ರತನ್ ಟಾಟಾ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತಂತೆ!

Posted By:
Subscribe to Oneindia Kannada

ಮುಂಬೈ, ಸೆ. 11: ಭಾರತದ ಪ್ರತಿಷ್ಠಿತ ಉದ್ಯಮಿ ರತನ್ ಎನ್ ಟಾಟಾ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತಂತೆ. ನನ್ನ ಖಾತೆ ಹ್ಯಾಕ್ ಆಗಿದ್ದು ತಿಳಿದು ಆಘಾತವಾಯಿತು. ಈಗ ಎಲ್ಲವೂ ಸರಿಪಡಿಸಲಾಗಿದೆ. ದ್ವೇಷಪೂರಿತ ಟ್ವೀಟ್ ಡಿಲೀಟ್ ಮಾಡಲಾಗಿದೆ ಎಂದು ಟಾಟಾ ಅವರು ಟ್ವೀಟ್ ಮಾಡಿದ್ದಾರೆ.

ರತನ್‌ ಟಾಟಾ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್‌ ಮಾಡಿ, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ- ರಿಲಯನ್ಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವರನ್ನು ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಈ ವಿಚಾರದಲ್ಲಿ ತಮ್ಮ ತಪ್ಪಿಲ್ಲದಿದ್ದರೂ ದುರುದ್ದೇಶಪೂರ್ವಕವಾಗಿ ಯಾರೋ ಮಾಡಿರುವ ಟ್ವೀಟ್‌ ಗೆ ಟಾಟಾ ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.

Ratan Tata's Twitter Account Hacked, Flooded With 'Spurious' Messages

ಟ್ವೀಟ್ ನಲ್ಲಿ ಏನಿತ್ತು?: ಹಣದುಬ್ಬರ ತಡೆಯುವುದು ಹೇಗೆ ಎಂಬುದರ ಬಗ್ಗೆ ಮೋದಿ ಮಾತನಾಡುವ ಮುನ್ನ ತನ್ನ ಉದ್ಯೋಗದಾತರರಾದ ನೆಟ್ವರ್ಕ್ 18 ಒಡೆಯ (ಮುಖೇಶ್ ಅಂಬಾನಿ)ರನ್ನು ಮಾತನಾಡಿಸುತ್ತಿದ್ದಾರೆ ಎಂಬರ್ಥದಲ್ಲಿ ಸಚಿತ್ರ ಸಮೇತ ಟ್ವೀಟ್ ಮಾಡಲಾಗಿತ್ತು.

ಏಪ್ರಿಲ್ 2011ರಿಂದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿರುವ ರತನ್ ಟಾತಾ ಅವರು ಟ್ವಿಟ್ಟರ್ ನಲ್ಲಿ ಅಷ್ಟು ಸಕ್ರಿಯರಾಗಿಲ್ಲ.


ಟಾಟಾ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಲು ಇದು ಕೂಡಾ ಒಂದು ಕಾರಣ ಇರಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ಮುಂದೆ ಸಕ್ರಿಯರಾಗಿ ಟ್ವೀಟ್ ಮಾಡುತ್ತಿರಿ, ಶಕ್ತಿಯುತ ಪಾಸ್ ವರ್ಡ್ ನೀಡಿ ಎಂದು ಸಲಹೆಗಳನ್ನು ನೀಡಲಾಗಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Leading industrialist Ratan Tata today said his Twitter account was hacked yesterday and a "spurious" tweet with "malicious intent" was sent.
Please Wait while comments are loading...