ನಟಿ ರಾಖಿ ಸಾವಂತ್ ಬಂಧಿಸಿದ ಪಂಜಾಬ್ ಪೊಲೀಸರು
ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ರನ್ನು ಮುಂಬೈನಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಮುಂಬೈ, ಏಪ್ರಿಲ್ 04: ಹಿಂದೂಗಳ ಪಾಲಿನ ಪವಿತ್ರ ಮಹಾಕಾವ್ಯ ರಾಮಾಯಣದ ಕರ್ತೃ ಋಷಿ ವಾಲ್ಮೀಕಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನಟಿ ರಾಖಿ ಸಾವಂತ್ ರನ್ನು ಮುಂಬೈನಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಖಿ ಅವರು, ವಾಲ್ಮೀಕಿ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರಾಖಿ ವಿರುದ್ಧ ದೂರು ನೀಡಲಾಗಿತ್ತು. ರಾಖಿ ಸಾವಂತ್ ರನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.[ರಾಖಿ ಸಾವಂತ್ ವಿರುದ್ಧ ಬಂಧನ ವಾರೆಂಟ್]

ಈ ಪ್ರಕರಣ ಸಂಬಂಧ ಮಾರ್ಚ್ 9ರಂದು ನಡೆದ ನ್ಯಾಯಾಲಯದ ವಿಚಾರಣೆಗೆ ರಾಖಿ ಹಲವಾರು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಕೋರ್ಟಿಗೆ ರಾಖಿ ಹಾಜರಾಗಿರಲಿಲ್ಲ. [ಮೋದಿ ಜೀ, ಮೊದ್ಲು ಸೀಲಿಂಗ್ ಫ್ಯಾನ್ ಬ್ಯಾನ್ ಆಗ್ಬೇಕ್!]
ಹೀಗಾಗಿ, ಬಂಧನ ವಾರಂಟ್ ಜಾರಿಯಾಗಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 10ರಂದು ನಿಗದಿಯಾಗಿದ್ದು, ರಾಖಿ ಅವರು ಖುದ್ದು ಕೋರ್ಟಿಗೆ ಹಾಜರಾಗಬೇಕಿದೆ.
ರಾಖಿ ಸಾವಂತ್ ಅವರು ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡುವ ವೇಳೆಯಲ್ಲಿ ವಾಲ್ಮೀಕಿ ಅವರು ಮಹರ್ಷಿಯಾಗಿ ಮಹಾಕಾವ್ಯ ರಾಮಾಯಣ ರಚಿಸುವುದಕ್ಕೂ ಮುನ್ನ ಕೊಲೆಗಾರರಾಗಿದ್ದರು ಎಂದು ಹೇಳಿದ್ದರು. ವಿಡಿಯೋ ಇಲ್ಲಿದೆ:
(ಒನ್ಇಂಡಿಯಾ ಸುದ್ದಿ)












Click it and Unblock the Notifications