'ವಿಪಕ್ಷಗಳ ಮಹಾಘಟಬಂಧನ ಭ್ರಮೆ, ಮತ್ತೆ ಅಧಿಕಾರಕ್ಕೆ ಬರೋದು ಬಿಜೆಪಿಯೇ!'
Recommended Video

ಮುಂಬೈ, ಡಿಸೆಂಬರ್ 19: ವಿಪಕ್ಷಗಳ ಮಹಾಘಟಬಂಧನ ಒಂದು ಭ್ರಮೆಯಷ್ಟೇ. 2019 ರಲ್ಲಿ ಮತ್ತೆ ಗೆಲ್ಲುವವರು ನಾವೇ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮುಂಬೈಯಲ್ಲಿ ನಡೆದ ರಿಪಬ್ಲಿಕ್ ಸಮಿಟ್ ನಲ್ಲಿ ಮಾತನಾಡುತ್ತಿದ್ದ ಅವರು, 2019 ರ ಲೋಕಸಭಾ ಚುನಾವಣೆಯಲ್ಲೂ ಶಿವಸೇನೆ ಬಿಜೆಪಿಯೊಂದಿಗಿರುತ್ತದೆ ಎಂದರು.
ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡದಿದ್ದ ಅಮಿತ್ ಶಾ ಇದೀಗ ಜನತೆಯ ತೀರ್ಪಿಗೆ ತಲೆಬಾಗುತ್ತೇವೆ ಎಂದರು. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳು 2019 ರ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಹೇಳಿಕೆ ತಪ್ಪು, ರಾಜ್ಯಗಳ ಚುನಾವಣೆ ನಡೆದಿದ್ದೇ ಬೇರೆಯ ವಿಷಯಗಳನ್ನು ಕೇಂದ್ರೀಕರಿಸಿ. ಆದರೆ ಲೋಕಸಭಾ ಚುನಾವಣೆಯ ಗಮನವಿರುವುದೇ ಬೇರೆ ವಿಷಯಗಳ ಮೇಲೆ ಎಂದು ಅವರು ಹೇಳಿದರು.
ಶಿವಸೇನೆಯೊಂದಿಗೆ ಈಗಾಗಲೇ ನಾವು ಮಾತುಕತೆ ಆರಂಭಿಸಿದ್ದೇವೆ. ಅದು ನಮ್ಮೊಂದಿಗಿರುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಅವರು ಹೇಳಿದರು.

ಮಹಾಘಟಬಂಧನ ಎಂಬ ಭ್ರಮೆ
"ವಿಪಕ್ಷಗಳ ಮಹಾಘಟಬಂಧನ ಒಂದು ಭ್ರಮೆಯಷ್ಟೆ. ಅದು ಅಸ್ತಿತ್ವದಲ್ಲೇ ಇಲ್ಲ" ಎಂದು ಅವರು ಹೇಳಿದರು. 2014 ರಲ್ಲಿ ನಾವು ಅವರೆಲ್ಲರ ವಿರುದ್ಧ ಹೋರಾಡಿದ್ದೇವೆ. ಅವರೆಲ್ಲ ಪ್ರಾದೇಶಿಕ ನಾಯಕರು. ಅವರು ಕಾಂಗ್ರೆಸ್ಸಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ಮಹಾಘಟಬಂಧನ ಆರಂಭಕ್ಕೂ ಮುನ್ನವೇ ಮುರಿದು ಬೀಳುವುದು ಗ್ಯಾರಂಟಿ" ಎಂದು ಲೇವಡಿ ಮಾಡಿದರು.

ಪ್ರಚಾರದ ಮಾನದಂಡವೇನು?
ನಾವು ಕಳೆದ ಐದು ವರ್ಷಗಳಿಂದ ರಾಷ್ಟ್ರದ ಭದ್ರತೆಗೆ ಏನೆಲ್ಲ ಮಾಡಿದ್ದೇವೆ, ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿದ್ದೇವೆ. 8 ಕೋಟಿ ಮನೆಗಳಿಗೆ ಶೌಚಾಲಯ ಒದಗಿಸಿದ್ದೇವೆ. 2.5 ಕೋಟಿ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ಇವುಗಳನ್ನೇ ನಾವು ಪ್ರಚಾರದ ಮಾನದಂಡವನ್ನಾಗಿ ಬಳಸುತ್ತೇವೆ.

ದೇಶಕ್ಕೆ ಬಿಜೆಪಿ ಅನಿವಾರ್ಯ!
ಕೇವಲ ಬಿಜೆಪಿಗೆ ಮಾತ್ರವಲ್ಲ, ಈ ದೇಶಕ್ಕು ಒಂದು ಬಲಾಢ್ಯ ಸರ್ಕಾರದ ಅಗತ್ಯವಿದೆ. ಅದನ್ನು ಬಿಜೆಪಿ ನೀಡಲಿದೆ ಎಂದರು. ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಚುನಾವಣೆಗಳು ಬಿಜೆಪಿ ಪರವಾಗಿರಲಿಲ್ಲ ಎಂಬುದು ನಿಜ. ಆದರೆ ಅದನ್ನು 2019 ರ ಲೋಕಸಭೆ ಚುನಾವಣೆಗೆ ಜೋಡಿಸುವುದು ಸರಿಯಲ್ಲ. ಲೋಕಸಭೆ ಚುನಾವಣೆ ಬೇರೆಯದೇ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಲಿದೆ ಎಂದ ಅಮಿತ್ ಶಾ, ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದರು.

ನಮ್ಮ ಬಲದೊಂದಿಗೆ ಹೋರಾಡುತ್ತೇವೆ
2014 ರಲ್ಲಿ ಬಿಜೆಪಿ ಕೇವಲ ಆರು ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಈಗ ನಾವು ಹದಿನಾರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಈಗ ನೀವು ಹೇಳಿ, ಯಾರು 2019 ರಲ್ಲಿ ಅಧಿಕಾರಕ್ಕೆ ಬರುತ್ತಾರೆ? ಎಂದು ಅವರು ಪ್ರಶ್ನಿಸಿದರು. ನಾವು ನಮ್ಮ ಬಲದೊಂದಿಗೆ ಚುನಾವಣೆ ಎದುರಿಸುತ್ತೇವೆಯೇ ಹೊರತು ಮತ್ತೊಬ್ಬರ ದೌರ್ಬಲ್ಯವನ್ನು ಮುಂದಿಟ್ಟುಕೊಂಡಲ್ಲ ಎಂದು ಸ್ಪಷ್ಟಪಡಿಸಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications