ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಮೂರೂ ಸ್ಥಾನ ಬಾಚಿಕೊಂಡ ಬಿಜೆಪಿ

|
Google Oneindia Kannada News

ಮುಂಬೈ, ಜೂ. 11: ಜೂ. 10ರಂದು ಮಹಾರಾಷ್ಟ್ರದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಶಿವಸೇನಾ ನೇತೃತ್ವದ ಮಹಾವಿಕಾಸ ಅಗಾಡಿ ತಂಡಕ್ಕೆ ಭಾರೀ ಹಿನ್ನಡೆ ಉಂಟು ಮಾಡಿದ್ದು, ಅಚ್ಚರಿಯ ಬೆಳವಣಿಗೆಯಂತೆ ಬಿಜೆಪಿ ಮೂರೂ ಸ್ಥಾನಗಳನ್ನು ವಶಪಡಿಸಿಕೊಂಡಿದೆ.

ಮಹಾರಾಷ್ಟ್ರ ಆಡಳಿತರೂಢ ಮೈತ್ರಿಕೂಟ ಭಾರೀ ಹಿಮ್ಮುಖ ಚಲನೆ ಕಂಡಿದ್ದು, ಶೀವಸೇನೆ ವಿರುದ್ಧ ನಡೆದ ಹೋರಾಟದಲ್ಲಿ ಬಿಜೆಪಿ ಮೂರು ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ರಾಜ್ಯದ ಆರು ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿಕೂಟ ತಲಾ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಶಿವಸೇನೆಗೆ ಗುದ್ದುಕೊಟ್ಟಿದೆ. ಇದು ರಾಜ್ಯದಲ್ಲಿ ಮುಂಬರುವ MLC ಮತ್ತು ನಾಗರಿಕ ಚುನಾವಣೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

 ಬಿಜೆಪಿ ಪರವಾಗಿ ಅನಿರೀಕ್ಷಿತ 10 ಮತ

ಬಿಜೆಪಿ ಪರವಾಗಿ ಅನಿರೀಕ್ಷಿತ 10 ಮತ

ಬಿಜೆಪಿಯ ಧನಂಜಯ್ ಮಹಾದಿಕ್ ಅವರು ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸಿದರು. ಫಲಿತಾಂಶಗಳು ಶನಿವಾರ ಬೆಳಗಿನ ಜಾವಕ್ಕೆ ಬಂದಿದ್ದು, ಇಲ್ಲಿ ಬಿಜೆಪಿ ಪರವಾಗಿ ಅನಿರೀಕ್ಷಿತ 10 ಮತಗಳು ಬಿದ್ದವು. ಒಬ್ಬ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿತ್ತು. ಬಿಜೆಪಿಯ ಇತರ ವಿಜೇತರು ಪಿಯೂಷ್ ಗೋಯಲ್ ಮತ್ತು ಅನಿಲ್ ಬೋಂಡೆ, ಕಾಂಗ್ರೆಸ್‌ನ ಇಮ್ರಾನ್ ಪ್ರತಾಪ್‌ ಗರ್ಹಿ, ಎನ್‌ಸಿಪಿಯ ಪ್ರಫುಲ್ ಪಟೇಲ್ ಮತ್ತು ಶಿವಸೇನೆಯ ಸಂಜಯ್ ರಾವುತ್. ಪಿಯೂಷ್ ಗೋಯಲ್ ಮತ್ತು ಅನಿಲ್ ಬೋಂಡೆ ಇಬ್ಬರೂ 48 ಮತಗಳನ್ನು ಪಡೆದರು.

 ಒಂದು ಮತ ಚುನಾವಣಾ ಆಯೋಗದಿಂದ ರದ್ದು

ಒಂದು ಮತ ಚುನಾವಣಾ ಆಯೋಗದಿಂದ ರದ್ದು

ಚುನಾವಣೆಗಳು ಕೇವಲ ಹೋರಾಟಕ್ಕಾಗಿ ಅಲ್ಲ. ಆದರೆ ವಿಜಯಕ್ಕೆ ಸ್ಪರ್ಧಿಸುತ್ತವೆ. ಜೈ ಮಹಾರಾಷ್ಟ್ರ ಎಂದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದರು. "ಧನಂಜಯ್ ಮಹಾದಿಕ್ ಶಿವಸೇನೆಯ ಸಂಜಯ್ ರಾವುತ್ ಗಿಂತ ಹೆಚ್ಚು ಮತಗಳನ್ನು ಪಡೆದು ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸಿದರು. ಒಂದು ಮತವನ್ನು ಚುನಾವಣಾ ಆಯೋಗ ರದ್ದುಪಡಿಸಿದೆ ಎಂದು ಹೇಳಲಾಗುತ್ತದೆ. ಸಂಜಯ್ ಪವಾರ್ ಆ ಮತವನ್ನು ಪಡೆದಿದ್ದರೆ ನಾವು ಗೆಲ್ಲುತ್ತಿದ್ದೆವು. ನವಾಬ್ ಮಲಿಕ್ ಬಂದಿದ್ದರೂ ನಾವೇ ಗೆಲ್ಲುತ್ತಿದ್ದೆವು ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು.

