ರೇಪ್ ಬಗ್ಗೆ ಹೇಳಿಕೆ, ಸಲ್ಮಾನ್ ವಿರುದ್ಧ ಕೇಸ್, ನೋಟಿಸ್

Posted By:
Subscribe to Oneindia Kannada

ನವದೆಹಲಿ, ಜೂನ್ 29: ಅತ್ಯಾಚಾರ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಸಮಸ್ಯೆಗಳು ಸಾಲು ಸಾಲಾಗಿ ಎರಗುತ್ತಿವೆ. ಸಲ್ಮಾನ್ ವಿರುದ್ಧ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬಳು ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡಾ ನೋಟಿಸ್ ಜಾರಿ ಮಾಡಿದೆ.

ಹರಿಯಾಣ ಮೂಲಕ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸಲ್ಮಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅತ್ಯಾಚಾರದ ಬಗ್ಗೆ ಅಪ್ರಬುದ್ಧ ಹೇಳಿಕೆ ನೀಡಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಹಾಗೂ ಮನ ನೋಯಿಸಿದ್ದಕ್ಕೆ 10 ಕೋಟಿ ರು ಪರಿಹಾರ ನೀಡಬೇಕು ಎಂದು ಕೋರಲಾಗಿದ್ದು, ಸಲ್ಮಾನ್ ಗೆ ನೋಟಿಸ್ ತಲುಪಿಸಲಾಗಿದೆ.[ಮಗನ ಪರವಾಗಿ ಕ್ಷಮೆ ಯಾಚಿಸಿದ ಸಲ್ಮಾನ್ ತಂದೆ ಸಲೀಂ]

Notice sent to Salman Khan; gangrape survivor seeks Rs 10 crore damage

ನಾಲ್ಕು ವರ್ಷಗಳ ಹಿಂದೆ 10 ಮಂದಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅತ್ಯಾಚಾರಿಗಳಿಗೆ ಕೋರ್ಟ್ ನಿಂದ ಜೀವಾವಧಿ ಶಿಕ್ಷೆ ಸಿಕ್ಕಿದೆ. ಆದರೆ, ಮಗಳಿಗೆ ಆದ ದುಃಸ್ಥಿತಿಯನ್ನು ಕಂಡು ಆಕೆಯ ಅಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.[ವಿವಾದಾತ್ಮಕ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ಏನಂತಾರೆ?]

ಸಲ್ಮಾನ್ ಹೇಳಿಕೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಜೂ.23ರಂದು ಕಾನ್ಪುರ, ಲಕ್ನೋ ಕೋರ್ಟ್ ಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More trouble seems to be coming for Bollywood actor Salman Khan as a young woman who was gang-raped by 10 men in Haryana has sent a legal notice to him. actor Salman Khan asking him to apologize over his rape remark. She has sought Rs 10 crore in damages from Salman for belittling rape victims.
Please Wait while comments are loading...