• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತನ್ನ ಎದೆಯೊಳಗಿಂದ ಟೀಕಪ್ ತೆಗೆದು ಪಾಕಿಸ್ತಾನಕ್ಕೆ ಕೊಟ್ಟ ಪೂನಂ ಪಾಂಡೆ

|

ಮುಂಬೈ, ಜೂನ್ 14: ಪಾಕಿಸ್ತಾನದ ಮಾಧ್ಯಮ ಗಿರ್ರನೇ ತಿರುಗುವಂತಹ ತಿರುಗೇಟನ್ನು ಬಾಲಿವುಡ್ ನಟಿ ಪೂನಂ ಪಾಂಡೆ ನೀಡಿದ್ದಾರೆ. ಅದೂ ಎಂತಹ ತಿರುಗೇಟು ಅಂತೀರಾ, ಪಾಕಿಸ್ತಾನ ಕೇಳಿದ ಒಂದು ಟೀ ಕಪ್ ಗೆ, ಪೂನಂ ಎರಡೆರಡು ಕಪ್ ಕೊಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೊಲ್ಟೇಜ್ ವಿಶ್ವಕಪ್ ಕ್ರಿಕೆಟ್ ಪಂದ್ಯ, ಇದೇ ಭಾನುವಾರ (ಜೂ 16) ನಡೆಯಲಿದೆ. ಕ್ರಿಕೆಟ್ ಪಂದ್ಯದ ಪ್ರಮೋಷನ್ ಹೆಸರಿನಲ್ಲಿ ಪಾಕಿಸ್ತಾನದ ಮಿಡಿಯೋ ಒಂದು ಯೋಧ ಅಭಿನಂದನ್ ನನ್ನು ಅಣಕಿಸುವ ಜಾಹೀರಾತು ಪ್ರಸಾರ ಮಾಡುತ್ತಿದೆ.

ಚಳಿಗಾಲದಲ್ಲಿ ಇಂಟರ್ನೆಟ್ಟಿಗೆ ಬೆಂಕಿ ಹಚ್ಚಿದ ಪೂನಂ ಪಾಂಡೆ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಕೂಡಾ, ಪಾಕ್ ಮಾಧ್ಯಮದ ಈ ಅಧಿಕ ಪ್ರಸಂಗವನ್ನು ಟೀಕಿಸಿದ್ದರು. ಈಗ, ಬಾಲಿವುಡ್ ನಟಿ ಪೂನಂ ಪಾಂಡೆ ಸರದಿ. ತನ್ನದೇ ಶೈಲಿಯಲ್ಲಿ ಕಚಗುಳಿ ಇಡುವ ಅಮೋಘ ಕಲೆಯನ್ನು ಸಿದ್ದಿಸಿಕೊಂಡಿರುವ ಪೂನಂ, ಈ ಬಾರಿ ತನ್ನ ಎದೆಯೊಳಗಿನಿಂದ ಒಳ ಉಡುಪನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ.

ಇನ್ಸ್ಟಾ ಗ್ರಾಂ ನಲ್ಲಿ ಸುಮಾರು ನಲವತ್ತು ಸೆಕೆಂಡಿನ ವಿಡಿಯೋ ಅಪ್ಲೋಡ್ ಮಾಡಿರುವ ಪೂನಂ, ಮೊದಲು ಅಭಿನಂದನ್ ನಂತೆ ಹೋಲುವ ವ್ಯಕ್ತಿಯನ್ನು ಇಟ್ಟುಕೊಂಡು ವಿಚಾರಣೆ ನಡೆಸುವ, ಕೊನೆಗೆ ಚಹಾ ಕಪ್ ಅನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ, ಎಂದು ಹೇಳುವ ಪಾಕ್ ಮಾಧ್ಯಮದ ಜಾಹೀರಾತನ್ನು ಹಾಕಿ, ನಂತರ ಅದಕ್ಕೆ ಪೂನಂ ತಿರುಗೇಟು ನೀಡಿದ್ದಾರೆ.

View this post on Instagram

My Answer to the Pakistani AD. #IndvsPak World Cup 2019.

A post shared by Poonam Pandey (@ipoonampandey) on

ಪಾಕಿಸ್ತಾನದ ಈ ಜಾಹೀರಾತನ್ನು ನಾನು ನಿನ್ನೆ ವಾಟ್ಸಾಪ್ ನಲ್ಲಿ ನೋಡಿದೆ. ನಮ್ಮ ಯೋಧನನ್ನು ನೀವು ಅವಮಾನಿಸಿದ್ದು ಸರಿಯಲ್ಲ. ನಿಮ್ಮ ಈ ಜಾಹೀರಾತಿಗೆ ನನ್ನ ಉತ್ತರ ಇದು ಎಂದು, ಎದೆಯೊಳಗಿನಿಂದ ಒಳ ಉಡುಪನ್ನು ತೆಗೆದು, ತೆಗೆದುಕೊಳ್ಳಿ ಡಬಲ್ ಟೀಕಪ್, ನೀವು ಇದರಲ್ಲಿ ಟೀಯನ್ನೂ ಕುಡಿಯಬಹುದು ಎಂದು ಅಣಕಿಸುತ್ತಾರೆ.

ಪೂನಂ ಪಾಂಡೆ ಈ ಹಾಟ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಪಾಕಿಸ್ತಾನದ ಕಡೆಯಿಂದ ಇದು ಟ್ರೋಲ್ ಆಗುತ್ತಿದೆ.

English summary
Bollywood hot actress Poonam Pandey reacted differently on Pakistan ad on World Cup Cricket clash 2019, between India and Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X