• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಗುಜರಾತಿಗಳನ್ನು ಮುಂಬೈನಿಂದ ಗುಡಿಸಿ ಎಸೆಯೋಣ'

By Mahesh
|

ಮುಂಬೈ, ನ.6: 'ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು' ಎಂಬ ಚೆನ್ನುಡಿಯಿದೆ. ಬಹುಶಃ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರ ಕಿವಿಗೆ ಈ ಮಾತು ಬಿದ್ದಿಲ್ಲ ಎಂದು ಕಾಣಿಸುತ್ತದೆ. ಮನಕೆ ತೋಚಿದ್ದನ್ನೆಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟರೆ ಅನರ್ಥವಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್ ನಾಯಕ ನಾರಾಯಣ ರಾಣೆ ಅವರ ಕಿರಿಯ ಪುತ್ರ ಕಂಕವಳಿ ಕ್ಷೇತ್ರದ ಶಾಸಕ ನಿತೇಶ್ ರಾಣೆಯೇ ಸಾಕ್ಷಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಗುಜರಾತಿಗಳ ವಿರುದ್ಧ ನಿತೇಶ್ ರಾಣೆ ಮಾಡಿದ್ದ ಟ್ವೀಟ್ ಈಗ ಮರಾಠಿ vs ಗುಜರಾತಿಗಳ ನಡುವಿನ ಸಮರಕ್ಕೆ ನಾಂದಿ ಹಾಡಿದೆ. ಮುಂಬೈನಲ್ಲಿ ಸ್ವಚ್ಛಭಾರತ ಅಭಿಯಾನ ಆರಂಭಿಸಬೇಕು ಮೊದಲಿಗೆ ಮರಾಠಿ ವಿರೋಧಿ ಗುಜ್ಜುಗಳನ್ನು ಗುಡಿಸಿ ಎಸೆಯಬೇಕು ಎಂದು 32 ವರ್ಷ ವಯಸ್ಸಿನ ನಿತೇಶ್ ಅವರು ಬುಧವಾರ ಟ್ವೀಟ್ ಮಾಡಿದ್ದರು.

ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿ ಎಲ್ಲರೂ ರಾಣೆ ವಿರುದ್ಧ ಹರಿಹಾಯ್ದಿದ್ದರು. ಅದರೆ, ಇದರಿಂದ ಪಾಠ ಕಲಿಯದ ರಾಣೆ ಗುರುವಾರ ಮತ್ತೊಮ್ಮೆ ಈ ವಿಷಯದ ಬಗ್ಗೆ ಟ್ವೀಟ್ ಮಾಡಿ, ನನ್ನ ಟ್ವೀಟ್ ನಿಂದ ಯಾಕೆ ಎಷ್ಟು ವಿರೋಧ ವ್ಯಕ್ತಪಡಿಸುತ್ತೀರಾ ಪ್ರತಿನಿತ್ಯ ಗುಜ್ಜುಗಳು ಇದಕ್ಕಿಂತ ಹೆಚ್ಚು ದ್ವೇಷ ಸಂದೇಶಗಳನ್ನು ಕಳಿಸುತ್ತಾರೆ ಎಂದಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲೂ ನಿತೇಶ್ ಅವರು ಗುಜರಾತಿಗಳ ವಿರುದ್ಧ ಹರಿಹಾಯ್ದಿದ್ದರು ಮುಂಬೈನ 36 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳಲ್ಲಿ ಗುಜರಾತಿಗಳೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ. ಮುಂಬೈನ ರಿಯಲ್ ಎಸ್ಟೇಟ್ ಮೇಲೆ ಸಂಪೂರ್ಣ ಅಧಿಕಾರ ಹೊಂದಿದ್ದು ಸ್ಥಳೀಯರಿಗೆ ಮನೆ ಸಿಗುತ್ತಿಲ್ಲ ಎಂದಿದ್ದಾರೆ.

ವೆಜ್ vs ನಾನ್ ವೆಜ್: "Veg skies, veg hospitals, veg housing societies ... soon veg Mumbai! Either Gujjus go back to Gujarat or they turn Mumbai into Gujarat ... Red alert." ಎಂದು ಟ್ವೀಟ್ ಮಾಡಿದ್ದ ನಿತೇಶ್, ನಾವೇನು ಗುಜರಾತಿಗಳ ವಿರೋಧಿಗಳಲ್ಲ, ಅದರೆ, ನಗರದ ಮೇಲೆ ಸ್ಥಳೀಯರು ನಿಯಂತ್ರಣ ಕಳೆದುಕೊಂಡರೆ ಬದುಕುವುದು ಕಷ್ಟ ಎಂದಿದ್ದಾರೆ.

ಪುತ್ರನ ವಾಕ್ ಪ್ರತಾಪದಿಂದ ಹಿರಿಯ ಕಾಂಗ್ರೆಸ್ ನಾಯಕ ನಾರಾಯಣ ರಾಣೆ ಅವರಿಗೂ ಸರಿಯಾದ ಪೆಟ್ಟು ಬಿದ್ದಿದೆ. ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಇದೇ ವಿಷಯವನ್ನು ಕೆರಳಿಸಲು ಹೋದ ಸೀನಿಯರ್ ರಾಣೆ ಅವರಿಗೆ ಸಿಂಧುದರ್ಗ್ ಜಿಲ್ಲೆಯ ಕ್ಷೇತ್ರದಲ್ಲಿ ಹೀನಾಯ ಸೋಲುಂಟಾಗಿದೆ. ಮರಾಠಿಗರ ಹಿತ ಕಾಯುವ ಭರದಲ್ಲಿ ನಾಲಗೆ ಹಿಡಿತ ತಪ್ಪಿ ಮಾತನಾಡಿದ ರಾಣೆ ಬಗ್ಗೆ ಬಿಜೆಪಿಯ ಫಡ್ನವೀಸ್ ಸರ್ಕಾರ ಸೂಕ್ಷ್ಮವಾಗಿ ಗಮನಿಸಿಸುತ್ತಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In remarks that can disturb the social harmony, Nitesh Rane, the younger son of Congress leader Narayan Rane and MLA from Kankavli constituency on Wednesday created a furore as he took to microblogging website Twitter to make an irresponsible remark against Gujaratis staying in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more