ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ, ಆಟೋದಲ್ಲೇ ಗರ್ಭಿಣಿ ಸಾವು

|
Google Oneindia Kannada News

ಮುಂಬೈ, ಮೇ 31: ಕೊರೊನಾ ವೈರಸ್ ಭೀತಿಯಿಂದ ಇತರೆ ರೋಗಿಗಳನ್ನು ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವ ಘಟನೆಗಳು ದೇಶಾದ್ಯಂತ ಹಲವು ಕಡೆ ವರದಿಯಾಗಿದೆ.

Recommended Video

ಕೊರೊನ ಸಂಟಷ್ಟದ ನಡುವೆ ಭಾರತಕ್ಕೆ ಒಂದು ಸಿಹಿ ಸುದ್ದಿ | Oneindia Kannada

ಮಹಾರಾಷ್ಟ್ರದ ಥಾಣೆಯಲ್ಲಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆಟೋ ರಿಕ್ಷಾದಲ್ಲೇ ಗರ್ಭಿಣಿ ಹೆಂಗಸು ಮೃತಪಟ್ಟಿರುವ ಘಟನೆ ನಡೆದಿದೆ. ವೈದ್ಯರು ನಿರ್ಲಕ್ಷಿಸಿದ ಕಾರಣ 26 ವರ್ಷದ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ವೈರಸ್ ಹರಡಲು 'ನಮಸ್ತೆ ಟ್ರಂಪ್' ಕಾರಣ: ಶಿವಸೇನಾ ಆರೋಪ

ಮೇ 25-26ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮೂರು ಪ್ರತ್ಯೇಕ ದೂರು ದಾಖಲಿಸಿಕೊಂಡು, ಆಸ್ಪತ್ರೆಗಳ ವಿರುದ್ಧ ಎಫ್ ಐ ಆರ್ ಹಾಕಿದ್ದಾರೆ.

Pregnant woman dies in auto rickshaw at Thane

ಮಧ್ಯರಾತ್ರಿ ಅಸ್ಮಾ ಮೆಹಂದಿಗೆ ಹೆರಿಗೆ ನೋವು ಉಂಟಾದ ಬಳಿಕ ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಯಾವ ಆಸ್ಪತ್ರೆಯಲ್ಲೂ ಗರ್ಭಿಣಿಯನ್ನು ದಾಖಲಿಸಿಕೊಳ್ಳಲಿಲ್ಲ. ಇದರ ಪರಿಣಾಮ ಆಟೋ ರಿಕ್ಷಾದಲ್ಲೇ ಸಾವನ್ನಪ್ಪಿದ್ದಾಳೆ.

ಬಿಲಾಲ್ ಆಸ್ಪತ್ರೆ, ಅಸ್ಮಾ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆ, ಯೂನಿವರ್ಸಲ್ ಆಸ್ಪತ್ರೆ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ನಾಯಕ ರಾಮ್ ಕದಮ್ ''ಇದು ಆಘಾತಕಾರಿ ಮತ್ತು ದುರದೃಷ್ಟಕರ ಸಂಗತಿ" ಎಂದಿದ್ದು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟೀಕಿಸಿದ್ದಾರೆ.

English summary
Thane: Pregnant woman dies in auto rickshaw after hospitals refuse treatment, FIR lodged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X