ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎಂಬುದಿಲ್ಲ, ಸೈರಾ ಕೋಟಿಗಟ್ಟಲೇ ಬಾಚುತ್ತಿದೆ"

|
Google Oneindia Kannada News

ಮುಂಬೈ, ಅಕ್ಟೋಬರ್ 13: "ರಜಾದಿನಗಳಲ್ಲಿ ಮೂರು ಸಿನಿಮಾಗಳು ಚೆನ್ನಾಗಿ ಗಳಿಕೆ ಮಾಡಿವೆ. ಸೈರಾ ಕೋಟಿಗಟ್ಟಲೇ ಬಾಚುತ್ತಿದೆ. 3 ಸಿನಿಮಾದಿಂದ ಸುಮಾರು 120 ಕೋಟಿ ರೂ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ, ಹೀಗಾಗಿ ದೇಶದ ಆರ್ಥಿಕತೆ ಉತ್ತಮವಾಗಿದೆ" ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿಶ್ಲೇಷಿಸಿದ್ದು ತಿಳಿದಿರಬಹುದು.

"ದೇಶದ ಆರ್ಥಿಕತೆ ಸದೃಢವಾಗಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ. ಒಂದು ವರ್ಷದಲ್ಲಿ ದೇಶದಲ್ಲಿ 16.3 ಬಿಲಿಯನ್ ಡಾಲರ್ ನಷ್ಟು ಹೂಡಿಕೆಯಾಗಿದೆ. ಅಕ್ಟೋಬರ್ 2ರಂದು ಬಿಡುಗಡೆಯಾಗಿರುವ ಮೂರು ಚಿತ್ರಗಳು ಒಂದೇ ದಿನ 120 ಕೋಟಿ ರೂ. ಗಳಿಸಿದೆ. ಹೀಗಿರುವಾಗ ಆರ್ಥಿಕ ಹಿಂಜರಿತ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ಕುಸಿತ ಕಳೆದ 70 ವರ್ಷಗಳಲ್ಲೇ ಕಂಡಿಲ್ಲ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ಆರ್ಥಿಕ ಕುಸಿತ ಕಳೆದ 70 ವರ್ಷಗಳಲ್ಲೇ ಕಂಡಿಲ್ಲ: ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್

ಇದರ ಜೊತೆಗೆ ಎನ್ಎಸ್ಎಸ್ಒ ವರದಿಯಂತೆ ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಲ್ಲ,ಹಣದುಬ್ಬರ ಪ್ರಮಾಣ ಕಡಿಮೆಯಾಗಿದ್ದು, ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ. ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರದ ವಿರುದ್ಧ ಜನ ತಿರುಗಿಬೀಳುವಂತೆ ಮಾಡುವುದು ಕೆಲವರ ದುರುದ್ದೇಶವಾಗಿದೆ ಎಂದಿದ್ದಾರೆ.

No economic crisis as 3 movies earned Rs 120 crore on day of release: Ravi Shankar Prasad

ಮಹಾರಾಷ್ಟ್ರ ಚುನಾವಣೆ ಪ್ರಚಾರಕ್ಕಾಗಿ ಮುಂಬೈಗೆ ಆಗಮಿಸಿರುವ ರವಿಶಂಕರ್ ಪ್ರಸಾದ್ ಅವರು National Sample Survey Office(NSSO) ನೀಡಿರುವ ಕಾರ್ಮಿಕ ಸಮೀಕ್ಷೆ(ಪಿಎಲ್ ಎಫ್ ಎಸ್) ಮಾಹಿತಿ ತಪ್ಪು ಎಂದಿದ್ದಾರೆ. ಈ ವರದಿಯಂತೆ ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೆ ಅಧಿಕ ಎನ್ನಲಾಗಿತ್ತು.

"ಇದು ಕರಡು ಪ್ರತಿ ಮಾತ್ರ, ಪೂರ್ಣ ವರದಿ ಬಂದಿಲ್ಲ' ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೂಡಾ ಹೇಳಿದ್ದಾರೆ.

ನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣುನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣು

"ಎಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರ, ಮಾಹಿತಿ ಮತ್ತು ತಂತ್ರಜ್ಞಾನ, ಮುದ್ರಾ ಯೋಜನೆ, ವಾಣಿಜ್ಯ ಸೇವಾ ವಿಭಾಗದಲ್ಲಿ ಉತ್ತಮ ಅಭಿವೃದ್ಧಿ ಕಾಣಲಾಗುತ್ತಿದೆ. ಸರ್ಕಾರದಿಂದ ಎಲ್ಲರಿಗೂ ಉದ್ಯೋಗ ನೀಡುವ ಭರವಸೆಯನ್ನು ನಾವಂತೂ ನೀಡಿಲ್ಲ" ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ಸಿನಿಮಾ ಗಳಿಕೆ ಬಗ್ಗೆ ಮಾಧ್ಯಮ ಸಂವಾದದ ವೇಳೆ ನೀಡಿದ್ದ ಹೇಳಿಕೆಗೆ ಭಾನುವಾರದಂದು ಸಚಿವ ರವಿಶಂಕರ್ ಪ್ರಸಾದ್ ಅವರು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದ್ದಾರೆ.

English summary
Union minister Ravi Shankar Prasad on Saturday said three Bollywood movies generating business of Rs 120 crore on the October 2 holiday suggested the "sound economy" even as he dubbed "wrong" the NSSO report which had reportedly pegged unemployment rate at 45-year high in 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X