ಬರಗಾಲ ಪ್ರದೇಶದಲ್ಲಿ ಸೆಲ್ಫಿ, ತೊಂದ್ರೆ ಇಲ್ಲ ಎಂದ ಪಂಕಜ!

Posted By:
Subscribe to Oneindia Kannada

ಪುಣೆ, ಏಪ್ರಿಲ್ 18: ಮಹಾರಾಷ್ಟ್ರದ ಬರ ಪೀಡಿತ ಪ್ರದೇಶದ ಲಾತೂರ್ ನಲ್ಲಿ ಬರ ಅಧ್ಯಯನಕ್ಕೆ ತೆರಳಿದ್ದ ವೇಳೆ ಸೆಲ್ಫಿ ಫೋಟೋ ತೆಗೆದುಕೊಂಡಿದ್ದರಲ್ಲಿ ಏನು ತಪ್ಪಿಲ್ಲ ಎಂದು ಮಹಾರಾಷ್ಟ್ರದ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜಾ ಮುಂಡೆ ಸೋಮವಾರ ಪ್ರತಿಕ್ರಿಯಿಸಿದ್ದಾರೆ.

ಭಾನುವಾರದಂದು ಲಾತೂರ್ ಗೆ ತೆರಳಿದ್ದ ಪಂಕಜಾ ಮುಂಡೆ ಅವರು ಬರ ಪೀಡಿತ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಂಡು ಟ್ವೀಟ್ ಮಾಡಿದ್ದರು. ಪಂಕಜಾ ಅವರ ಸೆಲ್ಫಿ ಚಿತ್ರಗಳನ್ನು ನೋಡಿದ ಶಿವಸೇನೆ ಕಿಡಿಕಾರಿತ್ತು. ತೀವ್ರ ಬರ ಪರಿಸ್ಥಿತಿಯಲ್ಲಿ ಏನಿದು ಮೋಜಿನ ಚಿತ್ರ ಎಂದು ಟೀಕಿಸಿತ್ತು. ಸಚಿವೆ ಇಂಥ ಕೆಲಸವನ್ನು ಮಾಡುವ ಮುನ್ನ ಯೋಚಿಸಬೇಕಿತ್ತು ಎಂದು ಪ್ರತಿಕ್ರಿಯಿಸಿತ್ತು.

Pankaja Munde defends taking Selfie at Drought hit Latur faces flak for clicking selfies in drought-hit Latur

ನೀರಿಲ್ಲದೆ ಬತ್ತಿ ಹೋಗಿರುವ ಕೆರೆಯ ಬಳಿ, ಲಾತೂರಿನ ಸ್ಥಳೀಯ ಜತೆ ಮಂದಹಾಸ ಬೀರುವ ಸಚಿವೆ ಪಂಕಜಾ ಚಿತ್ರಗಳು ಎಲ್ಲೆಡೆ ಚರ್ಚೆಗೊಳಗಾಗಿತ್ತು.

ಮಹಾರಾಷ್ಟ್ರದಲ್ಲಿ ಬರಗಾಲ ಆವರಿಸಿದ್ದು ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿರುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆ ಹಾಗೂ ನಾಗ್ಪುರ ಈ ಮೂರು ಸ್ಟೇಡಿಯಂಗಳಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಮಹಾರಾಷ್ಟ್ರ ಬಿಜೆಪಿ, ಹೈಕೋರ್ಟ್ ಮೋರೆ ಹೋಗಿತ್ತು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಬಾಂಬೆ ಹೈಕೋರ್ಟ್ ಕ್ರಿಕೆಟ್ ಗಿಂತ ಜನರೇ ಮುಖ್ಯ ಹಾಗಾಗಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಬಿಸಿಸಿಐಗೆ ಚಾಟಿ ಏಟು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನೀರಿಗಾಗಿ ಮಹಿಳೆಯರು ಹಾಗೂ ಮಕ್ಕಳು ಇನ್ನಿಲ್ಲದ್ದಂತೆ ಪರದಾಡುತ್ತಿದ್ದಾರೆ. ಬರಪೀಡಿತ ಪ್ರದೇಶಗಳಲ್ಲಿ ಶಿವಸೇನೆ ಇನ್ನಿಲ್ಲದಂತೆ ಕೆಲಸವನ್ನು ಮಾಡುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸಚಿವೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸರಿನಾ ಎಂದು ಶಿವಸೇನೆ ಮುಖಂಡ ಮನೀಷ್ ಕಯಾಂದೆ ಅವರು ಎಎನ್ ಐಗೆ ಹೇಳಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಪಂಕಜಾ, ನಾನು ಬರ ಪ್ರದೇಶದಲ್ಲಿ ಆಗಿರುವ ಕಾಮಗಾರಿಯ ಚಿತ್ರವನ್ನು ತೆಗೆದುಕೊಂಡೆ. ಅಲ್ಲಿನ ಜನರಿಗೆ ಆತ್ಮವಿಶ್ವಾಸ ನೀಡಲು ಭರವಸೆ ನೀಡಲು ನಗುಮೊಗದ ಸೆಲ್ಫಿ ಅಗತ್ಯವಿತ್ತು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maharashtra’s Rural Development Minister Pankaja Munde on Monday clarified that she clicked those pictures to appreciate the work done by the local administration in this hour of crisis. Munde took to micro blogging site Twitter to put forth her stand for clicking photographs on the drought-hit land.
Please Wait while comments are loading...