿಕ್ರಿಯೆ ನೀಡದ ರಿಯಾ ಇಂದು ಇನ್ಸ್ಟಾಗ್ರಾಂನಲ್ಲಿ ''ನನಗೆ ಅತ್ಯಾಚಾರದ ಬೆದರಿಕೆ ಸಂದೇಶ ಬರುತ್ತಿದೆ'' ಎಂದು ಹೇಳಿಕೊಂಡಿದ್ದಾರೆ.

      ನೀನು ಆತ್ಮಹತ್ಯೆ ಮಾಡಿಕೋ

      ನೀನು ಆತ್ಮಹತ್ಯೆ ಮಾಡಿಕೋ

      'ನೀನು ಆತ್ಮಹತ್ಯೆ ಮಾಡಿಕೋ, ಇಲ್ಲವಾದಲ್ಲಿ ನಿನ್ನನ್ನು ಅತ್ಯಾಚಾರ ಮಾಡಿಸುತ್ತೇನೆ' ಎಂದು ರಿಯಾ ಚಕ್ರವರ್ತಿಗೆ ಕೆಲವು ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ರಿಯಾ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದು 'ನೀವು ಏನು ಹೇಳುತ್ತಿದ್ದೀರಾ ಎನ್ನುವುದರ ಬಗ್ಗೆ ಅರಿವು ನಿಮಗಿರಲಿ, ಕಾನೂನಿನ ಪ್ರಕಾರ ಯಾರೂ ಈ ರೀತಿಯ ಕ್ರೂರವಾಗಿ ಕಿರುಕುಳಕ್ಕೆ ಒಳಗಾಗಬಾರದು ಎಂದು ನಾನು ಪುನರಾವರ್ತಿಸುತ್ತೇನೆ'' ಎಂದು ತಿಳಿಸಿದ್ದಾರೆ.

      ಸಲ್ಮಾನ್ ಖಾನ್ ವಿಚಾರಣೆ ಇಲ್ಲ

      ಸಲ್ಮಾನ್ ಖಾನ್ ವಿಚಾರಣೆ ಇಲ್ಲ

      ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರನ್ನು ವಿಚಾರಣೆ ಮಾಡಲಾಗಿದೆ. ಸಂಜಯ್ ಲೀಲಾ ಬನ್ಸಾಲಿ, ಯಶ್ ರಾಜ್ ಫಿಲಂಸ್‌ನ ಕಾಸ್ಟಿಂಗ್ ನಿರ್ದೇಶಕರು ವಿಚಾರಣೆಗೆ ಒಳಗಾಗಿದ್ದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೆಸರು ಸಹ ಈ ಪ್ರಕರಣದಲ್ಲಿ ಚರ್ಚೆಯಾಗಿದ್ದು, ಬಹುಶಃ ಮುಂಬೈ ಪೊಲೀಸರ ಮುಂದೆ ಸಲ್ಲು ವಿಚಾರಣೆಗೆ ಒಳಪಡಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಸಲ್ಮಾನ್ ಖಾನ್ ವಿಚಾರಣೆ ಇಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

      ಸುಬ್ರಮಣ್ಯನ್ ಸ್ವಾಮಿ ಪ್ರವೇಶ!

      ಸುಬ್ರಮಣ್ಯನ್ ಸ್ವಾಮಿ ಪ್ರವೇಶ!

      ಮಾಜಿ ಕೇಂದ್ರ ಸಚಿವ ಸುಬ್ರಮಣ್ಯನ್ ಸ್ವಾಮಿ ಸಹ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ತಿಳಿದುಕೊಳ್ಳಲು ಆಸಕ್ತಿ ತೋರಿಸಿದ್ದು, ಸಿಬಿಐ ತನಿಖೆಗೆ ಈ ಪ್ರಕರಣ ಸೂಕ್ತವೇ ಎಂದು ನಿರ್ಧರಿಸಲು ವಕೀಲರನ್ನು ನೇಮಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+