 ಅಡ್ಡ ಮತದಾನ ಮತ್ತು ನಿಯಮಗಳ ಉಲ್ಲಂಘನೆ ದುರು

ಅಡ್ಡ ಮತದಾನ ಮತ್ತು ನಿಯಮಗಳ ಉಲ್ಲಂಘನೆ ದುರು

ಬಂಧನದಲ್ಲಿರುವ ಸಚಿವ ನವಾಬ್ ಮಲಿಕ್ ಮತ್ತು ಮಾಜಿ ಸಚಿವ ಅನಿಲ್ ದೇಶಮುಖ್ ಅವರಿಗೆ ಮತದಾನಕ್ಕಾಗಿ ನ್ಯಾಯಾಲಯದಿಂದ ಜಾಮೀನು ನೀಡದ ಕಾರಣ ಆಡಳಿತಾರೂಢ ಒಕ್ಕೂಟವು ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಬಿಜೆಪಿ ಮತ್ತು ಮಹಾವಿಕಾಸ ಅಗಾಡಿ ಮೈತ್ರಿಕೂಟದ ಅಡ್ಡ ಮತದಾನ ಮತ್ತು ನಿಯಮಗಳ ಉಲ್ಲಂಘನೆಯ ದೂರುಗಳ ನಡುವೆಯೇ ಮಹಾರಾಷ್ಟ್ರ ರಾಜ್ಯದಲ್ಲಿ ಎಂಟು ಗಂಟೆಗಳ ವಿಳಂಬದ ನಂತರ ಮತ ಎಣಿಕೆ ಪ್ರಾರಂಭವಾಯಿತು. ಈ ಹಿಂದೆ ಬಿಜೆಪಿ ಮತ್ತು ಶಿವಸೇನೆ ಎರಡೂ ಚುನಾವಣಾ ಆಯೋಗವನ್ನು ಭೇಟಿ ಮಾಡಿ, ಅಡ್ಡ ಮತದಾನದ ಆರೋಪ ಮತ್ತು ಮತಗಳನ್ನು ಅನರ್ಹಗೊಳಿಸುವಂತೆ ಕೋರಿದ್ದವು.

 ಮಹಾ ವಿಕಾಸ್ ಅಘಾಡಿ ಕೂಡ ಆಕ್ರೋಶ

ಮಹಾ ವಿಕಾಸ್ ಅಘಾಡಿ ಕೂಡ ಆಕ್ರೋಶ

ಮಹಾವಿಕಾಸ ಮೈತ್ರಿಕೂಟದ ಮೂವರು ಶಾಸಕರು ಚಲಾಯಿಸಿದ ಮತಗಳ ಸಿಂಧುತ್ವವನ್ನು ಬಿಜೆಪಿ ಪ್ರಶ್ನಿಸಿದೆ. ಒಬ್ಬ ಬಿಜೆಪಿ ಶಾಸಕ ಮತ್ತು ಇನ್ನೊಂದು ಸ್ವತಂತ್ರ ಅಭ್ಯರ್ಥಿ ಮತವನ್ನು ಮಹಾ ವಿಕಾಸ್ ಅಘಾಡಿ ಕೂಡ ಎರಡು ಮತಗಳನ್ನು ಅಸಿಂಧುಗೊಳಿಸಲು ಪ್ರಯತ್ನಿಸಿದೆ. ಎನ್‌ಸಿಪಿಯ ಜಿತೇಂದ್ರ ಅವ್ಹಾದ್, ಕಾಂಗ್ರೆಸ್‌ನ ಯಶೋಮತಿ ಠಾಕೂರ್ ಮತ್ತು ಶಿವಸೇನೆಯ ಸುಹಾಸ್ ಕಾಂಡೆ ಮತ್ತು ಬಿಜೆಪಿಯ ಸುಧೀರ್ ಮುಂಗಂಟಿವಾರ್ ಮತ್ತು ಸ್ವತಂತ್ರ ಶಾಸಕ ರವಿ ರಾಣಾ ವಿರುದ್ಧದ ಮತಗಳ ವಿರುದ್ಧ ಆಕ್ಷೇಪಣೆಗಳು ವ್ಯಕ್ತವಾಗಿವೆ. ಸುಹಾಸ್‌ ಕಾಂಡೆ ಅವರನ್ನು ಹೊರತುಪಡಿಸಿ, ಉಳಿದ ಎಲ್ಲಾ ಮತಗಳು ಮಾನ್ಯವಾಗಿರುತ್ತವೆ ಎನ್ನಲಾಗಿದೆ.

ಸುಹಾಸ್‌ ಕಾಂಡೆ ಅವರು ತಮ್ಮ ಮತಪತ್ರವನ್ನು ಬೇರೆಯವರಿಗೆ ತೋರಿಸಲಿಲ್ಲ. ಆದರೆ ಇನ್ನೂ ಅವರ ಮತವನ್ನು ಅಸಿಂಧುಗೊಳಿಸಲಾಗಿದೆ ಎಂದು ಎನ್‌ಸಿಪಿಯ ಚುನಾವಣಾ ಉಸ್ತುವಾರಿ ಜಯಂತ್ ಪಾಟೀಲ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.

English summary
Rajya Sabha election held in Maharashtra on june 10, the BJP has taken a huge blow to the BJP's Shiv Sena-led Mahavaikasa Agadi faction, a surprise development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X