ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಅಧಿಕಾರಿ ಸಚಿನ್ ವಾಜೆ ಮನೆಯಿಂದ ಡಿವಿಆರ್ ವಶ: ಎನ್‌ಐಎ ತನಿಖೆ

|
Google Oneindia Kannada News

ಮುಂಬೈ, ಮಾರ್ಚ್ 16: ಮುಕೇಶ್ ಅಂಬಾನಿ ಅವರ ನಿವಾಸದ ಮುಂದೆ ಸ್ಫೋಟಕಗಳನ್ನು ಇರಿಸಿದ ಎಸ್‌ಯುವಿ ಪತ್ತೆಯಾದ ಎರಡು ದಿನಗಳ ಬಳಿಕ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಮನೆಯಿಂದ ಮುಂಬೈ ಅಪರಾಧ ಗುಪ್ತಚರ ಘಟಕವು ಡಿಜಿಟಲ್ ವಿಡಿಯೋ ರೆಕಾರ್ಡರ್‌ಅನ್ನು (ಡಿವಿಆರ್) ವಶಪಡಿಸಿಕೊಂಡಿತ್ತು ಎಂಬುದನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪತ್ತೆಹಚ್ಚಿದೆ. ಈ ಬಗ್ಗೆ ಅದು ತನಿಖೆ ಆರಂಭಿಸಿದೆ.

ಅಂಬಾನಿ ಮನೆ ಮುಂದೆ ಸ್ಕಾರ್ಪಿಯೋ ಕಾರ್‌ನಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಮಾರ್ಚ್ 25ರವರೆಗೂ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ.

16 ವರ್ಷದ ಬಳಿಕ ಸೇವೆಗೆ, 9 ತಿಂಗಳ ಬಳಿಕ ಮತ್ತೆ ಅಮಾನತು!: ಸಚಿನ್ ವಾಜೆಯ ಕುತೂಹಲಕಾರಿ ಕಥೆ!16 ವರ್ಷದ ಬಳಿಕ ಸೇವೆಗೆ, 9 ತಿಂಗಳ ಬಳಿಕ ಮತ್ತೆ ಅಮಾನತು!: ಸಚಿನ್ ವಾಜೆಯ ಕುತೂಹಲಕಾರಿ ಕಥೆ!

ವಾಜೆ ವಾಸಿಸುತ್ತಿದ್ದ ಥಾಣೆಯಲ್ಲಿನ ಕಟ್ಟಡದಿಂದ ಡಿವಿಆರ್ ಅನ್ನು ಸ್ವಾಧೀನಪಡಿಸಿಕೊಳ್ಳುವಂತೆ ಫೆಬ್ರವರಿ 27ರಂದು ಸಿಐಯುಗೆ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ರಿಯಾಜ್ ಖಾಜಿ ಬರೆದಿದ್ದ ಪತ್ರ ಎನ್‌ಐಎಗೆ ಸಿಕ್ಕಿದೆ. ಫೆಬ್ರವರಿ 27ರಂದು ವಾಜೆ ಮನೆಗೆ ಬಂದಿದ್ದ ನಾಲ್ವರು ಪೊಲೀಸರು, ಕಟ್ಟಡದ ಕಾರ್ಯದರ್ಶಿಗೆ ಪತ್ರ ನೀಡಿ, ತನಿಖೆಗಾಗಿ ಸಿಸಿಟಿವಿ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದರು.

NIA Probes On DVR And CCTV Picked by CIU From Sachin Vaze House

ಬಾಂಬ್ ಬೆದರಿಕೆ ಪ್ರಕರಣವನ್ನು ಸಿಐಯು ತನಿಖೆ ಮಾಡುತ್ತಿದ್ದು, ಹೆಚ್ಚಿನ ತನಿಖೆಗೆ ಸಿಟಿಟಿವಿ ಮತ್ತು ಡಿವಿಆರ್ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಲಾಗಿತ್ತು. ಈ ಕಟ್ಟಡದಿಂದ ಸಿಐಯು ಎರಡು ಡಿವಿಆರ್‌ಗಳನ್ನು ಕೊಂಡೊಯ್ದಿತ್ತು ಎನ್ನಲಾಗಿದೆ. ಸಚಿನ್ ವಾಜೆ ಅವರು ಫೆ. 25ರವರೆಗೂ ತಮ್ಮ ಕಟ್ಟಡದಲ್ಲಿಯೇ ಎಸ್‌ಯುವಿಯನ್ನು ಇರಿಸಿಕೊಂಡಿರಬಹುದು ಎಂಬ ಅನುಮಾನ ಎನ್‌ಐಎಗೆ ವ್ಯಕ್ತವಾಗಿದೆ. ಸಿಐಯುದ ಎಪಿಐ ರಿಯಾಜ್ ಖಾಜಿ ಅವರನ್ನು ಕೂಡ ಎನ್‌ಐಎ ವಿಚಾರಣೆಗೆ ಒಳಪಡಿಸಿದೆ.

ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!

ಎಸ್‌ಯುವಿಯ ಮಾಲೀಕ ಹಿರೇನ್ ಮನ್ಸುಖ್ ಅವರನ್ನು ಸಚಿನ್ ವಾಜೆ ಅವರೇ ಹತ್ಯೆ ಮಾಡಿದ್ದಾರೆ ಎಂದು ಮನ್ಸುಖ್ ಪತ್ನಿ ಆರೋಪಿಸಿದ್ದರು. ಎನ್‌ಐಎ ಬಂಧನದಲ್ಲಿರುವ ವಾಜೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

English summary
Mukesh Ambani Bomb Scare: NIA has started probe why Sachin Vaze's Mumbai police unit picked up CCTV and DVR from his residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X