• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಳ

|

ಮುಂಬೈ, ಮಾರ್ಚ್ 25: ಮಹಾರಾಷ್ಟ್ರದಲ್ಲಿ ಒಂದೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಫೆಬ್ರವರಿ 14 ರಿಂದ ಮಾರ್ಚ್ 23 ರ ನಡುವೆ ಮಹಾರಾಷ್ಟ್ರದಲ್ಲಿ ಕೊರೊನವೈರಸ್ ಪ್ರಕರಣಗಳ ಹೆಚ್ಚಳವು ಹಿಂದಿನ ನಾಲ್ಕು ತಿಂಗಳಲ್ಲಿ ದಾಖಲಾದ ಪ್ರಕರಣಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ.

ಮಹಾರಾಷ್ಟ್ರದಲ್ಲಿ ಮತ್ತೆ 24,645 ಕೊರೊನಾ ಸೋಂಕಿತರು ಪತ್ತೆ: ಲಾಕ್‌ಡೌನ್‌ಗೆ ಸಿದ್ಧತೆ

ಕಳೆದ ಅಕ್ಟೋಬರ್‌ನಿಂದ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿತ್ತು, ಆದರೆ ಫೆಬ್ರವರಿ 14 ರಿಂದ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರ ತೊಡಗಿದೆ.

ಕಳೆದ 24 ಗಂಟೆಯಲ್ಲಿ ಬರೋಬ್ಬರಿ 31,855 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 25,64,881ಕ್ಕೆ ಏರಿಕೆಯಾಗಿದೆ.

ಹಾಗೆಯೇ ಇಂದು ಮಹಾರಾಷ್ಟ್ರದಲ್ಲಿ 15098 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಗುಣಮುಖರಾದ ಒಟ್ಟಾರೆ ಸೋಂಕಿತರ ಸಂಖ್ಯೆ 22,62,593ಕ್ಕೆ ಏರಿಕೆಯಾಗಿದೆ.

ಇಂದೂ ಕೂಡ ಮಹಾರಾಷ್ಟ್ರದಲ್ಲಿ 95 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 53,684ಕ್ಕೆ ಏರಿಕೆಯಾಗಿದೆ.

ಪ್ರಸ್ತುತ ಮಹಾರಾಷ್ಟ್ರದಲ್ಲಿ 2,47,299 ಸಕ್ರಿಯ ಪ್ರಕರಣಗಳಿವೆ ಎಂದು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಹಿಂದೆ 4.68 ಲಕ್ಷ ಪ್ರಕರಣಗಳು ವರದಿಯಾಗಲು 119 ದಿನಗಳನ್ನು ತೆಗೆದುಕೊಂಡಿತ್ತು. ಅಕ್ಟೋಬರ್ 18, 2020 ಮತ್ತು ಫೆಬ್ರವರಿ 13 ರ ನಡುವೆ, 4,68,897 ಹೊಸ ಪ್ರಕರಣಗಳು ವರದಿಯಾಗಿವೆ, ಅಂದರೆ ಸರಾಸರಿ ದೈನಂದಿನ ಪ್ರಕರಣಗಳ ದರ 3,940 ಎಂದು ಆರೋಗ್ಯ ಇಲಾಖೆ ದತ್ತಾಂಶ ನೀಡಿದೆ.

ಮಾರ್ಚ್ 20 ರಂದು ಮಹಾರಾಷ್ಟ್ರವು ಮೊದಲ ಬಾರಿಗೆ 30,000 ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳನ್ನು ವರದಿ ಮಾಡಿತ್ತು. ಇದು ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದ ದಿನದಿಂದ ಈ ವರೆಗೂ ದಾಖಲಾಗಿದ್ದ ಅತಿ ಹೆಚ್ಚು ಸೋಂಕು ಪ್ರಕರಣ ಎಂದು ಹೇಳಲಾಗಿತ್ತು.

English summary
The rate of increase in coronavirus cases in Maharashtra between February 14 to March 23 was three times that recorded in the previous four months, data shows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X