ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಷ್ಕರ ಕೈಬಿಟ್ಟ ಪೆಟ್ರೋಲಿಯಂ ಡೀಲರ್ಸ್

By ಅನುಷಾ ರವಿ
|
Google Oneindia Kannada News

ಮುಂಬೈ, ನವೆಂಬರ್, 4: ಅಪೂರ್ವಚಂದ್ರ ವರದಿ ಜಾರಿಗಾಗಿ ಆಗ್ರಹಿಸಿ ಮತ್ತು ಕಮಿಷನ್ ಹೆಚ್ಚಳ, ಅಧಿಕಾರಿಗಳ ಕಿರುಕುಳ ತಡೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೆಟ್ರೋಲಿಯಂ ಡೀಲರ್ಸ್ ಗಳು ಕರೆ ನೀಡಿದ್ದ ಎರಡು ದಿನಗಳ ಮುಷ್ಕರವನ್ನು ಕೈಬಿಡಲಾಗಿದೆ.

ಕಮಿಷನ್ ಹೆಚ್ಚಳ ಕುರಿತು ಆಯಿಲ್ ಕಂಪೆನಿಗಳ ಅಸೋಷಿಯೇಶನ್ ದರ ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದು, ದೇಶದಾದ್ಯಂತ ಕರೆ ನೀಡಿದ್ದ ಮುಷ್ಕರವನ್ನು ಕೈಬಿಡಲಾಗಿದೆ ಎಂದು ಪೆಟ್ರೋಲಿಯಂ ಡೀಲರ್ಸ್ ಅಸೋಷಿಯೇಶನ್ ತಿಳಿಸಿದೆ.

Petroleum dealers' associations withdraw protest

ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಸಭೆಯಲ್ಲಿ ಲೀಟರ್ ಪೆಟ್ರೋಲ್ 13.8 ಪೈಸೆ. ಹಾಗೂ ಪ್ರತಿ ಲೀ. ಡೀಸೆಲ್ ಗೆ 10 ಪೈಸೆ ಕಮಿಷನ್ ಹೆಚ್ಚಳ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. [ನ.3 ಮತ್ತು 4ರಂದು ಪೆಟ್ರೋಲ್ ಬಂಕ್ ಮುಷ್ಕರ]

ಅಷ್ಟೇ ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಕಮಿಷನ್ ದರದಲ್ಲಿ ಪರಿಷ್ಕರಣೆ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ. ಪೆಟ್ರೊಲಿಯಂ ಡೀಲರ್ಸ್ ಸಂಘವು ಬೇಡಿಕೆ ಈಡೇರಿಕೆಗಾಗಿ ಕೇವಲ ಒಂದು ಪಾಳಿಯಲ್ಲಿ ಕೆಲಸ ಮಾಡಲು ಮತ್ತು ಭಾನುವಾರ ಮತ್ತು ರಜಾದಿನಗಳಲ್ಲಿ ಪೆಟ್ರೋಲ್ ಮಾರಾಟ ನಿಲ್ಲಿಸಲು ನಿರ್ಧರಿಸಿದ್ದವು.

ನವೆಂಬರ್ 3 ಮತ್ತು 4ರಂದು ಕಂಪೆನಿಗಳಿಂದ ಪೆಟ್ರೋಲ್ ಖರೀದಿಸದಿರಲು ಡೀಲರ್ಸ್ ಅಸೋಷಿಯೇಶನ್ ನಿರ್ಧರಿಸಿತ್ತು.

English summary
The Oil companies' decision to revise the commission rates has led to Petroleum dealers calling off strike across the county. In a meeting held in Mumbai on Friday, oil companies decided to hike dealers' commission on Petrol to 13.8 paise per litre and Diesel to 10 paise per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X