ಮಹಾವಿಕಾಸ ಅಘಾಡಿಗೆ ಬೆಂಬಲ ಘೋಷಿಸಿದ ಎಐಎಂಐಎಂ

ಮುಂಬೈ, ಜೂ. 10: ಮಹಾರಾಷ್ಟ್ರದಿಂದ ನಡೆಯುವ ಚುನಾವಣೆಗೆ ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಎಐಎಂಐಎಂ ನಿರ್ಧಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕಿದ್ದು, ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿಯನ್ನು (ಎಂವಿಎ) ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ. ಹೀಗಾಗಿ ಮತವನ್ನು ಕಾಂಗ್ರೆಸ್‌ನ ಶಾಸಕರು ಇಮ್ರಾನ್ ಪ್ರತಾಪ್‌ಗ್ರಹಿಗೆ ಹಾಕಲಿದ್ದಾರೆ.

ಎಐಎಂಐಎಂನ ಔರಂಗಬಾದ್‌ ಸಂಸದ ಇಮ್ತಿಯಾಜ್‌ ಜಲೀಲ್‌ ಮತದಾನಕ್ಕೆ ಕೆಲವು ಗಂಟೆಗಳ ಮೊದಲು ಈ ಬಗ್ಗೆ ಟ್ವಿಟ್‌ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಂಐಎಂ ಇಬ್ಬರು ಶಾಸಕರನ್ನು ಹೊಂದಿದೆ.

ರಾಷ್ಟ್ರೀಯ ಪಕ್ಷ ಬಿಜೆಪಿಯನ್ನು ಸೋಲಿಸಲು ಎಐಎಂಐಎಂ ಮಹಾರಾಷ್ಟ್ರದ ರಾಜ್ಯಸಭಾ ಚುನಾವಣೆಯಲ್ಲಿ ಮಹಾವಿಕಾಸ ಅಘಾಡಿ ಬಳಗಕ್ಕೆ ಬೆಂಬಲ ಸೂಚಿಸಿದ್ದು, ಅದರಂತೆ ಕಾಂಗ್ರೆಸ್‌ಗೆ ಮತ ಹಾಕಲಿದೆ. ನಮ್ಮ ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಜೊತೆಗೆ ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನೆಯ ಸೇರಿದ ಮಹಾವಿಕಾಸ ಅಘಾಡಿಯೊಂದಿಗೆ ಮಹಾರಾಷ್ಟ್ರದಲ್ಲಿ ಮುಂದುವರಿಯುತ್ತದೆ ಎಂದು ಇಮ್ತಿಯಾಜ್‌ ಜಲೀಲ್‌ ತಿಳಿಸಿದ್ದಾರೆ.

ನಮ್ಮ ಇಬ್ಬರು ಎಐಎಂಐಎಂ ಮಹಾರಾಷ್ಟ್ರ ಶಾಸಕರನ್ನು ರಾಜ್ಯಸಭಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಪ್ರತಾಪ್‌ಗಢಿಗೆ ಮತ ಹಾಕುವಂತೆ ಸೂಚಿಸಲಾಗಿದೆ. ನಾವು ಅವರಿಗೆ ನಮ್ಮ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇವೆ ಎಂದು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಧುಲೆ ಮತ್ತು ಮಾಲೆಗಾಂವ್‌ ಈ ಇಬ್ಬರು ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಪಕ್ಷವು ಕೆಲವು ಷರತ್ತುಗಳನ್ನು ಹಾಕಿದೆ ಎಂದು ಜಲೀಲ್ ಹೇಳಿದ್ದಾರೆ.

Rajya Sabha Election Aimim Announces Support for Mahavaikas Aghadi

ಎಂವಿಎಗೆ ಬೆಂಬಲದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷವು ಇನ್ನೊಂದು ಷರತ್ತು ಹಾಕಿದ್ದು, ಮುಸ್ಲಿಮರಿಗೆ ಮೀಸಲಾತಿಯ ಬಗ್ಗೆ ಇದೆ. ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗಕ್ಕೆ (ಎಂಪಿಎಸ್‌ಸಿ) ಅಲ್ಪಸಂಖ್ಯಾತ ಸದಸ್ಯರನ್ನು ನೇಮಿಸಬೇಕು ಮತ್ತು ಮಹಾರಾಷ್ಟ್ರ ವಕ್ಫ್ ಮಂಡಳಿಯ ಆದಾಯವನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದೆ. ಚುನಾವಣೆಯ ಮುನ್ನಾದಿನದ ದಿಢೀರ್‌ ಬೆಳವಣಿಗೆಗಳಲ್ಲಿ ಜಲೀಲ್ ಎಂವಿಎ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದರು. ಗುರುವಾರ ಸಂಜೆ ಜಲೀಲ್ ಅವರು ಶಿವಸೇನಾ ಸಂಸದ ಹೇಮಂತ್ ಪಾಟೀಲ್ ಅವರನ್ನು ಭೇಟಿ ಮಾಡಿದರು. ಎನ್‌ಸಿಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಎನ್‌ಸಿಪಿ ಶಾಸಕರಿಗೆ ಆಯೋಜಿಸಿದ್ದ ಔತಣಕೂಟದಲ್ಲೂ ಭಾಗವಹಿಸಿದ್ದರು.

Rajya Sabha Election Aimim Announces Support for Mahavaikas Aghadi

ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ಅವರು ರಾಜ್ಯಸಭಾ ಚುನಾವಣೆಗೆ ಮುನ್ನ ಶುಕ್ರವಾರ ಮಧ್ಯರಾತ್ರಿ 1 ಗಂಟೆಗೆ ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿ ಶಿವಸೇನಾ ಮುಖಂಡರನ್ನು ಭೇಟಿ ಮಾಡಿದರು. ಎನ್‌ಸಿಪಿ ನಾಯಕರೊಂದಿಗಿನ ಸಭೆಯ ನಂತರ ಸಂಸದ ಜಲೀಲ್ ಅವರು ಶಿವಸೇನೆ ಸಚಿವರಾದ ಏಕನಾಥ್ ಶಿಂಧೆ, ಅನಿಲ್ ಪರಬ್, ಸಂಸದ ಅನಿಲ್ ದೇಸಾಯಿ, ಅರವಿಂದ್ ಸಾವಂತ್ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಮಿಲಿಂದ್ ನಾರ್ವೇಕರ್ ಅವರನ್ನು ಭೇಟಿಯಾದರು.

ನಾಯಕರೊಂದಿಗೆ ಸಭೆ ಒಂದು ಗಂಟೆ ಕಾಲ ನಡೆದಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಎರಡು ಮತಗಳಿಗೆ ಪ್ರತಿಯಾಗಿ ಎಂಐಎಂನ ಕೆಲವು ಬೇಡಿಕೆಗಳನ್ನು ಈಡೇರಿಸಲು ಶಿವಸೇನಾ ಸಚಿವರು ಒಪ್ಪಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+