ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯಾ ಅಮ್ಮನ ಮೇಲೆ 100 ಕೋಟಿ ಕೇಸ್

By Mahesh
|
Google Oneindia Kannada News

ಮುಂಬೈ, ಜು.6: ಬಾಲಿವುಡ್ ನಟಿ ಜಿಯಾ ಖಾನ್ ಅವರ ನಿಗೂಢ ಸಾವು ಸಂಭವಿಸಿ ಒಂದು ವರ್ಷದ ನಂತರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೊಳಪಡುತ್ತಿದೆ. ಈ ಸಂಭ್ರಮದಲ್ಲಿರುವ ಜಿಯಾ ತಾಯಿ ವಿರುದ್ಧ ಭಾರಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಬಾಲಿವುಡ್ ನಟ ಆದಿತ್ಯ ಪಾಂಚೋಲಿ ನಟಿ ಝರೀನಾ ವಹಾಬ್ ದಂಪತಿ ಈಗ ನಟಿ ಜಿಯಾ ಖಾನ್ ಅವರ ತಾಯಿ ರಬಿಯಾ ಖಾನ್ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ 100 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಪಾಂಚೋಲಿ ದಂಪತಿಯ ಪುತ್ರ ಸೂರಜ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ರಬಿಯಾ ಖಾನ್ ಅವರ ಕೋರಿಕೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಂದ ಸಿಬಿಐ ವಶಕ್ಕೆ ನೀಡಿತ್ತು.[ಸಿಬಿಐ ತನಿಖೆ ಆರಂಭ]

ಈ ಮಧ್ಯೆ ರಬಿಯಾ ಖಾನ್ ವಿರುದ್ಧ ಪಾಂಚೋಲಿ ದಂಪತಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ.ಎಸ್.ಸಿ.ಗುಪ್ತಾ, ರಬಿಯಾ ಖಾನ್‌ಗೆ ನೋಟಿಸ್ ನೀಡಿ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿದ್ದಾರೆ.

Aditya Pancholi, wife file Rs 100 crore defamation suit against Jiah Khan’s mother

ಬ್ರಿಟನ್ ಪ್ರಜೆಯಾಗಿರುವ ರಬಿಯಾ ಖಾನ್ ಟ್ವಿಟ್ಟರ್ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಕುಟುಂಬದ ವಿರುದ್ಧ ಮಾನ ಹಾನಿಕರ ಹೇಳಿಕೆಗಳನ್ನು, ವೈಯಕ್ತಿಕ ಆರೋಪಗಳನ್ನು ಮಾಡಿದ್ದಾರೆ. ಪ್ರಕರಣದ ತನಿಖೆ ಜಾರಿಯಲ್ಲಿರುವಾಗಲೇ ಅನಗತ್ಯವಾಗಿ ನಮ್ಮ ಕುಟುಂಬಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ(ಮಾ.4 ರಿಂದ ಮೇ.1 ರ ಅವಧಿಯಲ್ಲಿ) ಎಂದು ಪಾಂಚೋಲಿ ದಂಪತಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಬ್ರಿಟಿಷ್-ಅಮೆರಿಕನ್ ನಟಿ ಜಿಯಾ ಜುಹು ಅಪಾರ್ಟ್ಮೆಂಟ್ ನಲ್ಲಿ ಕಳೆದ ವರ್ಷ ಜೂ.3ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮುನ್ನ 6 ಪುಟಗಳ ಡೆಟ್ ನೋಟ್‌ ಬರೆದಿದ್ದರು. ಸೂರಜ್ ಹಾಗೂ ತನ್ನ ನಡುವಿನ ಸಂಬಂಧವನ್ನು ತಿಳಿಸಿದ್ದರು. ಡೆಟ್ ನೋಟ್ ಆಧಾರದ ಮೇಲೆ ಕಳೆದ ವರ್ಷ ಜೂನ್ 10 ರಂದು ಸೂರಜ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಬಾಲಿವುಡ್ ನಟಿ ಜಿಯಾಖಾನ್ ಸಾವನ್ನಪ್ಪಿ ನಾಲ್ಕು ತಿಂಗಳುಗಳ ನಂತರ ರಬಿಯಾ ಖಾನ್ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳನ್ನು ರಬಿಯಾ ಅವರು ಹೊರಹಾಕಿದ್ದರು. ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಆದಿತ್ಯಾ ಪಂಚೋಲಿ ಅವರು ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವುದು ಖಚಿತವಾಗಿತ್ತು[ವಿವರ ಇಲ್ಲಿ ಓದಿ]

English summary
Actor couple Aditya Pancholi and Zarina Wahab, whose son Suraj is facing charges of abetting the suicide of actress Jiah Khan, have filed a Rs 100 crore defamation suit in the Bombay High Court against Rabbiya Khan, the mother of the deceased.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X